Friday, September 20, 2024
ವಾಣಿಜ್ಯ

ಪ್ರಗತಿ ಸ್ಟಡಿ ಸೆಂಟರ್ ನ “ANSWER” 2ನೇ ವರ್ಷಕ್ಕೆ ಪಾದಾರ್ಪಣೆ.

ಪುತ್ತೂರು: ಪ್ರಗತಿ ಸ್ಟಡಿ ಸೆಂಟರ್ ನ ದ್ವಿತೀಯ ವರ್ಷದ ANSWER ತರಗತಿಯು ಎಪ್ರಿಲ್ 12 ಗುರುವಾರದಿಂದ ಪ್ರಾರಂಭವಾಯಿತು. ಪುತ್ತೂರಿನ ಹೃದಯ ಭಾಗದಲ್ಲಿರುವ ಧರ್ಮಸ್ಥಳ ಬಿಲ್ಡಿಂಗ್‍ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಎಜ್ಯುಕೇಶನಲ್ ಫೌಂಡೇಶನ್(ರಿ)ಪುತ್ತೂರು ಇದರ ಅಧೀನಕ್ಕೆ ಒಳಪಟ್ಟಿರುವ ಪ್ರಗತಿ ಸ್ಟಡಿ ಸೆಂಟರ್‍ನಲ್ಲಿ ತರಗತಿಗಳು ನಡೆಯಲಿವೆ.

ದಿನೇದಿನೇ ಜಗತ್ತು ಆಧುನಿಕತೆಯನ್ನು ಅರಸುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ವಿವಿಧ ಶೈಲಿಯ ವಿಧಾನಗಳಲ್ಲಿ ನಾವೀಣ್ಯತೆಯನ್ನು ಪಡೆದುಕೊಳ್ಳುತ್ತಿದೆ. ಸ್ವಾಮೀ ವಿವೇಕಾನಂದರು ಹೇಳುವಂತೆ ಶಿಕ್ಷಣವೆಂದರೆ ನಮ್ಮಲ್ಲಿ ಮೊದಲೇ ಅಡಕವಾಗಿರುವ ಪ್ರತಿಭೆಯನ್ನು ಪ್ರಕಾಶಗೊಳಿಸುವುದು ಎಂದು. ಅಂತೆಯೇ ಇಂದಿನ ಶಿಕ್ಷಣದ ಗುಣಮಟ್ಟವು ದಿನೇದಿನೇ ಕೆಳಕ್ಕಿಳಿಯುತ್ತಿದ್ದು ಶಿಕ್ಷಣ ನೀತಿಯ ಪ್ರಕಾರ ಇಂದಿನ ವಿದ್ಯಾರ್ಥಿಗಳನ್ನು ಒಂದರಿಂದ 9ನೇ ತರಗತಿಯವರೆಗೆ ಉತ್ತೀರ್ಣಗೊಳಿಸುತ್ತಿರುವುದು ವಿಷಾದವೇ ಸರಿ. ಈ ಪರಿಣಾಮವಾಗಿ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಮತ್ತು ಕನಿಷ್ಟ ಜ್ಞಾನವನ್ನು ಹೊಂದುವ ಸಾಮಥ್ರ್ಯ ಕುಂದುತ್ತಿದೆ. ಇವರು ಮುಂದಿನ ಭವಿಷ್ಯದಲ್ಲಿ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಯಿದೆ.

