Tuesday, January 21, 2025
ಸುದ್ದಿ

ಮಂಗಳೂರಿನ ಕೊಣಾಜೆಯ ಕೋಡಿಜಾಲ್ ನಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು; 700 ಗ್ರಾಂ ಗೂ ಅಧಿಕ ಚಿನ್ನ ಮತ್ತು 5 ಲಕ್ಷ ರೂಪಾಯಿ ನಗದು ಕಳವು-ಕಹಳೆ ನ್ಯೂಸ್

ಮಂಗಳೂರು : ಮಂಗಳೂರಿನ ಕೊಣಾಜೆಯ ಕೋಡಿಜಾಲ್ ನಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು 700 ಗ್ರಾಂ ಗೂ ಅಧಿಕ ಚಿನ್ನ ಮತ್ತು 5 ಲಕ್ಷ ರೂಪಾಯಿ ನಗದು ದೋಚಿರುವ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಘಟನೆ ಕೋಡಿಜಾಲ್ ನಿವಾಸಿ ಅಬೀಬ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು, ತಡರಾತ್ರಿ ಮನೆಗೆ ನುಗ್ಗಿದ ಕಳ್ಳರು ಮನೆಯ ಬೆಡ್ ರೂಂ ನಲ್ಲಿದ್ದ ಕಪಾಟಿನಿಂದ ಚಿನ್ನಾಭರಣ ಕಳವು ಮಾಡಿದ್ದಾರೆ. ಸ್ಥಳದಲ್ಲಿ ಕೊಣಾಜೆ ಪೊಲೀಸರು ಇದ್ದು ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ನಡೆಸಲಿದ್ದಾರೆ. ಹಾಗೂ ಪೊಲೀಸ್ ಮೂಲಗಳು ಕಳವಾದ ಚಿನ್ನಾಭರಣಗಳ ಮೌಲ್ಯ 20 ಲಕ್ಷಕ್ಕೂ ಅಧಿಕ ಎಂದು ತಿಳಿಸಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು