Monday, January 20, 2025
ಪುತ್ತೂರು

ಓಪನ್ ರಾಪಿಡ್ ಚೆಸ್ ಪಂದ್ಯಾಟ ; ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಸಾತ್ವಿಕ್ ಶಿವಾನಂದ ಗೆ ದಕ್ಷಿಣಕನ್ನಡ ಜಿಲ್ಲಾ ಬೆಸ್ಟ್ ಪ್ಲೇಯರ್ ಅವಾರ್ಡ್-ಕಹಳೆ ನ್ಯೂಸ್

ಪುತ್ತೂರು : ಕುದುರೆಮುಖ ಕಬ್ಬಿಣದ ಅದಿರು ಕಂಪೆನಿ ಲಿಮಿಟೆಡ್(KIOCL) ಮಂಗಳೂರಿನ ಕಾವೂರುನಲ್ಲಿ ನಡೆಸಿದ ಮೂರನೇ ಕುದುರೆಮುಖ ಟ್ರೋಫಿ ಅಂತರ್ ಜಿಲ್ಲಾ ಓಪನ್ ರಾಪಿಡ್ ಚೆಸ್ ಪಂದ್ಯಾವಳಿಯಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಸಾತ್ವಿಕ್ ಶಿವಾನಂದ ಪಿ.ಎಸ್ ದಕ್ಷಿಣಕನ್ನಡ ಜಿಲ್ಲಾ ಬೆಸ್ಟ್ ಪ್ಲೇಯರ್ ಅವಾರ್ಡ್ ನ್ನು ಪಡೆದುಕೊಂಡಿರುತ್ತಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈತನು ಸುಳ್ಯ ತಾಲೂಕಿನ ಬೆಳ್ಳಾರೆಯ ಶ್ರೀರಾಮ ಪಿ.ಸಿ ಮತ್ತು ಶಿಲ್ಪರವರ ಪುತ್ರ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ| ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ಈತನು ತರಬೇತಿಯನ್ನು ಪಡೆದಿರುತ್ತಾನೆ. ವಿದ್ಯಾರ್ಥಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು