Sunday, January 19, 2025
ಸುದ್ದಿ

ಬರುತ್ತಿದೆ ಫೇಸ್’ಬುಕ್ ಮೀರಿಸುವ ಸಾಮಾಜಿಕ ಜಾಲತಾಣ

ನವದೆಹಲಿ : ಈಗ ಎಲ್ಲೆಡೆ ವಾಟ್ಸಾಪ್ , ಫೇಸ್ ಬುಕ್’ಗಳದ್ದೇ ಹವಾ ಹೆಚ್ಚಾಗಿದೆ. ಆದರೆ ಇವುಗಳನ್ನು ಮೀರಿಸಿಲು ಇನ್ನೊಂದು ಸಾಮಾಜಿಕ ಜಾಲತಾಣ ಬರಲು ಸಜ್ಜಾಗಿದೆ. 

ಆರ್ಕುಟ್ ಸಂಸ್ಥಾಪಕರಿಂದ ಈ ಹೊಸ ಸಾಮಾಜಿಕ ಜಾಲತಾಣ  ಭಾರತೀಯ ಮಾರುಕಟ್ಟೆಯನ್ನು ಪ್ರವೇಶ ಮಾಡಲಿದೆ ಎಂದು ಘೋಷಣೆ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸದ್ಯ ಅತ್ಯಂತ ಪ್ರಸಿದ್ಧ ಸಾಮಾಜಿಕ ಜಾಲತಾಣವಾಗಿದ್ದ ಫೇಸ್ಬುಕ್’ನಲ್ಲಿ ಡಾಟಾ ಸೋರಿಕೆಯಾಗುತ್ತಿವೆ ಎಂದು ಇತ್ತೀಚೆಗೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇವುಗಳನ್ನು ಮೀರಿಸುವ ಸಲುವಾಗಿ ಇಲ್ಲಿ  ಹೊಸ ಸಾಮಾಜಿಕ ಜಾಲತಾಣವನ್ನು ಪರಿಚಯಿಸಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೆಲೊ ಎನ್ನುವ  ಈ ಸಾಮಾಜಿಕ ಜಾಲತಾಣವನ್ನು ಆರ್ಕುಟ್ ಸಂಸ್ಥಾಪಕ ಬುಯುಕೊಕ್ಟೆನ್ ಅವರು ಆರಂಭ ಮಾಡುವುದಾಗಿ ಘೊಷಣೆ ಮಾಡಿದ್ದಾರೆ.

ಆರ್ಕುಟ್ ಕೆಲ ವರ್ಷಗಳ ಹಿಂದೆ ಪ್ರಸಿದ್ಧವಾಗಿದ್ದು, ಅದರಲ್ಲಿ ಕೂಡ ಡಾಟಾ ಸೋರಿಕೆಯಂತಹ ಆರೋಪಗಳು ಕೇಳಿ ಬಂದು 2014ರಲ್ಲಿ ಅದನ್ನು ಮುಚ್ಚಲಾಯಿತು.