Sunday, January 19, 2025
ದಕ್ಷಿಣ ಕನ್ನಡಸಿನಿಮಾಸುದ್ದಿ

ಇಂಗ್ಲೀಷ್ ದ ಕುಲೆ ಕಲ್ಯಾಣ ಪಕ್ಕಾ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಮೂವಿ – ಕೆ. ಸೂರಜ್ ಶೆಟ್ಟಿ ಆಕ್ಷನ್ ಕಟ್ ಗೆ, ಹರೀಶ್ ಶೇರಿಗಾರ್ ಪ್ರಯತ್ನಗೆ ಮೊದಲ ದಿನವೇ ತುಳುವರು ಫೀದಾ – ಕಹಳೆ ನ್ಯೂಸ್

ಎಸ್, ಕೊರೊನಾ ನಂತರ ತುಳು ಭಾಷೆಯ ಎರಡನೇ ಚಿತ್ರ ಇಂಗ್ಲೀಷ್ ಇಂದು ತೆರೆಕಂಡಿದ್ದು, ತುಳು ಚಿತ್ರರಂಗದಲ್ಲಿ ಮತ್ತೆ ಹೊಸ ಭರವಸೆ ಮೂಡಿಸಿದೆ. ರೂಪೇಶ್ ಶೆಟ್ಟಿ ಗಮ್ಜಾಲ್ ಮಾಡಿ 50 ದಿನ ಪೂರೈಸುತ್ತಿದ್ದಂತೆ ಮತ್ತೊಬ್ಬ ಯಶಸ್ವೀ ನಿರ್ದೇಶಕ, ಹಿಟ್ ಮೂವಿ ಸರದಾರ ಕೆ.ಸೂರಜ್ ಶೆಟ್ಟಿಯವರ ಇಂಗ್ಲೀಷ್(ತುಳುಚಿತ್ರ) ಇಂದು ಮತ್ತೊಂದು ಹಿಟ್ ನ ಮುನ್ಸೂಚನೆ ನೀಡಿದೆ.

