ಮಿಟ್ಟೇಮರಿಯಲ್ಲಿ ಬ್ರಹ್ಮ ರಥೋತ್ಸವ ಅದ್ಧೂರಿ ಆಚರಣೆಗೆ ತಾಲೂಕು ಆಡಳಿತ ಬ್ರೇಕ್ ; ಭಕ್ತರಲ್ಲಿ ನಿರಾಸೆ –ಕಹಳೆ ನ್ಯೂಸ್
ಬಾಗೇಪಲ್ಲಿ : ಬಾಗೇಪಲ್ಲಿ ತಾಲೂಕು ಮಿಟ್ಟೇಮರಿ ಗ್ರಾಮದ ಐತಿಹಾಸಿಕ ಪುರಾಣ ಪ್ರಸಿದ್ದವಾದ ಗರುಡಾದ್ರಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದ ಇದೆ ತಿಂಗಳು ಮಾರ್ಚ್ 29ರಂದು ನಡೆಯಬೇಕಾಗಿದ್ದ ಬ್ರಹ್ಮ ರಥೋತ್ಸವವನ್ನು ಕೋವಿಡ್-19 ಕರೋನ ವೈರಸ್ ಅನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಸಾರ್ವಜನಿಕರು ಪ್ರವೇಶಿಸಲು ನಿಷೇಧಿಸಿ ರದ್ದುಗೊಳಿಸಲಾಗಿದೆ ಎಂದು ಬಾಗೇಪಲ್ಲಿ ತಾಲೂಕು ದಂಡಾಧಿಕಾರಿಗಳು ಹಾಗೂ ತಹಶಿಲ್ದಾರ್ ರಾದ ಡಿ.ಎ.ದಿವಾಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಅವರು ತಾಲೂಕು ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕೊರೋನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಸಲುವಾಗಿ ಸಭೆ, ಸಮಾರಂಭ, ಜಾತ್ರಾ ಮಹೋತ್ಸವ ನಡೆಸಬಾರದೆಂಬ ಸರ್ಕಾರದ ಆದೇಶದ ಅನ್ವಯ ರಥೋತ್ಸವ ರದ್ದುಪಡಿಸಿರುವುದಾಗಿ ದೇವಾಲಯ ಆಡಳಿತ ಮಂಡಳಿ ಪರವಾಗಿ ಪ್ರಕಟಿಸಿದ್ದಾರೆ. ಅದ್ದರಿಂದ ಸಾರ್ವಜನಿಕರು ಹಾಗೂ ಭಕ್ತಾದಿಗಳು ಸಹಕರಿಸಲು ಈ ಮೂಲಕ ಕೊರಿದ್ದಾರೆ.