Recent Posts

Sunday, January 19, 2025
ರಾಜಕೀಯ

ಮಂಗಳೂರು ದಕ್ಷಿಣ ಅಭ್ಯರ್ಥಿಯಾಗಿ ಬಿಜೆಪಿಯಿಂದ ಬ್ರಿಜೇಶ್‌ ಚೌಟ ಹೆಸರು ಅಂತಿಮ ? – ಕಹಳೆ ನ್ಯೂಸ್

ಮಂಗಳೂರು, ಏ 12 : ಈ ಬಾರಿಯ ಕರ್ನಾಟಕ ಚುನಾವಣೆ ಈಗಾಗಲೇ ಭಾರೀ ಕುತೂಹಲ ಕೆರಳಿಸಿದ್ದು, ಇಡೀ ದೇಶದ ಚಿತ್ತ ಕರುನಾಡಿನತ್ತ ಹೊರಳುವಂತೆ ಮಾಡಿದೆ. ಭಾರತೀಯ ಜನತಾ ಪಕ್ಷ, ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳಕ್ಕೆ ಈ ಚುನಾವಣೆ ಭಾರೀ ಮಹತ್ವದ್ದಾಗಿದೆ. ದಕ್ಷಿಣದಲ್ಲಿ ಮತ್ತೆ ಬಾಗಿಲು ತೆರೆಯಲು ಬಿಜೆಪಿ ಹವಣಿಸುತ್ತಿದ್ದರೆ, ಸಿಕ್ಕಿರುವ ಆಡಳಿತವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಸೆಣಸಾಡಬೇಕಿದೆ. ಇವರಿಬ್ಬರ ಕಿತ್ತಾಟದ ಲಾಭವನ್ನು ಪಡೆಯಲು ಜೆಡಿಎಸ್ ಹೊಂಚುಹಾಕಿ ಕುಳಿತಿದೆ. ಮೇ 12 ರಂದು ನಡೆಯುವ ಚುನಾವಣಾ ಕದನವನ್ನು ಎದುರಿಸಲು ಎಲ್ಲಾ ಪಕ್ಷಗಳು ಸಮರ್ಥ ಅಭ್ಯರ್ಥಿಗಳಿಗೆ ಟಿಕೆಟ್ ಹಂಚುವ ಕೆಲಸದಲ್ಲಿ ನಿರತರಾಗಿದ್ದಾರೆ.

ಬಿಜೆಪಿ ಪಕ್ಷ ಕೆಲ ದಿನಗಳ ಹಿಂದೆ 224 ಕ್ಷೇತ್ರಗಳಲ್ಲಿ 72 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದು, ಕರಾವಳಿ ಜಿಲ್ಲೆಯ ಸುಳ್ಯ ಕ್ಷೇತ್ರದ ಎಸ್‌. ಅಂಗಾರ, ಕಾರ್ಕಳದ ಸುನೀಲ್‌ಕುಮಾರ್‌, ಕುಂದಾಪುರಕ್ಕೆ ಹಾಲಾಡಿ ಶ್ರೀನಿವಾಸ್‌ ಶೆಟ್ಟಿ ಅವರಿಗೆ ಮಾತ್ರ ಮೊದಲ ಪಟ್ಟಿಯಲ್ಲಿ ಅವಕಾಶ ನೀಡಲಾಗಿದೆ. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ಗಾಗಿ ಹೆಚ್ಚಿನ ಪೈಪೋಟಿ ಕಂಡು ಬರುತ್ತಿದ್ದು, ಗೌಡ ಸಾರಸ್ವತ ಬ್ರಾಹ್ಮಣರಾದ ಬದ್ರಿನಾಥ ಕಾಮತ್‌ ಹಾಗೂ ಡಿ.ವೇದವ್ಯಾಸ್‌ ಕಾಮತ್‌, ಕ್ಯಾ. ಬ್ರಿಜೇಶ್‌ ಚೌಟ, ಜಿಲ್ಲಾ ವಕ್ತಾರ ಜಿತೇಂದ್ರ ಕೊಟ್ಟಾರಿ ಹೆಸರು ಕೇಳಿಬಂದಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಬಿಜೆಪಿಯ ನಂಬಲಾರ್ಹ ಮೂಲಗಳ ಪ್ರಕಾರ ಮಂಗಳೂರು ದಕ್ಷಿಣ ಕ್ಷೇತ್ರದ , ಬಿಜೆಪಿ ಅಭ್ಯರ್ಥಿಯಾಗಿ ಕ್ಯಾ. ಬ್ರಿಜೇಶ್‌ ಚೌಟ ಅವರ ಹೆಸರನ್ನು ಬಹುತೇಕ ಅಂತಿಮಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಅವರು ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಲೋಸಿಯಸ್ ಕಾಲೇಜಿನಲ್ಲಿ ಪದವಿ ವಿದ್ಯಾಭ್ಯಾಸ , ಐ ಎ ಎಂ ಇಂದೋರ್ ನಲ್ಲಿ ಬಿಸಿನೆಸ್ ಮ್ಯಾನೇಜ್ ಮೆಂಟ್ ಉನ್ನತ ಪದವಿ ಪಡೆದ ಇವರು ಭಾರತೀಯ ಸೇನೆಯಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಸೇನಾ ಭದ್ರತಾ ವಿಭಾಗ , ಕಾರ್ಯನಿರ್ವಹಾಧಿಕಾರಿ, ಅಡಳಿತ ವಿಭಾಗದಲ್ಲೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕರ್ನಾಟಕದಲ್ಲಿ ಸೇನಾ ಹಿನ್ನಲೆಯುಳ್ಳ ಬಿಜೆಪಿಯ ಏಕೈಕ ಅಭ್ಯರ್ಥಿಯಾಗಿದ್ದಾರೆ. ಆರ್ ಎಸ್ ಎಸ್ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಇವರು ಕಂಬಳ ಕ್ರೀಡೆ ಆಯೋಜನೆಯ ಮೂಲಕವು ಹೆಸರುವಾಸಿಯಾಗಿದ್ದಾರೆ. ಇವರು ಈ ಹಿಂದೆ ಮಹಾರಾಷ್ಟ್ರ, ದೆಹಲಿ, ಕೇರಳದಲ್ಲಿ ಬಿಜೆಪಿಯ ಚುನಾವಣಾ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.