ತುಳುವಿನಲ್ಲಿ ಏನೇ ಮಾಡಿದ್ರು, ‘ ಕಾಮಿಡಿಯೇ ಮೋಸ್ಟ್ ಇಂಪಾರ್ಟೆಂಟ್ ಪಾರ್ಟ್ – ಚಿತ್ರ ಮೇಲೆ ಬೀಳುವುದು ಕಾಮಿಡಿಯಲ್ಲಿ, ಮುಗ್ಗರಿಸುವುದು ಕಾಮಿಡಿಯಲ್ಲಿ…. ‘ ಎನ್ನುವುದು ತುಳು ಚಿತ್ರಗಳ ಪರಿಪಾಠವಾಗಿದ್ದು, ನೋಡುವವರಿಗೆ ಈ ಚಲನಚಿತ್ರ ಖಂಡಿತವಾಗಿಯೂ ಬೇಸರ ಮಾಡುವುದಿಲ್ಲ. ಪ್ರೇಕ್ಷಕರು ನಿಸ್ಸಂಶಯವಾಗಿ ಒಂದು ಒಳ್ಳೆ ಸದಭಿರುಚಿಯ ಹಾಸ್ಯದ ಪಂಚ್ ಗಳಿಗೆ ಹೊಟ್ಟೆತುಂಬಾ ನಗುವ ಸನ್ನಿವೇಶಗಳಿವೆ‌. ಇದರ ಜೊತೆಗೆ ಒಂದು ಸಣ್ಣ ಲವ್ ಸ್ಟೋರಿಯೊಂದಿಗೆ ಒಂದು ಕುಲೆ ಕಲ್ಯಾಣವನ್ನು ಜೊಡಿಸಿದ ಪರಿ ಮನೋಜ್ಞವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಾಯಕ ಪ್ರಥ್ವಿ ಅಂಬರ್ ಗೆ ಜೊತೆಯಾಗಿ ನಾಯಕಿ ನವ್ಯಾ ಪೂಜಾರಿ ಕಾಣಿಸಿಕೊಂಡಿದ್ದು, ” ದಿಯಾ”ದಂತಹ ಸೂಪರ್ ಹಿಟ್ ಚಿತ್ರದ ಸರದಾರ ಪ್ರಥ್ವಿಗೆ ಸರಿಸಮಾನವಾಗಿ ನವ್ಯಾ ಪೂಜಾರಿ ಪಾತ್ರಕ್ಕೆ ಜೀವತುಂಬಿದ್ದಾಳೆ. ಸಹಜತೆ ಹಾಗೂ ಪ್ರಸ್ತುತತೆ ಚಿತ್ರವನ್ನು ಜನರ ಮನಸ್ಸಿಗೆ ಹತ್ತಿರವಾಗುವಂತೆ ಮಾಡಿದೆ. ನಾಯಕನ ಜೊತೆ ಬೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ ಅವರ ಪಾತ್ರಗಳು ಪ್ರೇಕ್ಷಕ ಪ್ರಭುವಿನ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಾ ಸಾಗಿದರೆ, ಪ್ರಮುಖ ಖಳನಾಯಕರಿಲ್ಲದ ಚಿತ್ರದಲ್ಲಿ ಹಾಸ್ಯಜೊತೆ ಮಿಶ್ರಿತವಾದ ಖಳ ಪಾತ್ರಗಳಲ್ಲಿ ತುಳುನಾಡ ಮಾಣಿಕ್ಯ ಅರವಿಂದ್ ಬೋಳಾರ್ ಹಾಗೂ ವಿಸ್ಮಯ ವಿನಾಯಕ್ ಹಾಸ್ಯದೊಂದಿಗೆ ನವೀನ್ ಡಿ ಪಡೀಲ್ ರವರ ಪೊಡಿದಾಮು ಪಾತ್ರ ‘ ಅವು ಗ್ಯಾಸ್ ಮಾರ್ರೆ ‘ ಎಂಬ ಡೈಲಾಗ್ ಪ್ರೇಕ್ಷಕರ ನಗುವಿಗೆ ಬ್ರೇಕ್ ಬೀಳದಂತೆ ನೋಡಿಕೊಂಡ್ರೆ, ಉಮೇಶ್ ಮಿಜಾರ್ ಇಂಗ್ಲೀಷ್ ಶಿಕ್ಷಕನಾಗಿ ನಗೆ ಕಡಲಲ್ಲಿ ತೇಲಿಸುತ್ತಾರೆ. ಸಾಂದರ್ಭಿಕ ಪಾತ್ರಗಳಲ್ಲಿ ಮಂತ್ರವಾದಿ ಸಹಾಯಕನ ಪಾತ್ರದಲ್ಲಿ ರವಿ ರಾಮಕುಂಜ ಕಾಮಾಲ್ ಮಾಡಿದ್ರೆ, ಇನ್ನುಳಿದ ಸಹ ಪಾತ್ರಗಳು ಚಿತ್ರಕ್ಕೆ ಜೀವ ತುಂಬಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವೆರಿ ವೆರಿ ಇಂಪಾರ್ಟೆಂಟ್ ಏನ್ ಅಂದ್ರೆ, ನಾಯಕಿ ನವ್ಯಾ ಪೂಜಾರಿ, ದಿವ್ಯ ಹಾಗೂ ನವ್ಯಾ ಎರಡೂ ಪಾತ್ರದಲ್ಲಿನ ಉತ್ತಮ ನಟನೆ ಹಾಗೂ ಅಂಜಿಕೆ ಬಿಟ್ಟ ಡೈಲಾಗ್ ಡ್ರಾಪಿಂಗ್, ಸ್ವಲ್ಪಮಟ್ಟಿಗೆ ಭಾವನಾತ್ಮಕ ಸನ್ನಿವೇಶ ಎಲ್ಲವನ್ನೂ ಬಹಳ ಅಚ್ಚುಕಟ್ಟಾಗಿ ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ.

