Monday, January 20, 2025
ಹೆಚ್ಚಿನ ಸುದ್ದಿ

ಮುಂಬೈನ ಡ್ರೀಮ್ಸ್ ಮಾಲ್‍ನಲ್ಲಿರುವ ಕೊರೊನಾ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ; ಇಬ್ಬರು ಮೃತ್ಯು-ಕಹಳೆ ನ್ಯೂಸ್

ಮುಂಬೈ : ಮುಂಬೈನ ಡ್ರೀಮ್ಸ್ ಮಾಲ್‍ನಲ್ಲಿರುವ ಕೊರೊನಾ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಘಟನೆ ಮಾರ್ಚ್ 25ರ ಗುರುವಾರ ರಾತ್ರಿ 11.49ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಮಾರ್ಚ್ 26 ಶುಕ್ರವಾರ ಮುಂಜಾನೆಯವರೆಗೂ ಕಾರ್ಯಾಚರಣೆ ನಡೆದಿದೆ. ನಾಲ್ಕು ಅಂತಸ್ತಿನ ಕಟ್ಟಡದ ಮೂರನೇ ಮಹಡಿಯಲ್ಲಿದ್ದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಸೋಂಕಿತರನ್ನು ರಕ್ಷಿಸಲು ಕಾರ್ಯಾಚರಣೆ ನಡೆದಿದ್ದು, ಅಗ್ನಿಶಾಮಕ ದಳ ಮತ್ತು ವಿಪತ್ತು ನಿರ್ವಹಣಾ ಘಟಕಗಳ ನೌಕರರು ಹಲವಾರು ರೋಗಿಗಳನ್ನು ರಕ್ಷಿಸಿದ್ದಾರೆ. ಹಾಗೂ ಬೆಂಕಿ ಅವಘಡದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ರಕ್ಷಿಸಲಾದ ರೋಗಿಗಳನ್ನು ಜಂಬೋ ಫೀಲ್ಡ್ ಮತ್ತು ಫೋರ್ಟಿಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು