Sunday, January 19, 2025
ಸುದ್ದಿ

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಕಳೆದ ಸಾಲಿನ ಪದವಿ ಪರೀಕ್ಷೆಯಲ್ಲಿ ಮೂವರು ವಿದ್ಯಾರ್ಥಿನಿಗಳಿಗೆ ರ‍್ಯಾಂಕ್-ಕಹಳೆ ನ್ಯೂಸ್

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಕಳೆದ ಸಾಲಿನ ಪದವಿ ಪರೀಕ್ಷೆಯಲ್ಲಿ ನಗರದ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ರ‍್ಯಾಂಕ್ ಪಡೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಲಾ ವಿಭಾಗದಲ್ಲಿ ನಗರದ ಶೋಭಾ ಪಿ ಮತ್ತು ಕೆ ಎಸ್ ಪ್ರೇಂಕುಮಾರ್ ಅವರ ಪುತ್ರಿ ಸಾಯಿ ಸೂರ್ಯ ಕೆ ಪಿ 6 ನೇ ರ‍್ಯಾಂಕ್ ಮತ್ತು ಆಕಾಶಭವನದ ಪ್ರೇಮನಾಥ ಆಚಾರ್ಯ ಅವರ ಪತ್ನಿ, ಪಾರ್ವತಿ- ಪ್ರಭಾಕರ ಆಚಾರ್ಯ ದಂಪತಿಯ ಪುತ್ರಿ ಸಂಧ್ಯಾ 9 ನೇ ರ‍್ಯಾಂಕ್ ಗಳಿಸಿದ್ದಾರೆ. ಸಂಧ್ಯಾ ಬೆಳ್ಮದೋಟದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯೂ ಹೌದು.

ವಾಣಿಜ್ಯ ವಿಭಾಗದಲ್ಲಿ ಮಂಗಳೂರಿನ ರೈಲ್ವೇ ಕಾಲನಿಯ ಎಸ್. ಲಕ್ಷ್ಮೀ- ಐ ಬಾಬು ದಂಪತಿಯ ಮಗಳು ಐ. ಪ್ರಿಯದರ್ಶಿನಿ 8 ನೇ ರ‍್ಯಾಂಕ್ ಗೆ ಭಾಜನರಾಗಿದ್ದಾರೆ. ರ‍್ಯಾಂಕ್ ವಿಜೇತರಿಗೆ ಕಾಲೇಜಿನ ಪ್ರಾಂಶುಪಾಲರು, ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.