ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಆಗುಳೆಬೈಲು ಶ್ರೀ ದಿನೇಶ್ ಪೂಜಾರಿ ಮತ್ತು ಭಾರತಿ ದಂಪತಿಗಳ ಪುತ್ರಿಯಾಗಿರುವ ಕುಮಾರಿ ಧೃತಿ ಎಂಬ ಮಗುವಿಗೆ ಭೀಕರ ಅನಾರೋಗ್ಯದ ಕಾರಣದಿಂದ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಗಿತ್ತು.
ಹಾಗಾಗಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯಲ್ಲಿ ತಾಯಿಯ ಬಳಿ ಬೇಡಿಕೊಂಡಾಗ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿಯವರು ಕ್ಷೇತ್ರದ ವತಿಯಿಂದ ಚೆಕ್ ವಿತರಣೆ ಮಾಡಿದರು. ಮತ್ತು ಆ ಮಗುವಿಗೆ ಆದಷ್ಟು ಬೇಗ ಆರೋಗ್ಯ ಚೇತರಿಕೆ ಆಗಲೆಂದು ತಾಯಿ ಚಾಮುಡೇಶ್ವರಿ ಹತ್ತಿರ ಪ್ರಾರ್ಥನೆ ಸಲ್ಲಿಸಿದರು.