ಮಂಗಳೂರು : ನಮ್ಮ ಬೆಲೆಯನ್ನು ನಮ್ಮಲ್ಲಿರುವ ಕೌಶಲ್ಯ ನಿರ್ಧರಿಸುತ್ತದೆ. ನಮ್ಮ ಭವಿಷ್ಯ ನಿರ್ಧರಿಸುವುದು, ರೂಪಿಸುವುದು ನಮ್ಮ ಕೌಶಲ್ಯಗಳು, ಎಂದು ವಿಜ್‌ಡೊಮೆಡ್ ಮುಖ್ಯ ಶೈಕ್ಷಣಿಕ ಅಧಿಕಾರಿ ಡಾ. ಗುರುತೇಜ್ ಹೇಳಿದ್ದಾರೆ.
ನಗರದ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಎಂ.ಕಾಂ ಮತ್ತು ಎಂ.ಬಿ. ಎ (ಐಬಿ) ವಿಭಾಗಗಳು ಶಿವರಾಮಕಾರಂತ ಸಭಾಭವನದಲ್ಲಿ ಆಯೋಜಿಸಿದ್ದʼ ಪೊಟೆಂಟ್ ಮಿರರಿಂಗ್ ಸ್ಕಿಲ್ಸ್ʼಕುರಿತ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ನಮ್ಮ ನಾವು ಸಂಪಾದಿಸಿರುವ ಕೌಶಲ್ಯಗಳನ್ನು ಸೂಕ್ತ ಸಮಯದಲ್ಲಿ ಬಳಸಲೂ ನಮಗೆ ತಿಳಿದಿರಬೇಕು, ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ. ಸುಭಾಷಿಣಿ ಶ್ರೀವತ್ಸ, ಕಾರ್ಯಾಗಾರ ಸಂಘಟನೆಯಲ್ಲಿ ಬೇಕಾಗುವ ಸಾಮರ್ಥ್ಯ ಅಭಿವ್ಯಕ್ತಿ ಕೌಶಲ್ಯದ ಬಗ್ಗೆ ಮಾತನಾಡಿದರು. ಎಂಕಾಂ ಮತ್ತು ಎಂ.ಬಿ.ಎ ವಿಭಾಗಗಳ ಸಂಯೋಜಕ ಡಾ. ಜಗದೀಶ್ ಬಿ, ಮುಖ್ಯ ಅತಿಥಿ ಡಾ. ಫ್ರಾನ್ಸಿಸ್ಕಾ ತೇಜ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಾಗಾರದ ಸಂಚಾಲಕಿ ಕಾವ್ಯಾ ಪಿ ಹೆಗ್ಡೆ ಅತಿಥಿಗಳನ್ನು ಸ್ವಾಗತಿಸಿದರು. ಮಿಥುನ್ ಚಂದ್ರ ಧನ್ಯವಾದ ಸಮರ್ಪಿಸಿದರು. ನಿತಿನ್ ಕಾರ್ಯಕ್ರಮ ನಿರೂಪಿಸಿದರು.