Monday, November 25, 2024
ಕುಂದಾಪುರ

ಮೇ.1ರಿಂದ 10ರ ತನಕ ಕುಂದಾಪುರ ಮತ್ತು ಮಂಗಳೂರಿನಲ್ಲಿ ಕ್ರೀಡಾ ಹಬ್ಬ ನಡೆಯಲಿದೆ ; ಟಾರ್ಪೆಡೊಸ್ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಗೌತಮ್ ಶೆಟ್ಟಿ-ಕಹಳೆ ನ್ಯೂಸ್

ಕುಂದಾಪುರ : ಕರ್ನಾಟಕ ಕ್ರೀಡಾ ಇತಿಹಾಸದಲ್ಲೇ ಅಪೂರ್ವವೆನಿಸಿರುವ ಕ್ರೀಡಾ ಹಬ್ಬವೊಂದನ್ನು ಆಯೋಜಿಸಲು ರಾಜ್ಯದ ಅತ್ಯಂತ ಜನಪ್ರಿಯ ಸ್ಪೋಟ್ರ್ಸ್ ಕ್ಲಬ್‍ಗಳಲ್ಲಿ ಒಂದಾಗಿರುವ ಟಾರ್ಪೆಡೊಸ್ ಸ್ಪೋಟ್ರ್ಸ್ ಕ್ಲಬ್ ನೇತೃತ್ವದಲ್ಲಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ 10 ದಿನಗಳ ಕಾಲ ಹೊನಲು ಬೆಳಕಿನ ಕ್ರೀಡಾ ಹಬ್ಬವನ್ನು ಆಯೋಜಿಸಿದೆ. ಇದೇ ಮೇ.1ರಿಂದ 10ರ ತನಕ ಕುಂದಾಪುರ ಮತ್ತು ಮಂಗಳೂರಿನಲ್ಲಿ ಕ್ರೀಡಾ ಹಬ್ಬ ನಡೆಯಲಿದೆ ಎಂದು ಟಾರ್ಪೆಡೊಸ್ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಗೌತಮ್ ಶೆಟ್ಟಿ ತಿಳಿಸಿದ್ದಾರೆ.


