Recent Posts

Friday, November 22, 2024
ಉಡುಪಿ

ಉಡುಪಿಯ ಜಿಲ್ಲೆಯ ಇನ್ನಂಜೆಯಲ್ಲಿ ಆಟವಾಡುತ್ತಿದ್ದಂತೆ ಕುಸಿದು ಬಿದ್ದು ಕೊನೆಯುಸಿರೆಳೆದ ರಾಜ್ಯ ಮಟ್ಟದ ವಾಲಿಬಾಲ್ ಆಟಗಾರ-ಕಹಳೆ ನ್ಯೂಸ್

ಉಡುಪಿ : ಉಡುಪಿಯ ಜಿಲ್ಲೆಯ ಇನ್ನಂಜೆಯಲ್ಲಿ ವಾಲಿಬಾಲ್ ಕೋರ್ಟ್‍ನ ಪಕ್ಕದಲ್ಲೇ ಅಭ್ಯಾಸ ನಡೆಸುತ್ತಿದ್ದ ಸಂದರ್ಭದಲ್ಲಿ ರಾಜ್ಯ ಮಟ್ಟದ ವಾಲಿಬಾಲ್ ಆಟಗಾರ ಆಟವಾಡುತ್ತಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತ ಆಟಗಾರ ಕುರ್ಕಾಲು ಸುಭಾಸ್ ನಗರ ನಿವಾಸಿ 33 ವರ್ಷದ ದೇವು ಯಾನೆ ದೇವರಾಜ್ ಎಂದು ಗುರುತಿಸಲಾಗಿದೆ. ಅವರು ಈ ಹಿಂದೆ ಕಲ್ಲು ಗಣಿಯೊಂದರಲ್ಲಿ ರೈಟರ್ ಆಗಿ ದುಡಿಯುತ್ತಿದ್ದರು. ಶನಿವಾರ ರಾತ್ರಿ ಇನ್ನಂಜೆಯಲ್ಲಿ ನಡೆಯುತ್ತಿದ್ದ ಇನ್ನಂಜೆ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಇನ್ನಂಜೆ ಚಾಲೆಂಜರ್ಸ್ ತಂಡದ ಪರವಾಗಿ ಆಟವಾಡುತ್ತಿದ್ದ ದೇವರಾಜ್ ಅವರು ರಾತ್ರಿ 1 ಗಂಟೆಯ ವೇಳೆಗೆ ಆಟವಾಡುತ್ತಿದ್ದಾಗಲೇ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದರು. ಕೂಡಲೇ ಅವರನ್ನು ಉಡುಪಿ ಆಸ್ಪತ್ರೆಗೆ ಕರೆದೊಯ್ದಿದ್ದು, ಅಷ್ಟರಲ್ಲೇ‌ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು. ಅವಿವಾಹಿತರಾಗಿದ್ದ ಇವರು ನಾಲ್ಕು ತಿಂಗಳ ಹಿಂದೆಯಷ್ಟೇ ತಂದೆಯನ್ನು ಕಳೆದುಕೊಂಡಿದ್ದರು ಇದೀಗ ತಾಯಿ ಹಾಗೂ ಐದು ಮಂದಿ ಸಹೋದರಿಯರನ್ನು ಅಗಲಿದ್ದಾರೆ. ರಾಜ್ಯ ಮಟ್ಟದ ಹಲವಾರು ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದ ಅವರು ಆರಂಭದಲ್ಲಿ ಕುರ್ಕಾಲು ಸುಭಾಸ್ ನಗರ ತಂಡದ ಆಟಗಾರನಾಗಿ, ಬಳಿಕ ರಾಜ್ಯ ಮಟ್ಟದ ವಿವಿಧ ತಂಡಗಳಲ್ಲಿ ಆಟಗಾರನಾಗಿ ವಾಲಿಬಾಲ್ ಆಟದಲ್ಲಿ ನಿರತರಾಗಿದ್ದರು. ಅವರ ಸ್ಮರಣಾರ್ಥವಾಗಿ ಇನ್ನಂಜೆ ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯಾವಳಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿದ್ದು, ವಿವಿಧೆಡೆ ಪಂದ್ಯಾವಳಿಯ ನಡುವೆಯೇ ಸಂತಾಪ ಸೂಚಕ ಸಭೆ ನಡೆಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು