Saturday, November 23, 2024
ಬೆಂಗಳೂರು

ನಮ್ಮ ಬೆಂಗಳೂರಿನಿಂದ ಸಚಿನ್‌ ತೆಂಡೂಲ್ಕರ್‌ರ ಬ್ಯಾಟ್ ಡಾಕ್ಟರ್ ಮತ್ತು ಮಂಗಳೂರಿನ ರೈತ-ಸಂಶೋಧಕ ಕೇವಲ HistoryTV18 ನ OMG! Yeh Mera India ದಲ್ಲಿ-ಕಹಳೆ ನ್ಯೂಸ್

ಬೆಂಗಳೂರು : ಮಂಗಳೂರಿನ ಮರ ಹತ್ತುವ ಸ್ಕೂಟರ್‌ ಸಂಶೋಧಕ ಮತ್ತು ಕೊಹ್ಲಿ, ಧೋನಿ ಹಾಗೂ ದ್ರಾವಿಡ್‌ಗೆ ಗೇಮ್‌ಚೇಂಜರ್ ಆದ ಬೆಂಗಳೂರಿನ ವ್ಯಕ್ತಿಯ ಬಗ್ಗೆ HistoryTV18 ನಲ್ಲಿ ಸೋಮವಾರ ಮಾರ್ಚ್ 29 ರಂದು ರಾತ್ರಿ 8 ಗಂಟೆಗೆ ತಿಳಿಯಿರಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತ, March, 2021: ನೀವೇನಾದರೂ ಮಹೇಂದ್ರ ಸಿಂಗ್‌ ಧೋನಿ, ವಿರಾಟ್ ಕೊಹ್ಲಿ, ಕ್ರಿಸ್ ಗೇಯ್ಲ್, ರಿಕಿ ಪಾಂಟಿಂಗ್, ರಾಹುಲ್ ದ್ರಾವಿಡ್‌ ಅಥವಾ ಸಚಿನ್ ತೆಂಡೂಲ್ಕರ್‌ರ ಬಳಿ ರಾಮ್ ಭಂಡಾರಿ ಹೆಸರು ಕೇಳಿದ್ದೀರಾ ಎಂದು ಕೇಳಿದರೆ ನಿಮಗೆ ಅಚ್ಚರಿಯಾಗಬಹುದು. ನಮ್ಮ ಬೆಂಗಳೂರಿನ 55 ವರ್ಷದ ಈ ವ್ಯಕ್ತಿ ಬಗ್ಗೆ ಎಷ್ಟು ಗೌರವವಿದೆ ಮತ್ತು ಅವರು ಎಷ್ಟು ಪರಿಚಿತರು ಎಂದು ನೀವು ಆಶ್ಚರ್ಯಪಡುತ್ತೀರಿ! ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟಿಗರು ಬಳಸುವ ಬ್ಯಾಟ್‌ಗಳನ್ನು ಸಿದ್ಧಪಡಿಸುವ ಬ್ಯಾಟ್ ಡಾಕ್ಟರ್‌ ಬಗ್ಗೆ ಭಾರತದ ಅತಿ ದೀರ್ಘ ವಾಸ್ತವಾಂಶ ಆಧಾರಿತ ಮನರಂಜನೆ ಸರಣಿ OMG! Yeh Mera India ದ ಏಳನೇ ಸರಣಿಯ ಮೊದಲ ಎಪಿಸೋಡ್‌ನಲ್ಲಿ ವಿವರಿಸಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

OMG! Yeh Mera India ಭಾರತೀಯ ಟಿವಿ ಪರದೆಗೆ ವಾಪಸಾಗಿದ್ದು, ಪ್ರತಿ ಸೋಮವಾರ ರಾತ್ರಿ 8 ಗಂಟೆಗೆ HistoryTV18 ನಲ್ಲಿ ಪ್ರಸಾರವಾಗಲಿದೆ. ಇದು ಭಾರತದ ದೊಡ್ಡ ಮತ್ತು ಸಣ್ಣ ನಗರಗಳ ಅದ್ಭುತ ಮತ್ತು ಸ್ಫೂರ್ತಿದಾಯಕ ಕಥೆಗಳ ಬಗ್ಗೆ ಜನರಿಗೆ ಅಚ್ಚರಿ ಮೂಡಿಸಲಿದೆ. ಕಳೆದ ಐದು ವರ್ಷಗಳಲ್ಲಿ ಕೋಟ್ಯಂತರ ಭಾರತೀಯರು ಚಾನೆಲ್ ಅನ್ನು ಇಷ್ಟಪಟ್ಟಿದ್ದು, ಅದ್ಭುತ ರೇಟಿಂಗ್ ಲಭ್ಯವಾಗಿದೆ. ದೇಶದ ವಿವಿಧೆಡೆಯ ಅಷ್ಟೇನೂ ಪರಿಚಿತವಲ್ಲದ ಮತ್ತು ಉತ್ತಮ ಸ್ಟೋರಿಗಳಿಂದಾಗಿ ಹಲವು ವೀಡಿಯೋಗಳು ವೈರಲ್ ಆಗಿದ್ದು, ಇಂಟರ್ನೆಟ್ ಅನ್ನೂ ಇದು ಮೀರಿಸಿದೆ. ಸೀಸನ್‌ 7 ರ ಮೊದಲ ಎಪಿಸೋಡ್‌ನಲ್ಲಿ ಕರ್ನಾಟಕ ರಾಜ್ಯದ ಇಬ್ಬರು ಅದ್ಭುತ ವ್ಯಕ್ತಿಗಳನ್ನು ಪರಿಚಯಿಸಲಾಗುತ್ತಿದೆ.

ಭಾರತೀಯ ವಿಚಾರಕ್ಕೆ ಬಂದರೆ ಕ್ರಿಕೆಟ್ ಎಂಬುದು ಒಂದು ಧರ್ಮ ಇದ್ದ ಹಾಗೆ. ಈ ಕ್ರಿಕೆಟ್ ಜಗತ್ತಿನಲ್ಲಿ, ಬೆಂಗಳೂರಿನ ರಾಮ ಭಂಡಾರಿ ಅತ್ಯಂತ ಮಹತ್ವದ ವ್ಯಕ್ತಿ. 15ನೇ ವರ್ಷದಲ್ಲಿ, ಕಾರ್ಪೆಂಟರಿ ವೃತ್ತಿಯನ್ನು ಇವರು ತನ್ನ ಅಜ್ಜನಿಂದ ಕಲಿತರು ಶಾಲಾ ಮಕ್ಕಳಿಗೆ ಕ್ರಿಕೆಟ್ ಬ್ಯಾಟ್‌ಗಳನ್ನು ರಿಪೇರಿ ಮಾಡುವ ಒಂದು ಸಣ್ಣ ಅಂಗಡಿಯಲ್ಲಿ ಕೆಲಸ ಆರಂಭಿಸಿದರು. ಅಲ್ಲಿ, ಅಚ್ಚರಿಯ ರೀತಿಯಲ್ಲಿ ರಾಹುಲ್ ದ್ರಾವಿಡ್‌ರ ಗಮನಕ್ಕೆ ಬಂದರು. ಪ್ರತಿ ಕ್ರಿಕೆಟಿಗರ ಫೂಟ್‌ವರ್ಕ್‌ ಮತ್ತು ಬಾಡಿ ಲ್ಯಾಂಗ್ವೇಜ್ ಅನ್ನು ಅವರು ಗಮನಿಸುತ್ತಿದ್ದು, ವಿಶೇಷ ಸಾಧನೆ ಮಾಡಲು ಕಾರಣವಾಯಿತು. ಅವರು ಪ್ರತಿ ವ್ಯಕ್ತಿ ಆಟವಾಡುವ ಶೈಲಿಯನ್ನು ಗಮನಿಸುತ್ತಾರೆ. ಈ ಮೂಲಕ ಅವರಿಗೆ ಯಾವ ರೀತಿಯ ಬ್ಯಾಟ್ ಬೇಕು ಎಂದು ನಿರ್ಧರಿಸುತ್ತಾರೆ. ಫ್ಲಾಟ್ ಆಗಿರಬೇಕೆ, ರೌಂಡ್ ಆಗಿರಬೇಕು, ಮುಂದೆ, ಮಧ್ಯೆ ಅಥವಾ ಹಿಂಭಾಗವು ಎಷ್ಟು ತೂಕ ಹೊಂದಿರಬೇಕು ಮತ್ತು ಹಿಡಿಕೆ ಎಷ್ಟು ದಪ್ಪವಾಗಿದ್ದು, ಸೂಕ್ತ ತೂಕದ ಹಂಚಿಕೆ ಆಗಬೇಕು ಎಂಬುದನ್ನು ಅವರು ನಿರ್ಧರಿಸುತ್ತಾರೆ. ಅವರ ನಿಖರತೆ ಮತ್ತು ಕೌಶಲದಿಂದಾಗಿ 2004 ರಲ್ಲಿ ಗಾಯದ ನಂತರದಲ್ಲಿ ಸಚಿನ್‌ ತೆಂಡೂಲ್ಕರ್ ಪುನಃ ಫಾರ್ಮ್‌ಗೆ ಬರಲು ಸಹಾಯವಾಯಿತು. ಇದೇ ಕಾರಣಕ್ಕೆ, ಸಚಿನ್ ಜೀವನಚರಿತ್ರೆ ‘ಸಚಿನ್: ಎ ಬಿಲಿಯನ್ ಡ್ರೀಮ್ಸ್’ ನಲ್ಲಿ ರಾಮ್ ಭಂಡಾರಿ ಕೂಡಾ ಕಾಣಿಸಿಕೊಳ್ಳುತ್ತಾರೆ. ಭಾರತದ ಕೆಲವು ಜನಪ್ರಿಯ ಕ್ರೀಡಾಪಟುಗಳಿಗೆ ಬ್ಯಾಟ್‌ಗಳನ್ನು ಹೇಗೆ ಈ “ಬ್ಯಾಟ್ ಡಾಕ್ಟರ್” ಸಿದ್ಧಪಡಿಸುತ್ತಾರೆ ಎಂದು ನೋಡಲು ಮಾರ್ಚ್ 29 ರಂದು ರಾತ್ರಿ 8 ಗಂಟೆಗೆ ಎಪಿಸೋಡ್ ನೋಡಿ.

