ಶ್ರೀ ಮಲರಾಯಿ ಮೂವರ್ ದೈವಂಗಳ ದೈವಸ್ಥಾನ ಕಾಪುಮಜಲು ವಿಟ್ಲ ಪಡ್ನೂರು, ಕೊಡಂಗಾಯಿ ಇಲ್ಲಿ ಮಾರ್ಚ್ 27 ರಿಂದ ಮಾರ್ಚ್ 31 ವರೆಗೆ ಕಾಲಾವಧಿ ಜಾತ್ರೆ-ಕಹಳೆ ನ್ಯೂಸ್
ಬಂಟ್ವಾಳ : ಶ್ರೀ ಮಲರಾಯಿ ಮೂವರ್ ದೈವಂಗಳ ದೈವಸ್ಥಾನ ಕಾಪುಮಜಲು ವಿಟ್ಲ ಪಡ್ನೂರು, ಕೊಡಂಗಾಯಿ ಇಲ್ಲಿ ಮಾರ್ಚ್ 27 ರಿಂದ ಮಾರ್ಚ್ 31 ವರೆಗೆ ಕಾಲಾವಧಿ ಜಾತ್ರೆ ನಡೆಯಲಿದೆ.
ಮಾರ್ಚ್ 27 ಬೆಳಿಗ್ಗೆ ಗಣಹೋಮ, ತಂಬಿಲ ಮತ್ತು ರಾತ್ರಿ ಧ್ವಜಾರೋಹಣ ನಡೆಯಲಿದ್ದು, ಮಾರ್ಚ್ 28 ರಂದು ಸಂಜೆ 7ಗಂಟೆಯಿಂದ ಶ್ರೀ ಮಲರಾಯ ಭಜನಾ ಮಂಡಳಿ(ರಿ) ಕಾಪುಮಜಲು ಇವರಿಂದ ವಾರ್ಷಿಕ ಭಜನೆ ಮತ್ತು ಆಹ್ವಾನಿತ ಭಜನಾ ಮಂಡಳಿಯಿಂದ ಕುಣಿತ ಭಜನೆ ಹಾಗೂ ರಾತ್ರಿ ಕೊಟ್ಟತ್ತಾಯನ ನೇಮ ಜರುಗಲಿದೆ.
ಹಾಗೆಯೇ ಮಾರ್ಚ್ 29 ರಂದು ಬೆಳಿಗ್ಗೆ ಮಲರಾಯಿ, ಸಂಜೆ ಗಂಟೆ 7.30 ಕ್ಕೆ ಶಿಲ್ಪಶ್ರೀ ಯುವಕ ಮಂಡಲ(ರಿ) ಕೊಡಂಗಾಯಿ ಇವರ ಪ್ರಾಯೋಜಕತ್ವದಲ್ಲಿ ಶ್ರೀ ಭಗವತೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ, ಸಸಿಹಿತ್ಲು, ಮಂಗಳೂರು ಇವರಿಂದ ಯಕ್ಷಗಾನ ಬಯಲಾಟ ರಂಗಸ್ಥಳ ತುಳು ಕಥಾಭಾಗ (ಕಾಲಮಿತಿ) ರಾತ್ರಿ ಅಯ್ಯರ ಬಂಟರ ನೇಮ ಜರುಗಲಿದ್ದು, ಮಾರ್ಚ್ 30 ಕ್ಕೆ ರಾತ್ರಿ ನಡುಬಂಡಿ ಉತ್ಸವ (ಮಾಗಣಿ ಬಂಡಿ ಉತ್ಸವ) ಹಾಗೂ ಮಾರ್ಚ್ 31 ಕ್ಕೆ ಬೆಳಿಗ್ಗೆ ಶ್ರೀ ಮಲರಾಯಿ ದೈವದ ಹರಿಕೆ ನೇಮ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಮತ್ತು ರಾತ್ರಿ ಕಡೇ ಬಂಡಿ ಉತ್ಸವ(ಕರ್ತುಲೆ ಬಂಡಿ ಉತ್ಸವ ) ಹಾಗೂ ಸಂಜೆ 7.30 ಕ್ಕೆ ಫ್ರೆಂಡ್ಸ್ ಕಾಪುಮಜಲು ಇವರ ಪ್ರಾಯೋಜಕತ್ವದಲ್ಲಿ ಕಲ್ಲಡ್ಕ ವಿಠಲ್ ನಾಯಕ್ ಮತ್ತು ಬಳಗದವರಿಂದ ವಿನೂತನ ಶೈಲಿಯ ಕಾರ್ಯಕ್ರಮ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿರುವುದು.