Recent Posts

Monday, November 25, 2024
ಪುತ್ತೂರು

ಸಂತ ಫಿಲೋಮಿನಾ ಕಾಲೇಜಿನಲ್ಲಿ ಕೋವಿಡ್-19 ಜನಜಾಗೃತಿ ಅಭಿಯಾನ-ಕಹಳೆ ನ್ಯೂಸ್

ಪುತ್ತೂರು : ಕೋವಿಡ್-19 ಸಾಂಕ್ರಾಮಿಕ ರೋಗವು ವಿಶ್ವದಾದ್ಯಂತ ಎಲ್ಲ ವರ್ಗದ ಜನರಿಗೆ ಆತಂಕ ಸೃಷ್ಟಿಸಿದೆ. ಈ ಆರೋಗ್ಯ ವಿಕೋಪದ ನಿಯಂತ್ರಣಕ್ಕೆ ಸರ್ಕಾರವು ಹಲವು ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಪ್ರಸ್ತುತ ಇದರ ಎರಡನೆಯ ಅಲೆಯು ನಮ್ಮನ್ನು ಆವರಿಸಿದಂತೆ ಭಾಸವಾಗುತ್ತಿದೆ ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ಸಂತ ಫಿಲೋಮಿನಾ ಕಾಲೇಜಿನ ಯೂತ್‍ರೆಡ್‍ಕ್ರಾಸ್, 3/19 ಕರ್ನಾಟಕ ಬಿನ್ ಎನ್‍ಸಿಸಿ, ಎನ್‍ಎಸ್‍ಎಸ್, ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ ಮತ್ತುರೋವರ್-ರೇಂಜರ್ ಘಟಕ ಇದರ ಆಶ್ರಯದಲ್ಲಿ ಮಾರ್ಚ್27 ರಂದು ಆಯೋಜಿಸಲಾದ ಕೋವಿಡ್-19 ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ, ಮಾತನಾಡಿದರು.

ಈ ಕೋವಿಡ್-19 ಎಂಬ ಭಯಾನಕ ರೋಗದ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳದಿರುವುದು, ಸ್ಯಾನಿಟೈಸರ್ ಬಳಸುವುದು ಬಹಳ ಮುಖ್ಯವಾಗಿದೆ. ನಾವೆಲ್ಲರೂ ಈ ರೋಗದ ಹತೋಟಿಗೆ ಸಾಕಷ್ಟು ಮುಂಜಾಗ್ರತೆ ವಹಿಸುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವುದು ಬಹಳ ಮುಖ್ಯ ಎಂದು ಹೇಳಿದರು.

ಕಾಲೇಜು ಆವರಣದಿಂದ ಹೊರಟ ಈ ಅಭಿಯಾನವು ಕಾವೇರಿಕಟ್ಟೆ ಬಳಿಯಿಂದ ಸಾಗಿ, ದರ್ಬೆ ವೃತ್ತದ ಮೂಲಕ ಮುಂದುವರಿದು ಕಾಲೇಜು ಮುಖ್ಯ ದ್ವಾರದ ಬಳಿ ಸಮಾಪನಗೊಂಡಿತು.

ಈ ಸಂದರ್ಭದಲ್ಲಿ ಜನರಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಕುರಿತು ಜಾಗೃತಿ ಉಂಟು ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಕರಪತ್ರ ಹಾಗೂ ಮಾಸ್ಕ್‍ಗಳನ್ನು ವಿತರಿಸಲಾಯಿತು.

ಈ ಅಭಿಯಾನವನ್ನು ಯೂತ್‍ರೆಡ್‍ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿಗಳಾದ ವೆಂಕಟೇಶ್ವರಿ ಕೆ ಎಸ್, ನ್ಯಾನ್ಸಿ ಲವೀನ ಪಿಂಟೊ, ನೀಲೇಶ್‍ಜಾಯ್‍ಡಯಾಸ್, ಎನ್‍ಸಿಸಿ ಅಧಿಕಾರಿ ಲೆ. ಜಾನ್ಸನ್‍ಡೇವಿಡ್ ಸಿಕ್ವೇರ, ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ದಿನಕರ್‍ಅಂಚನ್, ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಸಂಯೋಜಕಿ ಶ್ರೀಮಣಿ ಹಾಗೂ ರೋವರ್-ರೇಂಜರ್ ಘಟಕದ ಸಂಯೋಜಕರಾದ ಧನ್ಯ ಪಿ ಟಿ ಮತ್ತು ದೀಪ್ತಿ ಶೆಟ್ಟಿ ಸಂಯೋಜಿಸಿದರು.

ಈ ಅಭಿಯಾನದಲ್ಲಿ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಗೌರವ ಅತಿಥಿಗಳಾಗಿ ಪಾಲ್ಗೊಂಡರು. ಕನ್ನಡ ವಿಭಾಗದ ಮುಖ್ಯಸ್ಥಡಾ. ವಿಜಯಕುಮಾರ್ ಮೊಳೆಯಾರ ಕಾರ್ಯಕ್ರಮ ನಿರೂಪಿಸಿದರು.