Tuesday, January 21, 2025
ಹೆಚ್ಚಿನ ಸುದ್ದಿ

“ಸೂರ್ಯ – ಚಂದ್ರ” ಜೋಡುಕರೆ ಕಂಬಳದಲ್ಲಿ ಇರುವೈಲು ಪಾಣಿಲ ಚಾಂಪಿಯನ್; ಮತ್ತೆ ಮಿಂಚಿದ ಶ್ರೀನಿವಾಸ ಗೌಡ- ಕಹಳೆ ನ್ಯೂಸ್

ವೇಣೂರು : ಬೆಳ್ತಂಗಡಿ ತಾಲೂಕಿನ ವೇಣೂರು ಪೆರ್ಮುಡದಲ್ಲಿ ನಡೆದ “ಸೂರ್ಯ – ಚಂದ್ರ” ಜೋಡುಕರೆ ಬಯಲು ಕಂಬಳದಲ್ಲಿ ಹೊಸ ದಾಖಲೆ ಬರೆದ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ಮೂರು ‘ಪ್ರಥಮ’ ಪದಕ ಪಡೆದು ಮಿಂಚಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

28ನೇ ವರ್ಷದ ವೇಣೂರು ಪೆರ್ಮುಡ “ಸೂರ್ಯ – ಚಂದ್ರ” ಜೋಡುಕರೆ ಕಂಬಳದಲ್ಲಿ ಒಟ್ಟು 200 ಜೊತೆ ಕೋಣಗಳು ಭಾಗವಹಿಸಿದ್ದವು. ಮೂಡುಬಿದಿರೆ ಮತ್ತು ಮಿಯ್ಯಾರು ಹೊರತುಪಡಿಸಿದರೆ ಅತೀ ಹೆಚ್ಚು ಕೋಣಗಳು ಭಾಗವಹಿಸಿದ ಕೂಟ ಇದಾಗಿತ್ತು. ನೇಗಿಲು ಹಿರಿಯ ವಿಭಾಗದಲ್ಲಿ ಇರುವೈಲು ಪಾಣಿಲ ಬಾಡ ಪೂಜಾರಿಯವರ ಕೋಣಗಳು ಸರಣಿ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದವು. ಕಳೆದೊಂದು ದಶಕದಿಂದ ಬೋಳದಗುತ್ತು ಸತೀಶ್ ಶೆಟ್ಟಿ ಮತ್ತು ಇರುವೈಲು ಪಾಣಿಲ ನೇಗಿಲು ಹಿರಿಯ ವಿಭಾಗದಲ್ಲಿ ಅಧಿಪತ್ಯ ಸಾಧಿಸಿದೆ. ಕಳೆದ ಸತತ ಆರು ವರ್ಷಗಳಿಂದ ಬೋಳದಗುತ್ತು ಚಾಂಪಿಯನ್ ಪಟ್ಟ ಪಡೆಯುತ್ತಿತ್ತು. ಆದರೆ ವೇಣೂರು ಕಂಬಳದಲ್ಲಿ ಸೆಮಿಫೈನಲ್ ವಿಭಾಗದಲ್ಲಿ ಬೋಳದಗುತ್ತು ಸೋಲನುಭವಿಸಿದ ಕಾರಣ ಇರುವೈಲು ಪಾಣಿಲ ಬಾಡ ಪೂಜಾರಿಯವರ ಕೋಣಗಳು ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ.