Monday, January 20, 2025
ಬೆಂಗಳೂರು

ವಿಶ್ವ ಪ್ರಸಿದ್ಧ ಬೆಂಗಳೂರಿನ ಎಂ ಟಿ ಆರ್ ಉಪಹಾರ ಮಂದಿರದಲ್ಲಿ ನಾಲ್ಕು ದಶಕಗಳ ಅವಿರತ ಸೇವೆ ಸಲ್ಲಿಸಿದ ಶ್ರೀ ಉದಯ ಹಂದೆ ಯವರನ್ನು ಗ್ರಾಹಕರೇ ಸನ್ಮಾನಿಸಿದ ವಿಶೇಷ ಮತ್ತು ಅಪರೂಪದ ಕಾರ್ಯಕ್ರಮ –ಕಹಳೆ ನ್ಯೂಸ್

ಬೆಂಗಳೂರು : ವಿಶ್ವ ಪ್ರಸಿದ್ಧ ಬೆಂಗಳೂರಿನ ಎಂ ಟಿ ಆರ್ ಉಪಹಾರ ಮಂದಿರದಲ್ಲಿ ನಾಲ್ಕು ದಶಕಗಳ ಅವಿರತ ಸೇವೆ ಸಲ್ಲಿಸಿದ ಶ್ರೀ ಉದಯ ಹಂದೆ ಯವರನ್ನು ಗ್ರಾಹಕರೇ ಸನ್ಮಾನಿಸಿದ ವಿಶೇಷ ಮತ್ತು ಅಪರೂಪದ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ ಉದಯ ಹಂದೆಯವರು ತಮ್ಮ ಗ್ರಾಹಕ ಸ್ನೇಹಿ ಸ್ವಭಾವದಿಂದ ಮಾಲೀಕರಿಗೂ ಹಾಗೂ ಗ್ರಾಹಕರಿಗೂ ಪ್ರಿಯವಾದವರು. ತಮ್ಮ ಕೆಲಸದ ಜೊತೆಯಲ್ಲಿಯೇ ಹಲವಾರು ಸಮಾಜಮುಖಿ ಕೆಲಸಗಳಲ್ಲಿಯೂ ತೊಡಗಿಕೊಂಡಿರುವ ಹಂದೆಯವರು ದೇವಸ್ಥಾನ ಜೀರ್ಣೋದ್ಧಾರ, ಯಕ್ಷಗಾನ ಪ್ರದರ್ಶನಗಳ ಸಂಘಟನೆ ಮುಂತಾದ ಸಾಮಾಜಿಕ ಹಾಗೂ ಧಾರ್ಮಿಕ ಸೇವೆಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ವಧೂ-ವರರ ಸಂಪರ್ಕ ಸೇತುವಾಗಿ ಇದುವರೆಗೂ ಹಲವಾರು ಮದುವೆಗಳನ್ನು ಮಾಡಿಸಿರುವುದು ಇವರ ಹೆಗ್ಗಳಿಕೆ. ಇವರ ವೃತ್ತಿಸೇವೆ ಹಾಗೂ ಸಮಾಜಸೇವೆಯನ್ನು ಗುರುತಿಸಿ ಬೆಂಗಳೂರಿನ ಹೊಂಬೇಗೌಡ ನಗರದ ಕನ್ನಡ ಯುವಜನ ಸಂಘ ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಿತು.