Tuesday, January 21, 2025
ಸುದ್ದಿ

ಕದ್ರಿ ಪಾರ್ಕ್’ನಲ್ಲಿ ಮತ್ತು ಜಿಂಕೆ ಪಾರ್ಕ್’ನಲ್ಲಿ ಫೋಟೋಶೂಟ್ ಹಾಗೂ ವಿಡಿಯೋಶೂಟ್ ಇನ್ಮುಂದೆ ಉಚಿತವಲ್ಲ.!-ಕಹಳೆ ನ್ಯೂಸ್

ಮಂಗಳೂರು : ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿಯು ನಗರದ ಅತಿದೊಡ್ಡ ಉದ್ಯಾನವನವಾದ ಕದ್ರಿ ಪಾರ್ಕ್’ನಲ್ಲಿ ಮತ್ತು ಜಿಂಕೆ ಪಾರ್ಕ್’ನಲ್ಲಿ ಫೋಟೋಶೂಟ್ ವಿಡಿಯೋಶೂಟ್ ಗೆ ಶುಲ್ಕ ನಿಗದಿಪಡಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕ್ಯಾಮಾರ ಬಳಸಿ ಫೋಟೋ ಶೂಟ್ ಗೆ 500 ರೂಪಾಯಿ ಮತ್ತು ವಿಡಿಯೋ ಶೂಟ್ ಗೆ 5000 ರೂ. ಶುಲ್ಕ ವಿಧಿಸಲಾಗುತ್ತದೆ. ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಇರುವ ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿಯ ಇತ್ತೀಚೆಗೆ ಜರುಗಿದ ಸಭೆಯಲ್ಲಿ ಫೋಟೋ, ವಿಡಿಯೋ ಶೂಟ್ ಗೆ ಶುಲ್ಕ ವಿಧಿಸುವ ಕುರಿತು ಪ್ರಸ್ತಾವನೆ ಮಾಡಲಾಗಿತ್ತು. ಇದೀಗ ಈ ಪ್ರಸ್ತಾಪನೆಯನ್ನು ಜಾರಿಗೊಳಿಸಲಾಗಿದ್ದು, ಮಾ.29 ರ ಸೋಮವಾರದಿಂದ ಈ ಕ್ರಮ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು