Tuesday, January 21, 2025
ಬಂಟ್ವಾಳ

ಕಕ್ಯಪದವುನಲ್ಲಿ ನಡೆದ ಕಂಬಳದಲ್ಲಿ ಮತ್ತೆ ದಾಖಲೆ ಬರೆದ ಮಿಜಾರು ಶ್ರೀನಿವಾಸಗೌಡ-ಕಹಳೆ ನ್ಯೂಸ್

ಬಂಟ್ವಾಳ : ಭಾನುವಾರ ಕಕ್ಯಪದವುನಲ್ಲಿ ನಡೆದ ಕಂಬಳದಲ್ಲಿ 8.78 ಸೆಕೆಂಡ್ ನಲ್ಲಿ 100 ಮೀಟರ್ ಕ್ರಮಿಸಿ ಕಂಬಳದ ಉಸೇನ್ ಬೋಲ್ಟ್ ಖ್ಯಾತಿಯ ಮಿಜಾರು ಅಶ್ವಥಪುರ ಮಿಜಾರು ಅವರು ಮತ್ತೊಂದು ಹೊಸ ದಾಖಲೆ ನಿರ್ಮಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ವಾರ ವೇಣೂರಿನಲ್ಲಿ ನಡೆದ ಕಂಬಳದಲ್ಲಿ 8.89 ಸೆಕೆಂಡ್ ಗಳಲ್ಲಿ 100 ಮೀಟರ್ ಕ್ರಮಿಸಿ ಅವರು ದಾಖಲೆ ಬರೆದಿದ್ದರು. ಮತ್ತು ಕಕ್ಯಪದವು ಮೈರಾ ಸತ್ಯ – ಧರ್ಮ ಜೋಡುಕರೆ ಬಯಲು ಕಂಬಳದಲ್ಲಿ ತಮ್ಮ ದಾಖಲೆಯನ್ನು ಭಾನುವಾರ ಹಿಂದಿಕ್ಕಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಮಿಜಾರು ಪ್ರಸಾದ್ ನಿಲಯದ ಶಕ್ತಿಪ್ರಸಾದ್ ಮಾಲೀಕರಾಗಿರುವ ಕೋಣಗಳನ್ನು ಓಡಿಸಿದ ಶ್ರೀನಿವಾಸಗೌಡ 8.78 ಸೆಕೆಂಡ್ ನಲ್ಲಿ 100 ಮೀಟರ್ ಕ್ರಮಿಸಿ ದಾಖಲೆ ಬರೆದಿದ್ದಾರೆ. ಹಾಗೂ ಈ ಬಾರಿಯ ಕಂಬಳದ ಸೀಸಸ್ ನಲ್ಲಿ ಅತಿ ಹೆಚ್ಚು 18 ಪದಕಗಳನ್ನು ಗಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು