Sunday, November 24, 2024
ಹೆಚ್ಚಿನ ಸುದ್ದಿ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನೆಗಳ ಸದಸ್ಯರಾದ ಶ್ರೀ, ಆರ್.ಕೆ.ಪಾಂಡೆ ಇವರನ್ನು ನವದೆಹಲಿ ಕಚೇರಿಯಲ್ಲಿ ಇಂದು ಮಾಡಿದ ಭೇಟಿ ಮಾಡಿದ ನಳಿನ್ ಕುಮಾರ್ ಕಟೀಲ್-ಕಹಳೆ ನ್ಯೂಸ್

ನವದೆಹಲಿ : ದಕ್ಷಿಣ ಕನ್ನಡ ಸಂಸದ ಬಿ.ಜೆ.ಪಿ ರಾಜ್ಯಾಧ್ಯಕ್ಷ ಶ್ರೀ.ನಳಿನ್ ಕುಮಾರ್ ಕಟೀಲ್ ಇಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನೆಗಳ ಸದಸ್ಯರಾದ ಶ್ರೀ, ಆರ್.ಕೆ.ಪಾಂಡೆ ಇವರನ್ನು ನವದೆಹಲಿ ಕಚೇರಿಯಲ್ಲಿ ಭೇಟಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಮುಖವಾಗಿ ಈಗಾಗಲೇ ಭಾರತ್ ಮಾಲಾ ಯೋಜನೆಯಡಿ ಮಂಜೂರಾದ ಮುಲ್ಕಿ-ಕಿನ್ನಿಗೋಳಿ-ಮೂರುಕಾವೇರಿ-ಕಟೀಲು-ಪೊಳಲಿ-ಬಿಸಿ.ರೋಡ್-ಮೆಲ್ಕಾರ್-ತೊಕ್ಕೋಟು ರಸ್ತೆಯ ಟೆಂಡರ್ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸುವಂತೆ ಒತ್ತಾಯಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಫಂದಿಸಿದ ಎನ್.ಎಚ್.ಎ.ಐ (ಯೋಜನೆಗಳು) ಸದಸ್ಯ ಶ್ರೀ, ಆರ್.ಕೆ.ಪಾಂಡೆ ಇವರು ಈ ಕುರಿತು ಕೂಡಲೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಇದಲ್ಲದೇ ಸಂಸದರ ಇತರ ಪ್ರಮುಖ ಬೇಡಿಕೆಗಳನ್ನು ಪೂರೈಸುವುದಾಗಿ ತಿಳಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನೆಗಳ ಸದಸ್ಯರಾದ ಶ್ರೀ, ಆರ್.ಕೆ.ಪಾಂಡೆ ಇವರು ರಾಷ್ಟ್ರೀಯ ಹೆದ್ದಾರಿ-169ರಲ್ಲಿ ಸಾಣೂರು ನಿಂದ ಬಿಕರ್ನಕಟ್ಟೆವರೆಗಿನ ಚತುಷ್ಟ್ಪತ ಕಾಮಗಾರಿಗೆ ಅಡ್ಡಿಯಾಗಿರುವ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಿ ಅತೀ ಶೀಘ್ರದಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸುವ ಬಗ್ಗೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಶಿರಾಡಿ ಘಾಟ್ ಸುರಂಗ ಮಾರ್ಗದ ಕಾಮಗಾರಿಗೆ ಡಿ.ಪಿ.ಆರ್ ಮಾಡಲು ಸೂಕ್ರ ಕ್ರಮ ಕೈಗೊಳ್ಳಲಾಗುವುದು, ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಮಾಣಿಯಿಂದ ಕುಶಾಲನಗರ ವರೆಗಿನ 126.00 ಕಿ.ಮೀ ದ್ವಿಪಥ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿಸುವ ಕಾರ್ಯವು ಪ್ರಗತಿಯಲ್ಲಿರುವುದಾಗಿ ತಿಳಿಸಿದರು, ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಬಿ.ಸಿ.ರೋಡ್ ನಿಂದ ಪೆರಿಯಶಾಂತಿವರೆಗಿನ ಚತುಷ್ಟ್ಪತ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಕೆ.ಎನ್,ಆರ್ ಕನ್ಸ್ಡ್ರಕ್ಷನ್ ಸಂಸ್ಥೆಗೆ ಕೂಡಲೇ ಕಾಮಗಾರಿ ಪ್ರಾರಂಭಿಸುವಂತೆ ಸೂಚಿಸುವುದಾಗಿ ಭರವಸೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು