Recent Posts

Friday, November 22, 2024
ಮೈಸೂರು

ಓಡಾಡಿಸಿಕೊಂಡು ಬೈಕ್ ಹಿಡಿಯಿರಿ ಅಂತ ಕಾನೂನು ಎಲ್ಲಿದೆ.? ಬೈಕ್ ಸವಾರನನ್ನು ಸಾಯಿಸಿದ್ದಕ್ಕೆ ಪೊಲೀಸರಿಗೆ ಪ್ರಶಂಸನಾ ಪತ್ರ ಕೊಡ್ತೀಯಾ.? ನೀನ್ ಯಾವ್ ಸೀಮೆ ಕಮಿಷನರಯ್ಯಾ.? ಥೂ ನಿನ್ನ ಜನ್ಮಕ್ಕೆ ನಾಚಿಕೆ ಆಗಬೇಕು ; ಎಂಎಲ್ಸಿ ಹೆಚ್ ವಿಶ್ವನಾಥ್ ಕಿಡಿ-ಕಹಳೆ ನ್ಯೂಸ್

ಮೈಸೂರು : ಮೂರ್ನಾಲ್ಕು ದಿನಗಳ ಹಿಂದೆ ಮೈಸೂರಿನ ರಿಂಗ ರಸ್ತೆಯಲ್ಲಿ ಪೊಲೀಸರ ಅಚಾತುರ್ಯದಿಂದ ನಡೆದ ಘಟನೆಯ ಬಗ್ಗೆ ಎಂಎಲ್ಸಿ ಹೆಚ್ ವಿಶ್ವನಾಥ್ ಅವರು, ಓಡಾಡಿಸಿಕೊಂಡು ಬೈಕ್ ಹಿಡಿಯಿರಿ ಅಂತ ಕಾನೂನು ಎಲ್ಲಿದೆ.? ಬೈಕ್ ಸವಾರನನ್ನು ಸಾಯಿಸಿದ್ದಕ್ಕೆ ಪೊಲೀಸರಿಗೆ ಪ್ರಶಂಸನಾ ಪತ್ರ ಕೊಡ್ತೀಯಾ.? ನೀನ್ ಯಾವ್ ಸೀಮೆ ಕಮಿಷನರಯ್ಯಾ.? ಥೂ ನಿನ್ನ ಜನ್ಮಕ್ಕೆ ನಾಚಿಕೆ ಆಗಬೇಕು ಎಂಬುದಾಗಿ ಪೊಲೀಸ್ ಕಮೀಷನರ್ ವಿರುದ್ಧ ಕಿಡಿಕಾರಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಲ್ಲದೇ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಪೊಲೀಸ್ ಕಮೀಷನರ್ ಬೀದಿಗೆ ಬರಲ್ಲ. ಸಿಟಿ ರೌಂಡ್ ಹಾಕೋದಿಲ್ಲ. ಎಷ್ಟು ವರ್ಷ ಆಯ್ತು ಬಂದು. ಡಿಸಿಪಿ, ಎಸಿಪಿಗಳಿದ್ದೀರಿ ಏನ್ ಮಾಡ್ತಾ ಇದ್ದೀರಿ.? ಎಂದು ಹರಿಹಾಯ್ದರು. ಬೈಕ್ ಸವಾರನ ಸಾಯಿಸಿದ್ದಕ್ಕೆ ಪ್ರಶಂಸನಾ ಪತ್ರ ನೀಡುತ್ತೀಯಾ. ನೀನು ಯಾವ ಸೀಮೆ ಕಮಿಷನರಯ್ಯ ನೀನು. ಸಿಟಿ ಪೊಲೀಸ್ ಕಾಯ್ದೆ ಏನ್ ಹೇಳುತ್ತೆ. ಓಡಿಸಿಕೊಂಡು ಬೈಕ್ ಹಿಡಿ ಅಂತ ಹೇಳುತ್ತಾ. ಸರ್ಕಾರದ ದುಡ್ಡಲ್ಲಿ ಕ್ಯಾಮೆರಾ, ಉಪಕರಣಗಳನ್ನ ಕೊಟ್ಟಿದ್ದೀವಿ. ಈ ವರ್ತನೆಯನ್ನ ಯಾರೂ ಕ್ಷಮಿಸಲ್ಲ ಎಂಬುದಾಗಿ ಕಿಡಿ ಕಾರಿದರು.

ಜಾಹೀರಾತು
ಜಾಹೀರಾತು
ಜಾಹೀರಾತು