ಹೀಗೆ ಮೂಲಭೂತ ಅಂಶಗಳ ಪರಿಜ್ಞಾನವೇ ಇಲ್ಲದೇ ವಿದ್ಯಾರ್ಥಿಗಳ ಶಿಕ್ಷಣಕ್ಕೊಂದು ತಲಪಾಯ ಹಾಕುವ ನಿಟ್ಟಿನಲ್ಲಿ ಪ್ರಗತಿ ವಿದ್ಯಾಸಂಸ್ಥೆಯ ಹೊಸದೊಂದು ವಿನೂತನ ಪ್ರಯತ್ನಕ್ಕೆ ಅಣಿಯಾಗಿದ್ದು 2017ರಲ್ಲಿ ಇದೀಗ 2ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು ವಿದ್ಯಾರ್ಥಿಗಳ ಬದುಕಿಗೆ ಹೊಸ ಕೈಗನ್ನಡಿಯಾಗಿದ್ದು ANSWER ಹೆಸರೇ ಹೇಳುವಂತೆ ಆಸಕ್ತಿ, ಜ್ಞಾನ, ಸೃಜನಶೀಲತೆ ಅಭ್ಯಾಸ ಕೌಶಲ್ಯಕ್ಕೆ ದಾರೀದೀಪ. ಅಲ್ಲದೇ ಇದರಲ್ಲಿ ತಾರ್ಕಿಕ ಗುಣ ಮತ್ತು ಪ್ರಶ್ನಿಸುವ ಕೌಶಲ್ಯ ಪ್ರಸ್ತುತಪಡಿಸುವುದರಿಂದ ವಿಶೇಷವಾಗಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಲ್ಲಿ ಭವಿಷ್ಯಕ್ಕೆ ನೂತನ ದಾರಿಗೆ ಸಾಧ್ಯವಾಗುತ್ತದೆ. ಈ ಶ್ರಮದ ಹಿಂದಿರುವುದು ವಿದ್ಯಾರ್ಥಿಗಳ ಒಳಿತು, ಸಮಯ ಮತ್ತು ಬೇಸಿಗೆ ರಜೆಯ ಸದ್ಭಳಕೆ.
ಎಲ್ಲಾ ದರ್ಜೆಯ ವಿದ್ಯಾರ್ಥಿಗಳೊಂದಿಗೆ ಕಳೆದ 11 ವರ್ಷಗಳಿಂದ ಒಡನಾಟವು ಅವರ ನ್ಯೂನತೆಗಳನ್ನು ಗುರುತಿಸಲು ಸಹಕಾರಿಯಾಯಿತು.

ನಮ್ಮ ANSWER ನಿಮ್ಮ ಏಳ್ಗೆ :

ಶಿಕ್ಷಣ ಕ್ಷೇತ್ರದ ವಿಶೇಷವಾದ ಪ್ರಯೋಗ ಇಂದು ಹಲವು ವಿದ್ಯಾರ್ಥಿಗಳಿಗೆ ಪಠ್ಯಕ್ರಮಗಳ ಮೂಲಭೂತ ಕ್ರಿಯೆಗಳು ಅಥವಾ ವಿಷಯಗಳ ಅರಿವೇ ಇರುವುದಿಲ್ಲ. ಇದರಿಂದಾಗಿ ವಿಷಯಗಳು ಅರ್ಥವಾಗದೇ ತಡಕಾಡುತ್ತಿದ್ದಾರೆ.