ಕುಂದಾಪುರ ಪ್ರೆಸ್‍ಕ್ಲಬ್‍ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ಸಾಂಕ್ರಮಿಕದಿಂದ ಜಗತ್ತೇ ಚೈತನ್ಯ ಕಳೆದುಕೊಂಡಂತಾಗಿದೆ. ಕ್ರೀಡಾಕೂಟಗಳು ನಿಂತು ಹೋಗಿ ಕ್ರೀಡಾಪಟುಗಳ ಸಾಧನೆಗೂ ಅಡ್ಡಿಯಾಗಿತ್ತು. ಕ್ರೀಡಾಪಟುಗಳಲ್ಲಿ ಮತ್ತೆ ಹೊಸ ಚೈತನ್ಯ, ಉಲ್ಲಾಸ ತುಂಬುವುದು ಈ ಕ್ರೀಡಾ ಹಬ್ಬದ ಉದ್ದೇಶವಾಗಿದೆ. ಕ್ರಿಕೆಟ್ (ಟೆನಿಸ್ ಮತ್ತು ಲೆದರ್ ಬಾಲ್), 40 ವರ್ಷಕ್ಕೂ ಮೇಲ್ಪಟ್ಟವರಿಗಾಗಿ ಪ್ರತ್ಯೇಕ ಟೆನಿಸ್ ಬಾಲ್ ಕ್ರಿಕೆಟ್, ಕುತೂಹಲಕಾರಿ ಬಾಕ್ಸ್ ಕ್ರಿಕೆಟ್, ಫಿಡೆ ರೇಟಿಂಗ್ ಚೆಸ್, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್ ಮತ್ತು ಮಿನಿ ಫುಟ್ಬಾಲ್ ಕ್ರೀಡೆಗಳನ್ನು ಮಂಗಳೂರು, ಸುರತ್ಕಲ್, ಹಳೆಯಂಗಡಿ, ಕುಂದಾಪುರ ಮತ್ತು ಕೊರವಡಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಪ್ರತಿಯೊಂದು ಕ್ರೀಡೆಗೂ, ಪ್ರತಿಯೊಂದು ಹಂತದಲ್ಲೂ ನಗದು ಬಹುಮಾನವಿರುತ್ತದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ವಸತಿ, ಆಹಾರ ಸೌಲಭ್ಯ ಇರುತ್ತದೆ. ಪ್ರವೇಶ ಶುಲ್ಕ ರೂ. 1,000 ಆಗಿರುತ್ತದೆ ಎಂದರು. ಲೆದರ್ ಬಾಲ್ ಇರಲಿ ಟೆನಿಸ್ ಬಾಲ್ ಕ್ರಿಕೆಟ್ ಇರಲಿ ಅಲ್ಲೊಂದು ಹೊಸತನ ರೂಪಿಸುವುದು ಟಾರ್ಪೆಡೋಸ್ ಸಂಸ್ಕøತಿ. ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಹೊಸ ಮಾದರಿಯೊಂದನ್ನು ಜಾರಿಗೆ ತರಲಾಗಿದೆ. ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ರಾಜ್ಯದಾದ್ಯಂತ ನಡೆಯುತ್ತಿರುತ್ತದೆ. ಆದರೆ ಕೆಲವು ಆಟಗಾರರು ಮತ್ತು ಕೆಲವೇ ಕೆಲವು ತಂಡಗಳು ಮಾತ್ರ ಮಿಂಚುತ್ತಿವೆ. ಬಲಿಷ್ಠ ಆಟಗಾರರು ಒಂದೆರಡು ತಂಡಗಳಲ್ಲೇ ಇರುವುದು, ಅವೆರಡು ತಂಡಗಳೇ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸುವುದು ಸಾಮಾನ್ಯ. ಸಿಂಗಲ್, ಡಬಲ್ ಮತ್ತು ಪ್ಲೇಸ್ಮೆಂಟ್ ಇವುಗಳು ಇತ್ತೀಚಿನ ಕ್ರಿಕೆಟ್ ನಲ್ಲಿ ಮಾಯವಾಗುತ್ತಿದೆ. ಇವುಗಳನ್ನು ಮತ್ತೆ ಜನಪ್ರಿಯಗೊಳಿಸುವುದೇ ಈ ಟೂರ್ನಿಯ ಉದ್ದೇಶವಾಗಿರುತ್ತದೆ. ಆಡುವ 11 ಆಟಗಾರರನ್ನು ಆಯ್ಕೆ ಮಾಡುವ ತಲೆನೋವು ಕೂಡ ತಂಡದ ಮಾಲೀಕರಿಗೆ ಇರುವುದಿಲ್ಲ. ಬ್ಯಾಟಿಂಗ್ ಮತ್ತು ಬೌಲಿಂಗ್ ಬಲ್ಲ 11 ಆಟಗಾರರು ಪ್ರತಿಯೊಂದು ತಂಡದಲ್ಲೂ ಆಡುತ್ತಾರೆ. ಈ ಟೂರ್ನಿಯು ಪ್ರತಿಯೊಬ್ಬ ಆಟಗಾರನಿಗೂ ಪ್ರಾಮುಖ್ಯತೆ ಮತ್ತು ಅವಕಾಶ ಕಲ್ಪಿಸುವ ಉದ್ದೇಶದಿಂದ ನಡೆಸಲಾಗುತ್ತಿದೆ. 1,000 ರೂ. ಸಂದಾಯ ಮಾಡಿ ಆಟಗಾರರು ತಮ್ಮ ಹೆಸರನ್ನು ನೋದಾವಣೆ ಮಾಡಿಕೊಳ್ಳಬಹುದು. ಈ ವಿಭಾಗದಲ್ಲಿ ಸ್ಪರ್ಧಿಸುವವರು ವೈಯಕ್ತಿಕವಾಗಿ ನೋದಾವಣೆ ಮಾಡಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ಈ ದೂರವಾಣಿ 9845121498 ಸಂಪರ್ಕಿಸಬಹುದು ಎಂದರು. ಹಾಗೆಯೇ ಸುದ್ಧಿಗೋಷ್ಠಿಯಲ್ಲಿ ಟಾರ್ಪೆಡೊಸ್ ಸ್ಪೋಟ್ರ್ಸ್ ಕ್ಲಬ್ ಉಪಾಧ್ಯಕ್ಷ ರಮೇಶ ಶೆಟ್ಟಿ, ನಿರ್ದೇಶಕ ನಿತ್ಯಾನಂದ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು