Sunday, January 19, 2025
ಕ್ರೀಡೆ

ಮದುವೆ ನಂತ್ರ ಮೊದಲ ಬಾರಿ ಐಪಿಎಲ್ ವೀಕ್ಷಿಸಲು ಬಂದ ನಟಿ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅನೇಕ ಬಾರಿ ಐಪಿಎಲ್ ಪಂದ್ಯ ವೀಕ್ಷಣೆಗೆ ಬಂದಿದ್ದಾರೆ. ಆದ್ರೆ ಈ ಬಾರಿ ಐಪಿಎಲ್ ವೀಕ್ಷಣೆ ಸ್ವಲ್ಪ ವಿಶೇಷವಾಗಿದೆ. ಮದುವೆ ನಂತ್ರ ವಿರಾಟ್ ಕೊಹ್ಲಿ ಮೊದಲ ಬಾರಿ ಐಪಿಎಲ್ ಆಡ್ತಿದ್ದು, ಮದುವೆ ನಂತ್ರ ಮೊದಲ ಬಾರಿ ಪತಿಗೆ ಪ್ರೋತ್ಸಾಹ ನೀಡಲು ಅನುಷ್ಕಾ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಕಿಂಗ್ಸ್ ಇಲವೆನ್ ಪಂಜಾಬ್ ಹಾಗೂ ರಾಯಲ್ ಚಾಲೆಂಜರ್ ಬೆಂಗಳೂರು ಪಂದ್ಯವನ್ನು ಅನುಷ್ಕಾ ವೀಕ್ಷಿಸಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನುಷ್ಕಾರ ಕೆಲ ಭಂಗಿಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. ಗ್ಯಾಲರಿಯಲ್ಲಿ ಕುಳಿತಿದ್ದ ಅನುಷ್ಕಾ ಅನೇಕ ಬಾರಿ ಕೊಹ್ಲಿ ಟೀಂಗೆ ಪ್ರೋತ್ಸಾಹ ನೀಡುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊಹ್ಲಿ ಕ್ಯಾಚ್ ಹಿಡಿದಾಗ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ ನಟಿ ಕೊಹ್ಲಿ ಔಟ್ ಆದಾಗ ಕೂಡ ಸಪ್ಪೆ ಮುಖದಲ್ಲಿಯೇ ಪತಿಗೆ ಪ್ರೋತ್ಸಾಹ ನೀಡಿದ್ರು. ಅನುಷ್ಕಾ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದು ಇದೇ ಮೊದಲಲ್ಲ. ಅನೇಕ ಬಾರಿ ಕಾಣಿಸಿಕೊಂಡಿದ್ದಾರೆ. ಆದ್ರೆ ಈ ಬಾರಿ ಸ್ವಲ್ಪ ವಿಶೇಷವಾಗಿದೆ. ಬ್ಯುಸಿ ಶೆಡ್ಯೂಲ್ ನಲ್ಲಿಯೂ ಅನುಷ್ಕಾ ಪತಿ ತಂಡಕ್ಕೆ ಪ್ರೋತ್ಸಾಹ ನೀಡಲು ಬಂದಿದ್ದು ವಿಶೇಷ.

ಜಾಹೀರಾತು
ಜಾಹೀರಾತು
ಜಾಹೀರಾತು