Monday, January 20, 2025
ಸುದ್ದಿ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಮಹಾನಗರ ಇದರ ವತಿಯಿಂದ ಭಗತ್ ಸಿಂಗ್, ರಾಜಗುರು, ಸುಖದೇವ್ ಇವರ ಬಲಿದಾನ ದಿನದ ಸಲುವಾಗಿ ಸಾರ್ವಜನಿಕ ಸಭೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮ-ಕಹಳೆ ನ್ಯೂಸ್

ಮಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಮಹಾನಗರ ಇದರ ವತಿಯಿಂದ ಭಗತ್ ಸಿಂಗ್, ರಾಜಗುರು, ಸುಖದೇವ್ ಇವರ ಬಲಿದಾನ ದಿನದ ಸಲುವಾಗಿ ಸಾರ್ವಜನಿಕ ಸಭೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ನಗರದ ಉರ್ವಾಸ್ಟೋರ್ ಮೈದಾನದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮಕ್ಕೆ ಮುಖ್ಯ ವಕ್ತಾರರಾಗಿ ಆಗಮಿಸಿದ ದಿಶಾ ಭಾರತ ಇದರ ಟ್ರಸ್ಟಿ ಹಾಗೂ ಸಾಮಾಜಿಕ ಕಾರ್ಯಕರ್ತ ಶ್ರೀಯುತ ರಾಜೇಶ್ ಪದ್ಮಾರ್ , ಭಾರತೀಯತೆಯನ್ನು ಉಳಿಸಲು ಪ್ರಯತ್ನಿಸಿದ ಸಾವಿರಾರು ಬಲಿದಾನಿಗಳು ಈ ಪುಣ್ಯಭೂಮಿಯಲ್ಲಿ ಆಗಿಹೋಗಿದ್ದಾರೆ .

ತ್ಯಾಗ, ಬಲಿದಾನ ಮತ್ತು ಸೇವೆ ಭಾರತದ ಪರಂಪರೆಯಲ್ಲಿ ಅಡಕವಾಗಿದ್ದು ಇದನ್ನು ಯುವ ಸಮುದಾಯ ಮುಂದುವರಿಸುವ ಅಗತ್ಯತೆ ಇದೆ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ನಿವೃತ್ತ ಪೊಲೀಸ್ ಅಧೀಕ್ಷಕರಾದ ಶ್ರೀಯುತ ಪಿ ಹರಿಶ್ಚಂದ್ರರವರು ಆಗಮಿಸಿ , ಬಲಿದಾನಿಗಳ ಆದರ್ಶಗಳನ್ನು ಯುವ ಜನತೆ ಜೀವನದಲ್ಲಿ ಮೈಗೂಡಿಸಬೇಕು ಎಂದು ಹೇಳಿದರು.

ಅ ಭಾ ವಿ ಪ ಮಂಗಳೂರು ಮಹಾನಗರದ ಅಧ್ಯಕ್ಷೆ ಶ್ರೀಮತಿ ಭಾರತಿ ಪ್ರಭು ಹಾಗೂ ಕಾರ್ಯದರ್ಶಿ ಶ್ರೀಯುತ ಶ್ರೇಯಸ್ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಾರ್ವಜನಿಕ ಸಭೆಯ ಮೊದಲು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ನೃತ್ಯ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು.

ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಉಪ ಮಹಾಪೌರರಾದ ಶ್ರಿಮತಿ ಸುಮಂಗಲಾ ರಾವ್ , ಹಿರಿಯ ಕಾರ್ಯಕರ್ತರಾದ ಶ್ರೀ ಚ ನ ಶಂಕರರಾವ್, ಸರಸ್ವತಿ ರಾವ್ , ಶ್ರೀ ರಾಘವೇಂದ್ರ ಹೊಳ್ಳ, ಉದ್ಯಮಿ ಸಂಜಯ್ ಪ್ರಭು, ಸುಜಿತ್ ಪ್ರತಾಪ್, ವಿಭಾಗ ಸಂಘಟನಾ ಕಾರ್ಯದರ್ಶಿ ಶ್ರೀ ಬಸವೇಶ್ ಕೋರಿ, ರಾಜ್ಯ ಸಹ ಕಾರ್ಯದರ್ಶಿ ಮಣಿಕಂಠ ಕಳಸ, ವಿಭಾಗ ಸಂಚಾಲಕ ಸಂದೇಶ್ ರೈ ಮಜಕ್ಕಾರ್, ನಗರ ಸಂಘಟನಾ ಕಾರ್ಯದರ್ಶಿ ಅಜಯ್ ಪ್ರಭು,ನಗರ ಸಹಕಾರ್ಯದರ್ಶಿಗಳಾದ ಶ್ರೇಯಸ್ ರೈ,ಕಿರಣ್,ಆತ್ಮಿಕ, ನಗರ ವಿದ್ಯಾರ್ಥಿನಿ ಪ್ರಮುಖ್ ಶ್ರೀಲಕ್ಷ್ಮೀ ಮಠದಮೂಲೆ ,ಕಾರ್ಯಕರ್ತರಾದ ಆದಿತ್ಯ ಶೆಟ್ಟಿ, ಆದರ್ಶ್ ಉಪ್ಪರ, ಪ್ರಣಮ್ ಶೆಟ್ಟಿ, ಭವನೀಶ್ ಶೆಟ್ಟಿ ಹಾಗೂ ಅನೇಕ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.