Recent Posts

Sunday, January 19, 2025
ಪುತ್ತೂರು

ಅಂಬಿಕಾ ಕಾಲೇಜಿನ ಪ್ರಾಚಾರ್ಯರಿಂದ ವಿನೂತನ ಪ್ರಯತ್ನ ; ಪ್ರತಿದಿನ ಭಾರತೀಯ ದಿನದರ್ಶಿಕಾ ರೂಪಿಸಿ ಹಂಚುತ್ತಿರುವ ಡಾ.ವಿನಾಯಕ ಭಟ್-ಕಹಳೆ ನ್ಯೂಸ್

ಪುತ್ತೂರು : ಪಾಶ್ಚಿಮಾತ್ಯ ಸಂಸ್ಕøತಿಯ ದಾಳಿಗೆ ಸಿಲುಕಿ ದೇಸೀಯ ಕಲ್ಪನೆಗಳು ಮರೆಯಾಗುತ್ತಿರುವ ಬಗೆಗೆ ಸಾಕಷ್ಟು ಮಂದಿ ಕಳವಳ ವ್ಯಕ್ತಪಡಿಸುತ್ತಾರೆ. ಅಲ್ಲಿಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಗಳನ್ನು ಕೆಲವರು ಮಾಡುವುದೂ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ದೇಸೀಯವಾದ ವಿಚಾರವೊಂದಕ್ಕೆ ತನ್ನನ್ನು ತಾನು ಸಂಪೂರ್ಣವಾಗಿ ಒಪ್ಪಿಸಿಕೊಂಡು, ಆತ್ಮನಿರ್ಭರ ಭಾರತದ ಕನಸಿಗನುಗುಣವಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಕೆಲವೇ ಕೆಲವು ಮಂದಿಯಲ್ಲಿ ಪುತ್ತೂರಿನ ಡಾ.ವಿನಾಯಕ ಭಟ್ಟ ಗಾಳಿಮನೆ ಕೂಡ ಒಬ್ಬರು. ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿರುವ ಇವರು ಭಾರತೀಯ ದಿನದರ್ಶಿಕೆಯನ್ನು (ತಾರೀಕು ಪಟ್ಟಿ) ರೂಪುಗೊಳಿಸಿ, ಸಾಮಾಜಿಕ ಮಾಧ್ಯಮದ ಮೂಲಕ ಪ್ರಸಾರಮಾಡುತ್ತಿದ್ದಾರೆ. ‘ಆಮ್ನಾಯಃ – ಭಾರತೀಯ ದಿನದರ್ಶಿಕಾ – ಗನ್ದವಹಸದನಮ್’ (ಗಾಳಿಮನೆ) ಹೆಸರಿನಲ್ಲಿ ಪ್ರತಿದಿನವೂ ತಪ್ಪದೆ ಆಯಾ ದಿನದ ದೇಸೀಕಲ್ಪನೆಯ ದಿನದರ್ಶಿಕೆಯನ್ನು ರೂಪಿಸಿ ಪಸರಿಸುತ್ತಿದ್ದಾರೆ. ಕಳೆದ ಒಂಬತ್ತು ತಿಂಗಳುಗಳಿಂದ ನಿರಂತರವಾಗಿ ಒಂದು ದಿನವೂ ತಪ್ಪದಂತೆ ಡಾ.ವಿನಾಯಕ ಭಟ್ಟ ಅವರು ಈ ದಿನದರ್ಶಿಕೆಯನ್ನು ರೂಪಿಸುತ್ತಿದ್ದಾರೆ. ಹಾಗೆ ತಯಾರು ಮಾಡಿದ್ದನ್ನು ತನ್ನ ಪರಿಚಯಸ್ಥರ, ಸಂಬಂಧಿಗಳ, ವಿದ್ಯಾರ್ಥಿಗಳ ವಾಟ್ಸಾಪ್ ಗುಂಪಿನಲ್ಲಿ ಹಾಗೂ ಫೇಸ್ ಬುಕ್‍ನಲ್ಲಿ ಪ್ರಕಟಿಸುವುದರ ಮೂಲಕ ದೇಸೀ ಕಲ್ಪನೆಯ ದಿನದರ್ಶಿಕೆಯೆಡೆಗೆ ಆಸಕ್ತಿ ಮೂಡಿಸುತ್ತಿದ್ದಾರೆ. ಪ್ರತಿದಿನ ಈ ದಿನದರ್ಶಿಕೆ ಕನಿಷ್ಟ ಎರಡು ಸಾವಿರದಷ್ಟು ಮಂದಿಗೆ ತಲಪುತ್ತಿದೆ ಎಂಬುದು ಗಮನಾರ್ಹ. ಜತೆಗೆ ಅನೇಕರು ತಮಗೆ ದೊರಕುತ್ತಿರುವ ಈ ಭಾರತೀಯ ದಿನದರ್ಶಿಕೆಯನ್ನು ತಮ್ಮ ವಲಯದಲ್ಲೂ ಹಂಚಿ ಡಾ.