ಪ್ರಸ್ತುತ ವಿದ್ಯಮಾನಗಳನ್ನು ಚಿತ್ರದ ಆಶಯವಾಗಿ ನೀಡಿದ ನಿರ್ದೇಶಕ ಸೂರಜ್ ನಿರ್ವಹಣೆ ಹಾಗೂ ಹರೀಶ್ ಶೇರಿಗಾರ್ ಪರಿಕಲ್ಪನೆ, ಅತಿಯಾದ ಪರಿಭಾಷೆಯ ವ್ಯಾಮೋಹಕ್ಕೆ ನಮ್ಮ ಮಾತೃ ಭಾಷೆ ಬಲಿಯಾಗುತ್ತಿದೆ ಎಂಬ ಸಂದೇಶವನ್ನು ಚಿತ್ರ ನೀಡಿದರೆ, ಕೊನೆಗೆ ಬರುವ ಇಂಗ್ಲಿಷ್ ಶಿಕ್ಷಕ ಕನ್ನಡದ ಹಿರಿಯ ನಟ ಅನಂತ್ ನಾಗ್ ಖಂಡಿತವಾಗಿ ಜನರ ಗೊಂದಲಕ್ಕೆ ತೆರೆ ಎಳೆಯುತ್ತಾರೆ, ನಮ್ಮ ಮಾತೃಭಾಷೆ ಪ್ರಾಮುಖ್ಯತೆಯ ಪಾಠ ಮಾಡಿತ್ತಾರೆ.

ಉತ್ತಮ ಛಾಯಾಗ್ರಹಣ, ಉತ್ತಮ ಎಡಿಟಿಂಗ್, ಇನ್ನು ಮಣಿಕಾಂತ್ ಕದ್ರಿ ಸಂಗೀತ ಅಂತೂ ಚಿತ್ರಕ್ಕೆ ಒಂದು ವರವಾಗಿ ಪರಿಣಮಿಸಿದೆ. ಹಿನ್ನೆಲೆ ಸಂಗೀತ ಅದ್ಭುತವಾಗಿದ್ದು, ಸ್ವತಃ ನಿರ್ಮಾಪಕ ಹರೀಶ್ ಶೇರಿಗಾರ್ ಒಂದು ಹಾಡಿಗೆ ಕೊರಳಾಗಿದ್ದು, ಸಾಂಗ್ ಮೇಕಿಂಗ್ ತುಳುಚಿತ್ರರಂಗದಲ್ಲಿ ಹೊಸ ಚರಿತ್ರೆಯನ್ನೇ ನಿರ್ಮಾಣ ಮಾಡಿದೆ.

ಸಿನಿಮಾಕ್ಕೆ ಎಲ್ಲೂ ಕೊರತೆಯಾಗದಂತೆ ಅದ್ದೂರಿ ಮೇಕಿಂಗ್ ತುಳುವಿನಲ್ಲಿ ಇಂತಹ ಒಂದು ಪ್ರಯತ್ನ ಮಾಡಬಹುದು ಎಂದು ತೊರೆಸಿಕೊಟ್ಟು ನಿರ್ಮಾಪಕರಾದ ಹರೀಶ್ ಶೇರಿಗಾರ್ ಹಾಗೂ ಶರ್ಮಿಳಾ ಹರೀಶ್ ಶೇರಿಗಾರ್ ಸೈ ಎನಿಸಿಕೊಂಡಿದ್ದಾರೆ.

ಒಟ್ಟಾರೆಯಾಗಿ ಹೇಳುದಾದರೆ ತುಳು ಚಿತ್ರರಂಗದ ಇತಿಹಾಸದಲ್ಲಿ ‘ ಕುಲೆ ಕಲ್ಯಾಣ’ ದ ಮೂಲಕ ಸೌಂಡು ಮಾಡಲು ಆರಂಭಿಸಿದ ” ಇಂಗ್ಲೀಷ್ ” ತುಳು ಪ್ರೇಕ್ಷಕರ ಮನಗೆಲ್ಲೂದರಲ್ಲಿ ಎರಡು ಮಾತಿಲ್ಲ, ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರ ಪೈಸಾ ವಸೂಲಿ ಅಂತೂ ಪಕ್ಕಾ..!

✒️ – ಶ್ಯಾಮ ಸುದರ್ಶನ್ ಹೊಸಮೂಲೆ
ಪ್ರದಾನ ಸಂಪಾದಕರು, ಕಹಳೆ‌ ನ್ಯೂಸ್