Recent Posts

Friday, November 22, 2024
ಪುತ್ತೂರು

ಯುವಮೋರ್ಚಾ ಪುತ್ತೂರು ನಗರ ಮಂಡಲದ ವತಿಯಿಂದ ಜನಜಾಗೃತಿಗಾಗಿ ಉಚಿತ ಮಾಸ್ಕ್ ವಿತರಣೆ-ಕಹಳೆ ನ್ಯೂಸ್

ಪುತ್ತೂರು : ಕೋವಿಡ್ 19 ರ ಸಂಖ್ಯೆ ಹೆಚ್ಚಾಳವಾಗುತ್ತಿರುವ ಹಿನ್ನಲೆಯಲ್ಲಿ ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಇಲಾಖೆಯವರು ಮಾಸ್ಕ್ ಕಡ್ಡಾಯ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮತ್ತು ಮಾಸ್ಕ್ ಹಾಕದ ಜನರಿಗೆ ದಂಡ ಹಾಕುತ್ತಿದ್ದು, ಈ ಕಾರಣದಿಂದಾಗಿ ಜನರಲ್ಲಿ ಜಾಗೃತಿ ಉಂಟು ಮಾಡಲು ಬಿಜೆಪಿ ಯುವಮೋರ್ಚಾ ಪುತ್ತೂರು ನಗರ ಮಂಡಲದ ವತಿಯಿಂದ ಪುತ್ತೂರು ತಾಲೂಕಿನಲ್ಲಿ ಇಂದು ಪುತ್ತೂರಿನ ಬಸ್ ಸ್ಟಾಂಡ್, ವಿವೇಕಾನಂದ ಕಾಲೇಜು, ಪುತ್ತೂರು ಮಾರ್ಕೆಟ್ ಮತ್ತಿ ಜನನಿಬಿಡ ಪ್ರದೇಶದಲ್ಲಿ ಉಚಿತ ಮಾಸ್ಕ್ ನೀಡುವ ಕಾರ್ಯಕ್ರಮವು ನಡೆಯಿತು. ಈ ಸಮಯದಲ್ಲಿ ಪುತ್ತೂರು ಬಿಜೆಪಿ ಯುವಮೋರ್ಚಾ ನಗರ ಮಂಡಲದ ಅಧ್ಯಕ್ಷ ಸಚಿನ್, ಪ್ರಧಾನ ಕಾರ್ಯದರ್ಶಿ ಶವಿನ್, ಕಾರ್ಯದರ್ಶಿ ಜಗದೀಶ್ ಜೆ ಗಾಣಿಗ ಮತ್ತು ಯುವಮೋರ್ಚಾದ ಸದಸ್ಯರು ಉಪಸ್ಥಿತರಿದ್ದರು.