Monday, January 20, 2025
ಹೆಚ್ಚಿನ ಸುದ್ದಿ

ಕಾರ್ಕಳ ತಾಲೂಕಿನಲ್ಲಿ ಜಾನುವಾರು ಕಳವು ಮಾಡಿ ,ಮಾಂಸಕ್ಕಾಗಿ ವಧೆಗೆ ಯತ್ನ ; ಓರ್ವ ವಶಕ್ಕೆ, ಮತ್ತೋರ್ವ ಪರಾರಿ-ಕಹಳೆ ನ್ಯೂಸ್

ಕಾರ್ಕಳ : ಕಾರ್ಕಳ ತಾಲೂಕು ರೆಂಜಾಳ ಗ್ರಾಮದ ರೆಂಜಾಳ ಕಾಪು ಹೌಸ್ ಎಂಬಲ್ಲಿ ಶನಿವಾರ ಬೆಳಿಗ್ಗೆ 05:30 ಗಂಟೆಗೆ ಜಾನುವಾರು ಕಳ್ಳತನ ಮಾಡಿ, ಮಾಂಸಕ್ಕಾಗಿ ಜಾನುವಾರುಗಳನ್ನು ಹಾಡಿಯಲ್ಲಿ ಕಟ್ಟಿ ಹಾಕಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕರು, ಜನಾರ್ಧನ್ ಕೆ ಅವರಿಗೆ ದೊರೆತ ಖಚಿತ ಮಾಹಿತಿ ಆಧಾರದಲ್ಲಿ ದಾಳಿ ಮಾಡಿ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗೂ ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ. ಬಂಧಿತನನ್ನು ರೆಂಜಾಳದ ಅಬ್ದುಲ್ ಖಾದರ್ ಎಂದು ಗುರುತಿಸಲಾಗಿದೆ, ಆರೋಪಿಗಳು ಎಲ್ಲಿಂದಲೋ ಜಾನುವಾರುಗಳನ್ನು ಕಳವು ಮಾಡಿಕೊಂಡು ಬಂದು ಕಡಿದು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶ ಹೊಂದಿದ್ದು, ಹಾಡಿಯಲ್ಲಿ ಸುಮಾರು 15,000 ರೂ. ಮೌಲ್ಯದ ನಸು ಕಂದು ಬಣ್ಣದ ದನ 01, ನಸು ಬಣ್ಣದ ಕರು 01, ನಸು ಕಂದು ಬಣ್ಣದ ಕರು -01, ನಸು ಕೆನೆ ಬಣ್ಣದ ಕರುವನ್ನು ಅವುಗಳ ಕುತ್ತಿಗೆಗೆ ನೈಲಾನ್ ಹಗ್ಗದಿಂದ ಕಟ್ಟಿ ಹಾಕಲಾಗಿತ್ತು ಎಂದು ತಿಳಿದು ಬಂದಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು