Tuesday, January 21, 2025
ಬೆಳ್ತಂಗಡಿ

ತನ್ನ ಸ್ವಂತ ಕಚೇರಿಯ ಉದ್ಘಾಟನೆಗೆಂದು ತೆರಳುತ್ತಿದ್ದ ಯುವಕ ರಸ್ತೆ ಅಪಘಾತದಲ್ಲಿ ಸಾವು-ಕಹಳೆ ನ್ಯೂಸ್

ಬೆಳ್ತಂಗಡಿ : ಮದ್ದಡ್ಕ ಸಮೀಪ ತನ್ನ ಸ್ವಂತ ಕಚೇರಿಯ ಉದ್ಘಾಟನೆಗೆಂದು ತೆರಳುತ್ತಿದ್ದ ಯುವಕ ಮಾಲಾಡಿ ಸಮೀಪ ಅರ್ಕುಲ ತಿರುವಿನಲ್ಲಿ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತ ಯುವಕನನ್ನು ಬಂಟ್ವಾಳ ತಾಲೂಕಿನ ಮದ್ದ ನಿವಾಸಿ 28ವರ್ಷದ ಮಾಝಿನ್ ಎಂದು ಗುರುತಿಸಲಾಗಿದೆ. ಸ್ಥಳೀಯರು ಯವಕನನ್ನು ಕೂಡಲೇ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದರು, ಯುವಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಮಾಝಿನ್ ಎಂಜಿನಿಯರ್ ಆಗಿದ್ದು, ಮದ್ದಡ್ಕದಲ್ಲಿ ಕಚೇರಿಯ ಉದ್ಘಾಟನೆಗೆ ತೆರಲುತ್ತಿದ್ದ ವೇಳೆಯಲ್ಲಿ ಮಾಲಾಡಿ ಬಳಿ ಅರ್ತಿಲ ತಿರುವಿನಲ್ಲಿ ಯಾವುದೋ ಅಪರಿಚಿತ ವಾಹನ ಢಿಕ್ಕಿ ಹೊಡೆದಿರುವ ಸಾಧ್ಯತೆ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು