Friday, November 22, 2024
ಸುದ್ದಿ

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ವಿಶ್ವ ಜಲ ದಿನಾಚರಣೆ-ಕಹಳೆ ನ್ಯೂಸ್

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಭೂಗೋಳಶಾಸ್ತ್ರ ವಿಭಾಗದ ವತಿಯಿಂದ ಇತ್ತೀಚೆಗೆ ಕರ್ನಾಟಕ ಸರಕಾರದ ಶಿಕ್ಷಣ ಸುಧಾರಣೆಗಳ ಕಾರ್ಯಕ್ರಮದಡಿ ದತ್ತು ಸ್ವೀಕರಿಸಲಾಗಿರುವ ಪಾವೂರಿನ ದ.ಕ.ಜಿ.ಪಂ.ಪ್ರೌಢಶಾಲೆಯಲ್ಲಿ ‘ವಿಶ್ವ ಜಲ ದಿನಾಚರಣೆ ‘ ಆಯೋಜಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಿಶೇಷ ಉಪನ್ಯಾಸ ನೀಡಿದ ಸಂಪನ್ಮೂಲ ವ್ಯಕ್ತಿ ಮಂಗಳೂರು ವಿಶ್ವವಿದ್ಯಾನಿಲಯದ ಸಾಗರ ಭೂ ವಿಜ್ಞಾನ ವಿಭಾಗದ ಪ್ರೊ. ಹೆಚ್. ಗಂಗಾಧರ ಭಟ್, ಮಳೆನೀರು ಕೊಯ್ಲು ಜಲಸಂರಕ್ಷಣೆಗೆ ಹಾಗೂ ನೀರಿನ ಸಮಸ್ಯೆಗೆ ಒಂದು ಸರಳ ಪರಿಹಾರ. ಅದನ್ನು ಪ್ರತಿ ಮನೆಗಳಲ್ಲೂ, ಶಾಲಾ ಕಾಲೇಜುಗಳಲ್ಲೂ, ಅನುಷ್ಠಾನಗೊಳಿಸಬೇಕು, ಎಂದರಲ್ಲದೆ, ಈ ಕುರಿತು ಒಂದು ಪ್ರಾತ್ಯಕ್ಷಿಕೆ ನೀಡಿದರು. ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಮೊಹಮ್ಮದ್ ಮೋನು ಕಾರ್ಯಕ್ರಮ ಉದ್ಘಾಟಿಸಿ ನೀರಿನ ಮಹತ್ವ ಹಾಗೂ ಅದರ ಮಿತವ್ಯಯದ ಬಳಕೆ ಬಗ್ಗೆ ವಿವರಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳ ಕಾರ್ಯಾಲಯದ ವಿಶೇಷಾಧಿಕಾರಿ ಪ್ರೊ. ಪ್ರಶಾಂತ ನಾಯ್ಕ, “ನೀರಿನ ಅಪವ್ಯಯ, ಜಲ ಮಾಲಿನ್ಯ, ಅಂತರ್ಜಲದ ಅತಿಬಳಕೆ, ಅರಣ್ಯ ನಾಶ, ಜನಸಂಖ್ಯಾ ಸ್ಫೋಟ, ನಗರೀಕರಣ, ಇತ್ಯಾದಿ ಜಲಕ್ಷಾಮಕ್ಕೆ ಕಾರಣವಾಗುತ್ತಿದೆ.

‘ವಿಶ್ವಸಂಸ್ಥೆಯ ವಾಟರ್ಡೊಕ್ಯುಮೆಂಟ್ಸ್’ ಪ್ರಕಟಿಸಿರುವ ಸಂಶೋಧನಾ ವರದಿಯ ಪ್ರಕಾರ ಈಗಿರುವ ಜೀವನ ಶೈಲಿಯಂತೆ ನೀರನ್ನು ಬಳಸುತ್ತಾ ಹೋದರೆ 2030 ಹೊತ್ತಿಗೆ ಪ್ರಪಂಚದ ಶೇಕಡಾ 47 ರಷ್ಟು ಜನಸಂಖ್ಯೆ ನೀರಿನ ತೀವ್ರ ಸಂಕಷ್ಟಕ್ಕೆ ಗುರಿಯಾಗುತ್ತಾರೆ, ” ಎಂದು ಎಚ್ಚರಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ಭೂಗೋಳಶಾಸ್ತ್ರ ವಿಭಾಗದ ಕಾರ್ಯಕ್ರಮ ಸಂಯೋಜಕ ಡಾ. ದಶರಥ ಪಿ. ಅಂಗಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದ.ಕ.ಜಿ.ಪಂ. ಪ್ರೌಢಶಾಲೆ ಮುಖ್ಯೋಪಾಧ್ಯಾಯ ಕರುಣ ಎಸ್ ಅಧ್ಯಕ್ಷತೆ ವಹಿಸಿದ್ದರು. ಕೈಗಾರಿಕ ರಸಾಯನಶಾಸ್ತ್ರ ವಿಭಾಗದ ಡಾ. ರಮೇಶ್ ಎಸ್. ಗಣಿ, ಶಾಲೆಯ ನೋಡಲ್ ಅಧಿಕಾರಿ, ಮಂಗಳೂರು ವಿಶ್ವವಿದ್ಯಾನಿಲಯದ ಎಂಬಿಎ ವಿಭಾಗದ ಡಾ. ಶೇಖರ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು. ರಾಮಾಂಜಿ ಕಾರ್ಯಕ್ರಮ ನಿರೂಪಿಸಿದರು.