ಇದೇ ಎಪಿಸೋಡ್‌ನಲ್ಲಿ ಮಂಗಳೂರಿನ ಇನ್ನೊಬ್ಬ ಸ್ಫೂರ್ತಿದಾಯಕ ವ್ಯಕ್ತಿ ಹಾಗೂ ಅವರ ವಿಶಿಷ್ಟ ಸಂಶೋಧನೆಯೂ ಕಾಣಿಸಿಕೊಳ್ಳಲಿದೆ. ಭಾರತವು ವಿಶ್ವದ ಒಟ್ಟು ಅಡಕೆ ಉತ್ಪಾದನೆಯ ಶೇ. 54 ರಷ್ಟು ಪಾಲು ಹೊಂದಿದೆ ಮತ್ತು ಈ ಬೆಳೆಯ ಪ್ರಮುಖ ಉತ್ಪಾದಕ ಕರ್ನಾಟಕ ರಾಜ್ಯವೇ ಆಗಿದೆ. ಬೆಳೆ ಕಟಾವಿಗೆ ಕುಶಲ ಕಾರ್ಮಿಕರ ಕೊರತೆ, ಅತ್ಯಧಿಕ ವೆಚ್ಚ ಮತ್ತು ವಿಸ್ತಾರವಾದ ತೋಟಗಳ ನಿರ್ವಹಣೆಯಲ್ಲಿ ಸವಾಲಿನಿಂದಾಗಿ ರಾಜ್ಯದ ರೈತರು ತುಂಬಾ ಬಳಲಿದ್ದಾರೆ. ಮಂಗಳೂರಿನ ಕೃಷಿಕ ಮತ್ತು ವಿಜ್ಞಾನ ಪದವೀಧರ ಗಣಪತಿ ಭಟ್‌, ಅದ್ಭುತವಾದ ಮೋಟರೈಸ್ಡ್ ಸ್ಕೂಟರ್‌ ಅನ್ನು ಸಿದ್ಧಪಡಿಸಿದ್ದು, ಈ ಸ್ಕೂಟರ್‌ನಿಂದ ಅಡಕೆ ಮರವನ್ನು ಸುರಕ್ಷಿತವಾಗಿ ಹತ್ತಬಹುದಾಗಿದೆ. ಒಂದು ಲೀಟರ್ ಪೆಟ್ರೋಲ್‌ನಿಂದ ಸುಮಾರು 90 ಮರಗಳನ್ನು ಸ್ಕೂಟರ್‌ನಲ್ಲಿ ಹತ್ತಬಹುದು. ಇದರಿಂದ ದಿನಕ್ಕೆ 600 ಮರಗಳ ಫಸಲನ್ನು ಕಟಾವು ಮಾಡಬಹುದು. ಈ ಅದ್ಭುತ ಭಾರತೀಯ ಸಂಶೋಧಕರ ಬಗ್ಗೆ ತಿಳಿಯಲು HistoryTV18 ಅನ್ನು 29 ಮಾರ್ಚ್‌ ರಂದು ರಾತ್ರಿ 8 ಗಂಟೆಗೆ ವೀಕ್ಷಿಸಿ.

‘OMG! Yeh Mera India’ ಸೀಸನ್ 7 ಅನ್ನು ಪ್ರತಿ ಸೋಮವಾರ ರಾತ್ರಿ 8 ಗಂಟೆಗೆ HistoryTV18 ರಲ್ಲಿ ವೀಕ್ಷಿಸಿ.