ಬಾಗೇಪಲ್ಲಿ : ರಾಜ್ಯ ಒಕ್ಕಲಿಗರ ಸಂಘಕ್ಕೆ ಮುಂದಿನ ಮೂರು ತಿಂಗಳಲ್ಲಿ ಚುನಾವಣೆ ನಡೆಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ ನೀಡಿದೆ. ಇದರ ಹಿನ್ನೆಲೆಯಲ್ಲಿ ಒಕ್ಕಲಿಗರ ಸಂಘದಲ್ಲಿ ಚುನಾವಣೆ ಕಣ ರಂಗೇರಿದೆ ಇದರ ಹಿನ್ನೆಲೆಯಲ್ಲಿ ಪಾತಪಾಳ್ಯ ಹೋಬಳಿ, ತೋಳ್ಳಪಲ್ಲಿ ಪಂಚಾಯತಿ ವ್ಯಾಪ್ತಿಯ ಮದ್ದಮ್ಮ ದೇವಾಲಯ ಆವರಣದಲ್ಲಿ ಒಕ್ಕಲಿಗರ ಚುನಾವಣೆಯ ಪೂರ್ವಭಾವಿ ಸಭೆಯನ್ನು ಪಾತಪಾಳ್ಯ ಹೋಬಳಿ ಮತ್ತು ಚೇಳೂರು ಗ್ರಾಮದ ಒಕ್ಕಲಿಗರ ಸಂಘ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ನಿವೃತ್ತ ಡಿವೈಎಸ್ಪಿ ಮತಯಾಚನೆ ಮಾಡಿ ಮಾತನಾಡಿದ, ಅನ್ನದಾತರೆನಿಸಿರುವ ಒಕ್ಕಲಿಗ ಸಮುದಾಯ ರಾಜ್ಯದ ಜನಸಂಖ್ಯೆಯಲ್ಲಿ ಶೇ.17ರಷ್ಟಿದ್ದು ರಾಜ್ಯದ ಬೊಕ್ಕಸಕ್ಕೆ ಶೇ.65 ಆದಾಯವನ್ನು ಸಲ್ಲಿಸುವ ಮೂಲಕ ನಾಡಿನ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಅದರೆ ನಮ್ಮ ಒಕ್ಕಲಿಗ ಜನಾಂಗದಲ್ಲಿ ಒಗ್ಗಟ್ಟು ಇಲ್ಲ ನಮ್ಮ ಜನಾಂಗ ಅಭಿವೃದ್ಧಿ ಪಥದಲ್ಲಿ ಸಾಗಿತಿದ್ದರೆ ನಮ್ಮ ಜನಾಂಗದವರೇ ಕಾಲು ಎಳೆಯುತ್ತಾರೆ ನಮ್ಮಲ್ಲಿ ಒಗ್ಗಟ್ಟಿಲ್ಲ. ಎಂದು ವಿಷಾದ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಸುಮಾರು 35 ಒಕ್ಕಲಿಗ ನಿರ್ದೇಶಕ ಸ್ಥಾನಗಳ ಪೈಕಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 3 ನಿರ್ದೇಶಕ ಸ್ಥಾನಗಳನ್ನು ಘೋಷಣೆ ಮಾಡಿದ್ದು ಈ ಮೂರು ಸ್ಥಾನಗಳ ಪೈಕಿ ನಾನು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನದ ಆಕಾಂಕ್ಷಿಯಾಗಿದ್ದು, ನಾನು ಸುಮಾರು 25 ವರ್ಷಗಳಿಂದ ಡಿವೈಎಸ್ಪಿಯಾಗಿ ಎಲ್ಲರಲ್ಲೂ ಚಿರಪರಿಚಿತರಾಗಿದ್ದು ಇಂದು ನಿವೃತ್ತಿ ಜೀವನದಲ್ಲಿ ಸೇವೆ ಮಾಡಲು ಬಂದಿದ್ದೇನೆ ಆದ್ದರಿಂದ ಎಲ್ಲಾ ಒಕ್ಕಲಿಗರು ಮೊದಲ ಪ್ರಾಶಸ್ತ್ಯ ಮತವನ್ನು ಕೊಟ್ಟು ಗೆಲ್ಲಿಸ ಬೇಕೆಂದು ಮನವಿ ಮಾಡಿದರು.
