Tuesday, January 21, 2025
ಬಂಟ್ವಾಳ

ಪಂಜಿಕಲ್ಲು ಬಾಲೇಶ್ವರ ಗರಡಿ ಬಳಿ ಕೃಷಿ ವಸ್ತು ಪ್ರದರ್ಶನ ಮತ್ತು ಕೃಷಿಕರ ಜಾಗೃತಿ ಸಮಾವೇಶ-ಕಹಳೆ ನ್ಯೂಸ್

ಬಂಟ್ವಾಳ : ಉಚಿತ ಅಕ್ಕಿ ವಿತರಣೆಗೆ ಬದಲಾಗಿ ಶಾಶ್ವತ ಆಹಾರ ಭದ್ರತೆ ನೀಡುವ ಭತ್ತದ ಬೇಸಾಯಕ್ಕೆ ಯುವಜನತೆ ಸೆಳೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಪ್ರಶಸ್ತಿ ವಿಜೇತ ಭತ್ತದ ತಳಿ ಸಂರಕ್ಷಕ ಬಿ.ಕೆ.ದೇವರಾವ್ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಲ್ಲಿನ ಪಂಜಿಕಲ್ಲು ಬಾಲೇಶ್ವರ ಗರಡಿ ಬಳಿ ನೇತ್ರಾವತಿ ಕೃಷಿಕರ ಅಭಿವೃದ್ಧಿ ಸಂಘಗಳ ಒಕ್ಕೂಟ ಮತ್ತು ಕೈಕಂಬ ದಿಶಾ ಟ್ರಸ್ಟ್ ವತಿಯಿಂದ ಭಾನುವಾರ ಏರ್ಪಡಿಸಿದ್ದ ಕೃಷಿ ವಸ್ತು ಪ್ರದರ್ಶನ ಮತ್ತು ಕೃಷಿಕರ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಸಾಧಕ ಕೃಷಿಕರನ್ನು ಸನ್ಮಾನಿಸಿದರು. ಯುವ ಪೀಳಿಗೆ ಪ್ರತಿಭಾ ಪಲಾಯನ ತಡೆದು ಲಾಭದಾಯಕ ಕೃಷಿ ಜೊತೆಗೆ ಹೈನುಗಾರಿಕೆ ಮತ್ತಿತರ ಪರ್ಯಾಯ ಕೃಷಿಗೆ ಒತ್ತು ನೀಡಬೇಕು ಎಂದರು. ಒಕ್ಕೂಟ ಅಧ್ಯಕ್ಷ ಹರ್ಷೇಂದ್ರ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಧಿಕಾರಿಗಳು ಅವರ ಕಚೇರಿಗೆ ಸೀಮಿತವಾಗದೆ ಗ್ರಾಮೀಣ ಕೃಷಿಕರ ಜೊತೆ ಸ್ಪಂದಿಸಬೇಕು ಎಂದರು. ಇದೇ ವೇಳೆ ಸಾಧಕ ಕೃಷಿಕರಾದ ಗಣೇಶ ಕುಕ್ಕಿಲ, ಮುಂಡಪ್ಪ ಭಂಡಾರಿ ಅಮ್ಮುಂಜೆ, ಜನಾರ್ದನ ಕರ್ಪೆ, ಮೇಬಲ್ ಡಿಸಿಲ್ವ, ವಿಲ್ಮಪ್ರಿಯ ಅಲ್ಬುಕರ್ಕ್, ಆಲ್ವಿನ್ ಡಿಸೋಜ, ಶ್ರೀನಿವಾಸ ಐತಾಳ್ ಇವರನ್ನು ಶಾಸಕರು ಸನ್ಮಾನಿಸಿದರು. ಪಂಜಿಕಲ್ಲು ಗ್ರಾ.ಪಂ.ಅಧ್ಯಕ್ಷ ಪಿ.ಸಂಜೀವ ಪೂಜಾರಿ ಕೃಷಿ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ತಹಶೀಲ್ದಾರ್ ರಶ್ಮಿ ಎಸ್. ಆರ್., ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಜೋ.ಪ್ರದೀಪ್ ಡಿಸೋಜ, ಸಹಾಯಕ ಕೃಷಿ ನಿರ್ದೇಶಕಿ ಪ್ರೇಮ ಡಿ.ಕಾಂಬ್ಳೆ, ದಿಶಾ ಟ್ರಸ್ಟಿನ ಅಧ್ಯಕ್ಷೆ ಡಾ.ಐರಿನ್ ವೇಗಸ್ ಶುಭ ಹಾರೈಸಿದರು. ಬಾಲೇಶ್ವರ ಗರಡಿ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಕುಮಾರ್ ಜೈನ್, ಒಕ್ಕೂಟ ಉಪಾಧ್ಯಕ್ಷೆ ರೂಪ ಎಲ್.ಶೆಟ್ಟಿ ಅರಳ, ಕಾರ್ಯದರ್ಶಿ ತಿಮ್ಮಪ್ಪ ಪೂಜಾರಿ ಕುಕ್ಕಿಪಾಡಿ, ಕೋಶಾಧಿಕಾರಿ ಸಿಲ್ವೆಸ್ಟರ್ ಡಿಸೋಜ, ಜೊತೆ ಕಾರ್ಯದರ್ಶಿ ಗೀತಾ ಕಿನ್ನಿಗುಡ್ಡೆ, ಸಂಯೋಜಕ ಹೆನ್ರಿ ವಾಲ್ಟರ್, ಮೇಲ್ವಿಚಾರಕ ರುದೇಶ್ ಕರ್ಪೆ, ರಾಘವೇಂದ್ರ ಕುರುಡಾಡಿ ಮತ್ತಿತರರು ಇದ್ದರು. ಕೃಷಿಕ ದೇವಪ್ಪ ಕುಲಾಲ್ ಸ್ವಾಗತಿಸಿ, ಪ್ರಾದೇಶಿಕ ಅಧಿಕಾರಿ ಇಮ್ಯಾನ್ಯುಯೆಲ್ ಪ್ರಾಸ್ತಾವಿಕ ಮಾತನಾಡಿದರು. ಗೋಪಾಲಕೃಷ್ಣ ವಂದಿಸಿ, ರಾಜೀವ ಕಕ್ಯಪದವು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮ ಬಳಿಕ ಅಡಿಕೆ ತೋಟ ನಿರ್ವಹಣೆ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಮಣ್ಣು, ನೀರು, ಜೈವಿಕ ಸ್ವತ್ತು ಸಂರಕ್ಷಣೆ, ಭತ್ತದ ಬೇಸಾಯ ಮತ್ತು ತರಕಾರಿ ಕೃಷಿ ಅಂತರ್ಜಲ ವೃದ್ಧಿಯಲ್ಲಿ ಕಟ್ಟಗಳ ಮಹತ್ವ, ಸಾವಯವ ವಿಧಾನದಲ್ಲಿ ತರಕಾರಿ ಕೃಷಿ ವಿಚಾರ ಗೋಷ್ಠಿ ನಡೆಯಿತು.