Sunday, November 24, 2024
ಕೊಡಗು

ರಸ್ತೆ ಬದಿಯಲ್ಲಿ ಇರುವ ಕಸವನ್ನು ಶುಚಿಗೊಳಿಸಬೇಕು ಎಂದು ದೊಡ್ಡಮಳ್ತೆ ಗ್ರಾಮ ಪಂಚಾಯಿತಿಗೆ ಶಿವರಾಮೇಗೌಡರ ಕರವೇ ಕಾರ್ಯಕರ್ತರು ಮನವಿ -ಕಹಳೆ ನ್ಯೂಸ್

ಕೊಡಗು : ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹೋಬಳಿಗೆ ಸೇರಿದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಸೇರಿದ ಕೆಳಗೆ ಕಾವಡಿಕಟ್ಟೆ ಇಂದ ಹೊನ್ನವಳ್ಳಿಯ ವರೆಗೆ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಎರಡು ಬದಿಯಲ್ಲಿ ರಾಶಿಗಟ್ಟಲೆ ಕಸ ಬಿದ್ದಿರುತ್ತದೆ ಇದರ ಬಗ್ಗೆ ದೊಡ್ಡಮಳ್ತೆ ಗ್ರಾಮ ಪಂಚಾಯಿತಿಯವರು ಮೌನವಹಿಸಿದ್ದಾರೆ .

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ರಸ್ತೆಯ ಎರಡೂ ಬದಿಯಲ್ಲೂ ಕಸ ರಾಶಿಗಟ್ಟಲೆ ಬಿದ್ದಿರುತ್ತದೆ ಇದೇ ದಾರಿಯಲ್ಲಿ ಪಂಚಾಯಿತಿ ಸದಸ್ಯರು ಗಳು ತಿರುಗಾಡುತ್ತಿದ್ದರು ಈ ಕಸವನ್ನು ನೋಡಿ ಯಾಕೆ ಪಂಚಾಯತಿ ಸದಸ್ಯರು ಮೌನ ಎಂದು ಕರವೇ ಪ್ರಶ್ನೆ ..ಕೊಡಗು ಜಿಲ್ಲಾ ಪಂಚಾಯಿತಿಯಿಂದ ಎಲ್ಲಾ ಗ್ರಾಮ ಪಂಚಾಯಿತಿಗೂ ಕಸ ತೆಗೆಯುವ ವಾಹನ ಮತ್ತು ಬಕೆಟ್ ಗಳನ್ನು ಕೊಟ್ಟಿದ್ದರು ದೊಡ್ಡಮಳ್ತೆ ಗ್ರಾಮ ಪಂಚಾಯಿತಿಯವರು ಕಸದ ವಾಹನವನ್ನು 1ರೂಮಿನಲ್ಲಿ ಭದ್ರವಾಗಿ ಇಟ್ಟಿದ್ದಾರೆ ಯಾಕೆ ಎಂಬ ಕರವೇ ಕಾರ್ಯಕರ್ತರ ಪ್ರಶ್ನೆ ಪ್ರಶ್ನೆ . ಹಾಗೆಯೇ ಕಸದ ಬಕೆಟ್ ಗಳು ಸಹ ಯಾರಿಗೆ ಕೊಟ್ಟಿದ್ದೀರಿ ಈ ಬಕೆಟ್ ಗಳು ಎಲ್ಲಿವೆ ಎಂಬ ಕರವೇ ಪ್ರಶ್ನೆ . ಸರ್ಕಾರದಿಂದ ಕೊಟ್ಟ ಕಸದ ವಾಹನ ಸಹ ಯಾವುದೇ ಕೆಲಸ ಮಾಡುತ್ತಿಲ್ಲ .

ಹಾಗಾಗಿ ಇದರ ಬಗ್ಗೆ ಜಿಲ್ಲಾ ಪಂಚಾಯಿತಿಗೆ ಮುಂದಿನ ದಿನಗಳಲ್ಲಿ ಕರವೇ ಕಾರ್ಯಕರ್ತರು ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಕಸದ ವಾಹನಗಳು ಕೆಲಸ ಮಾಡಬೇಕು ಮತ್ತು ಸರ್ಕಾರದಿಂದ ಕೊಟ್ಟಂತ ಹಸಿ ಕಸ ಒಣ ಕಸ ಬೇರೆ ಬೇರೆ ಮಾಡಲು ಬಕೆಟ್ ಗಳನ್ನು ಕೊಟ್ಟಿರುತ್ತಾರೆ ಆದರೆ ಈ ಬಕೆಟ್ ಗಳು ಗ್ರಾಮ ಪಂಚಾಯಿತಿಯಲ್ಲಿ ಉಳಿದಿರುತ್ತದೆ .

ಯಾಕೆ ಇಷ್ಟೊಂದು ಕಸದ ವಿಷಯದಲ್ಲಿ ದಿವ್ಯ ನಿರ್ಲಕ್ಷ್ಯ ಎಲ್ಲಾ ಗ್ರಾಮ ಪಂಚಾಯಿತಿಯವರು ಕರವೇ ಪ್ರಶ್ನೆ ..ಹಾಗಾಗಿ ದೊಡ್ಡಮಳ್ತೆ ಗ್ರಾಮ ಪಂಚಾಯಿತಿಯವರು ಕಾಗಡಿಕಟ್ಟೆ ಯಿಂದ ವನವಳ್ಳಿ ವರೆಗೆ ಇರುವ ಈ ಎಲ್ಲಾ ಕಸವನ್ನು ರಸ್ತೆ ಬದಿಯಲ್ಲಿರುವ ಕಸವನ್ನು ಬೇಗನೆ ತೆಗೆಯಬೇಕು ಎಂದು ಕರವೇ ಕಾರ್ಯಕರ್ತರ ಆಗ್ರಹ. ಮತ್ತು ಕಸ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಬೇಗನೆ ಕ್ರಮ ಕೈಗೊಳ್ಳಬೇಕೆಂದು ಶಿವರಾಮೇಗೌಡರ ಕರವೇ ಕಾರ್ಯಕರ್ತರು ಮನವಿ… 9449255831.. 9686095831