ಬಾಗೇಪಲ್ಲಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ನರಸಿಂಹಾ ರೆಡ್ಡಿ ರಾಜ್ಯ ಬಜೆಟ್‍ನಲ್ಲಿ ಒಕ್ಕಲಿಗರ ಪ್ರಾಧಿಕಾರಕ್ಕೆ ₹500 ಕೋಟಿ ಅನುದಾನ ಮೀಸಲಿಟ್ಟಿರುವುದು ಒಳ್ಳೆಯ ಬೆಳವಣಿಗೆ. ಉಳುಮೆ ಮಾಡುವವರೆಲ್ಲರೂ ಒಕ್ಕಲಿಗರು. ಜನಾಂಗದವರು ಸ್ವಾಭಿಮಾನದಿಂದ ಬದುಕುತ್ತಿದ್ದು, ಸಮುದಾಯದ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಅದ್ದರಿಂದ ನಮ್ಮ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘ ಬಲವರ್ಧನೆ ಹಾಗೂ ಅಭಿವೃದ್ಧಿಗಾಗಿ ಉತ್ತಮ ನಿರ್ದೇಶಕರ ಆಯ್ಕೆ ಅನಿವಾರ್ಯ ವಾಗಿದೆ ಇದುವರೆಗೆ ನಮ್ಮ ಜಿಲ್ಲೆಯಿಂದ ಯಾರು ನಿರ್ದೇಶಕ ಸ್ಥಾನವನ್ನು ಪಡೆದಿಲ್ಲ ಇಂದು ಒಳ್ಳೆಯ ಸಮಯ ಕೂಡಿಬಂದಿದೆ ನಾವು ಒಗ್ಗಟ್ಟನ್ನು ಪ್ರದರ್ಶಿಸಿ ನಮ್ಮ ನಾಯಕರಾದ ಕೊನಪರೆಡ್ಡಿ ಗೆಲ್ಲುಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.
ಬಾಗೇಪಲ್ಲಿ ತಾಲೂಕು ಒಕ್ಕಲಿಗ ಸಂಘದ ಕಾರ್ಯದರ್ಶಿಗಳಾದ ಸೋಮಶೇಖರ ರೆಡ್ಡಿ ಮಾತನಾಡಿ, ಬಾಗೇಪಲ್ಲಿ ತಾಲೂಕು ಹಾಗೂ ಚೇಳೂರು ಗ್ರಾಮದಲ್ಲಿ ತನ್ನ ಒಕ್ಕಲಿಗರ ಸಂಘದಲ್ಲಿ ಬಾಗೇಪಲ್ಲಿ ಪಟ್ಟಣದ ಬಿಜಿಎಸ್ ಶಾಲೆಯಲ್ಲಿ ಪಕ್ಕದಲ್ಲಿ ನಾಲ್ಕು ಎಕರೆ ಜಾಗದಲ್ಲಿ ಬಾಲಕರ ಮತ್ತು ಬಾಲಕಿಯರ ವಸತಿ ನಿಲಯಕ್ಕೆ ಸುಮಾರು 18 ಕೊಠಡಿಗಳು ನಿರ್ಮಾಣ ಮಾಡಿದ್ದು ಒಕ್ಕಲಿಗರ ಭವನ ಕಟ್ಟಲು ದಾನಿಗಳ ನೆರವಿ ಬೇಕಾಗಿದೆ ಮುಂದಿನ ದಿನಗಳಲ್ಲಿ ಶತಾಯಗತಯ ನಿರ್ಮಾಣ ಮಾಡುತ್ತೆವೆ ಎಂದು ಹೇಳಿದರು ನಾವು ಒಗ್ಗಟ್ಟನಿಂದ ನಮ್ಮ ನಾಯಕರನ್ನು ಗೆಲ್ಲಸೋಣ ಎಂದು ಹೇಳಿದರು. ಈ ಸಂದರ್ಭದಲ್ಲಿ ಪಿ.ಎಲ್.ಡಿ.ಬ್ಯಾಂಕಿನ ಅದ್ಯಕ್ಷ ನರಸಿಂಹಾ ರೆಡ್ಡಿ,ಡಿ.ಸಿ.ಸಿ ಬ್ಯಾಂಕ್ ಅದ್ಯಕ್ಷ ವೆಂಕಟಶಿವಾರೆಡ್ಡಿ, ಯುವ ಮುಖಂಡ ಹರಿನಾಥ ರೆಡ್ಡಿ, ತಾಲ್ಲೂಕು ಪಂಚಾಯತಿ ಸದಸ್ಯ ಕಲ್ಲಪಲ್ಲಿ ವೆಂಕಟೇಶ್ ನಿರ್ದೇಶಕ ಪಾತಕೋಟ ಸುಬ್ಬಾರೆಡ್ಡಿ,ಗಂಗಿರೆಡ್ಡಿ ನಾಗರಾಜು ನಿವೃತ್ತ ಸಹಾಯಕ ಕೃಷಿ ಅಧಿಕಾರಿಗಳಾದ ಕೆ.ವಿ.ವೆಂಕಟಸುಬ್ಬಾರೆಡ್ಡಿ , ಪಾತಪಾಳ್ಯ ಹೋಬಳಿ ಹಾಗೂ ಚೇಳೂರು ಗ್ರಾಮದ ಒಕ್ಕಲಿಗರು ಹಾಜರಿದ್ದರು.