ಈಗಾಗಲೇ 6,7,8,9ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಹಲವು ವಿಷಯಗಳಿಂದ ವಂಚಿತರಾಗಿದ್ದಾರೆ. ಅಂತಹವರಿಗೆ ಗಣಿತ ಮೂಲ ಕ್ರಿಯೆಗಳು ಮತ್ತು ಸಮಸ್ಯೆಗಳನ್ನು ಬಿಡಿಸಲು ಸುಲಭ ಮಾರ್ಗಗಳು, ಇನ್ನೂ ಇಂಗ್ಲೀಷ್‍ನ ಗ್ರಾಮರ್, ಆಕ್ಸ್‍ಫರ್ಡ್ ಪದಕೋಶ ಗಣನೆ ಮತ್ತು ವಾಕ್ಯ ಬಳಸುವ ವಿಧಾನಗಳು. ವಿಜ್ಞಾನ ವಿಷಯಕ್ಕೆ ಬಂದರೆ ಮೂಲಭೂತ ವ್ಯತ್ಯಾಸಗಳು, ವೈಜ್ಞಾನಿಕ ನೈಸರ್ಗಿಕ ಸಂಪನ್ಮೂಲಗಳ ಸಂಕ್ಷಿಪ್ತ ವಿಚಾರಗಳು ಜೀವಿಗಳ ಜೀವನ ಕ್ರಿಯೆಗಳ ಬಗೆಗಿನ ಸುಲಭ ರೂಪ ಹಾಗೂ ರಸಾಯನಿಕ ಸಮೀಕರಣ ಇವುಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಯಾವುದೂ ವಿದ್ಯಾರ್ಥಿಗಳ ಕಲಿಕೆಗೆ ಸುಲಭವಾಗುತ್ತದೆಯೋ ಅದಕ್ಕೆ ಬೇಕಾದ ಪಠ್ಯಕ್ರಮಗಳನ್ನು ರೂಪಿಸಿ ಬೋಧಿಸಲಾಗುವುದು. ನಮ್ಮ ಉದ್ಧೇಶ ಮಕ್ಕಳ ಆಸಕ್ತಿಯುತ ಭಾಗವಹಿಸುವಿಕೆ ಮತ್ತು ತರಗತಿಯ ಆಸ್ವಾದಿಸುವಿಕೆ. ಪರಿಣಾಮವಾಗಿ ಸ್ಪರ್ದಾತ್ಮಕ ಪರೀಕ್ಷೆಗಳಿಗೂ ತಯಾರಿಸಿಕೊಳ್ಳುತ್ತಾರೆ. ವಿದ್ಯಾರ್ಥಿಗಳಲ್ಲಿ ಪ್ರಶ್ನೆಗಳು ಮೂಡುವಂತೆ ಮಾಡಿ ಅದಕ್ಕೆ ಉತ್ತರ ನೀಡುವ ಆಶಯವೇ ANSWER -Summer Classes. ಈ ಅಸಾಮಾನ್ಯ ಶೈಲಿಯ ತರಗತಿಯು ಪುತ್ತೂರಿನಲ್ಲಿಯೇ ಚೊಚ್ಚಲ ಬಾರಿಗೆ ಪ್ರಗತಿ ಸ್ಟಡಿ ಸೆಂಟರ್ ಆಯೋಜಿಸಿದ್ದು Basic Science, Basic Maths, Basic Englsih ವಿಷಯಗಳ ಬಗ್ಗೆ 2ನೇ ವರ್ಷದ ಆರಂಭವು ಎಪ್ರಿಲ್ 12ರಿಂದ ಮೆ 21ರವರೆಗೆ ಪ್ರತಿನಿತ್ಯ ಬೆಳಗ್ಗೆ 9:30ರಿಂದ ಸಂಜೆ 3:30ರವರೆಗೆ ನಡೆಯಲಿದೆ. ದೂರದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸಂಸ್ಥೆಯ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಇದೆ. ಈ ವಿನೂತನ ಆಶಯಕ್ಕೆ ಅಭೂತಪೂರ್ವ ಸ್ಪಂದನೆ ದೊರೆತಿದ್ದು, 2017ರಲ್ಲಿ 39 ವಿದ್ಯಾರ್ಥಿಗಳಿದ್ದು ಪ್ರಸಕ್ತ ವರುಷದಲ್ಲಿ 73 ವಿದ್ಯಾರ್ಥಿಗಳು ದಾಖಲಾಗಿದ್ದು ಪುತ್ತೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯದ ಹಲವು ಜಿಲ್ಲೆಗಳಿಂದ ವಿದ್ಯಾರ್ಥಿಗಳು ಕಲಿಕಾಸಕ್ತಿಯನ್ನು ತೋರಿಸಿರುವುದು ನಮ್ಮ ಈ ಪ್ರಯತ್ನಕ್ಕೆ ಸೂಕ್ತ ಮೈಲಿಗಲ್ಲು. ಕೆಲವೇ ಸೀಟುಗಳು ಖಾಲಿಯಿದ್ದು ಆಸಕ್ತಿಯುಳ್ಳ ವಿದ್ಯಾರ್ಥಿಗಳು ಭಾನುವಾರದ ಒಳಗೆ ಸಂಸ್ಥೆಯನ್ನು ಸಂಪರ್ಕಿಸಲು ಕೋರಲಾಗಿದೆ.