Tuesday, January 21, 2025
ಹೆಚ್ಚಿನ ಸುದ್ದಿ

ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ನವಜಾತು ಶಿಶು ಕೊಲೆ ; ಸ್ಥಳದಲ್ಲಿ ಬ್ಲೇಡ್, ಕುಡಗೋಲು ಸೇರಿ ಹಲವು ವಸ್ತುಗಳು ಪತ್ತೆ-ಕಹಳೆ ನ್ಯೂಸ್

ಗದಗ : ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಆಗ ತಾನೇ ಹುಟ್ಟಿದ ನವಜಾತ ಶಿಶುವನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನವಜಾತ ಶಿಶುವನ್ನು ಕೊಂದು ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಹಸುಗೂಸಿನ ಶವ ನೋಡಲು ಸಾಕಷ್ಟು ಪ್ರಮಾಣದಲ್ಲಿ ಜನ ಸೇರಿದ್ದರು. ಸ್ಥಳದಲ್ಲಿ ಬ್ಲೇಡ್, ಕುಡ ಗೋಲು ಸೇರಿ ಹಲವು ವಸ್ತುಗಳ ಪತ್ತೆಯಾಗಿದೆ.

ಅಲ್ಲದೇ ಮಗುವಿನ ಮುಖದ ಮೇಲೆ ಕೆಂಪು ಗಾಯವಾಗಿದ್ದು, ಸ್ಥಳೀಯರು ಕಿರಾತಕರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇನ್ನೂ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಪ್ರಕರಣದಂತೆ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.