ವಿನಾಯಕ ಭಟ್ಟ ಅವರಿಗೆ ಬೆಂಬಲ ಸೂಚಿಸುತ್ತಿದ್ದಾರೆ. ತನ್ನ ದಿನದರ್ಶಿಕೆಯಲ್ಲಿ ಆಯಾ ದಿನವನ್ನು ಯಾವ ತಾರೀಕಿನೊಂದಿಗೆ ಗುರುತಿಸಲಾಗುತ್ತದೆ ಎಂಬ ಆಧುನಿಕ ಕ್ಯಾಲೆಂಡರ್‍ನ ದಿನಾಂಕವನ್ನೂ ನಮೂದಿಸುವುದರಿಂದ ಜನರಿಗೆ ಸುಲಭಕ್ಕೆ ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿದೆ. ಹಾಗೆಯೇ ಭಾರತೀಯ ದಿನದರ್ಶಿಕೆಯನ್ನು ಕರಗತ ಮಾಡಿಕೊಳ್ಳುವುದಕ್ಕೂ ಇದು ಸಹಾಯ ಮಾಡುತ್ತಿದೆ. ಯುಗಾದಿ ನಮ್ಮ ಹೊಸವರ್ಷ ಎಂಬ ಅಭಿಯಾನವನ್ನೂ ಈ ದಿನದರ್ಶಿಕೆಯ ಮೂಲಕ ನಡೆಸಿಕೊಂಡು ಬರಲಾಗುತ್ತಿದೆ. ಜನವರಿ 1ರಂದು ಆಚರಿಸಲ್ಪಡುತ್ತಿರುವ ಹೊಸವರ್ಷದ ಕಲ್ಪನೆಯನ್ನು ನಮ್ಮ ಚಿಂತನೆಯಡಿ ಯುಗಾದಿಯಂದು ಆಚರಿಸಬೇಕೆನ್ನುವ ಉದ್ದೇಶದೊಂದಿಗೆ ಈ ಅಭಿಯಾನ ನಡೆಯುತ್ತಿದೆ. ‘ನಾನು ಲಾಕ್ ಡೌನ್ ಸಮಯದಲ್ಲಿ ‘ಆಮ್ನಾಯಃ ಅಂತರ್ಜಾಲೀಯ ವೇದಸಂಸ್ಕøತ ಶಾಲಾ’ ವನ್ನು ಸ್ಥಾಪಿಸಿ ಆ ಮೂಲಕ ಆಸಕ್ತರಿಗೆ ಸಂಸ್ಕøತ ಹಾಗೂ ವೇದ ತರಗತಿ ಬೋಧಿಸುತ್ತಿರುವಾಗ ಮೂಡಿದ ಪರಿಕಲ್ಪನೆ ಈ ಭಾರತೀಯ ದಿನದರ್ಶಿಕಾ. ಮನೆ ಮನೆಗಳಲ್ಲಿ, ಆಹ್ವಾನ ಪತ್ರಿಕೆಗಳಲ್ಲಿ ಅಂತರಾಷ್ಟ್ರೀಯ ಕ್ಯಾಲಂಡರಿನೊಂದಿಗೆ ಈ ದಿನದರ್ಶಿಕೆ ಕೂಡ ರಾರಾಜಿಬೇಕೆಂಬುದು ನನ್ನ ಕನಸು’ ಎಂಬುದು ಡಾ.ವಿನಾಯಕ ಭಟ್ಟ ಅವರ ಮಾತು. ತನ್ನ ಈ ಪ್ರಯತ್ನಕ್ಕೆ ಅವರ ಹೆತ್ತವರು, ಮಡದಿ, ಮಗಳು, ಗುರುವೃಂದ ಹಾಗೂ ಅಂಬಿಕಾ ಸಮೂಹ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಅವರು ನಿರಂತರ ಪ್ರೋತ್ಸಾಹ ನೀಡುತ್ತಿದ್ದಾರೆ ಎಂಬುದನ್ನು ಡಾ.ವಿನಾಯಕ ಭಟ್ಟ ಅವರು ನೆನಪಿಸಿಕೊಳ್ಳುತ್ತಾರೆ.