Tuesday, January 21, 2025
ಹೆಚ್ಚಿನ ಸುದ್ದಿ

ಒಕ್ಕಲಿಗರ ಸಂಘದಲ್ಲಿ ಪಕ್ಷ ರಾಜಕೀಯ ಬೇಡ ; ತಾಲೂಕು ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ ರೆಡ್ಡಿ ಗಂಭೀರ ಆರೋಪ-ಕಹಳೆ ನ್ಯೂಸ್

ಬಾಗೇಪಲ್ಲಿ : ಪಾತಪಾಳ್ಯ ಹೋಬಳಿ ತೋಳ್ಳಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೇಂದ್ರದ ಕೊಳ್ಳೊರುಪಲ್ಲಿ ಮದ್ದಮ್ಮ ದೇವಾಲಯದ ಆವರಣದಲ್ಲಿ ಶನಿವಾರ ನಡೆದ ಒಕ್ಕಲಿಗರ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ಪಕ್ಷದ ಯುವ ಮೊರ್ಚಾ ಅದ್ಯಕ್ಷ ಹಾಗೂ ತೋಳ್ಳಪಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜುನಾಥ ರೆಡ್ಡಿ ಯವರನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮೊನ್ನೆ ನಡೆದ ಅಂದರೆ ಒಕ್ಕಲಿಗರ ಚುನಾವಣೆ ಪೂರ್ವಭಾವಿ ಕಾರ್ಯಕ್ರಮ ನನ್ನ ವ್ಯಾಪ್ತಿಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿದ್ದು ನಾನು ಕೇವಲ ಬಿಜೆಪಿ ಪಕ್ಷದವರು ಎಂದು ನಾನು ಈ ಗ್ರಾಮ ಪಂಚಾಯತಿ ಅಧ್ಯಕ್ಷನಾಗಿದ್ದು ಈ ಕಾರ್ಯಕ್ರಮದಲ್ಲಿ ನನ್ನನ್ನು ಸೌಜನ್ಯಕ್ಕಾದರೂ ವೇದಿಕೆ ಮೇಲೆ ಕರೆಯದೆ ನನ್ನನ್ನು ಅಪಮಾನ ಮಾಡಿದ್ದಾರೆ ಹಾಗೂ ನಾನು ಕೇವಲ ಬಿಜೆಪಿ ಪಕ್ಷದವರು ಎಂದು ಕಡಗೆಣಿಸಿದ್ದಾರೆ. ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ಅಧ್ಯಕ್ಷ ಹಾಗೂ ತೋಳ್ಳಪಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಂಜುನಾಥ ರೆಡ್ಡಿ ಗಂಭೀರವಾಗಿ ಆರೋಪಿಸಿದ್ದಾರೆ. ಅವರ ತೋಳ್ಳಪಲ್ಲಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಪತ್ರಿಕಾ ಗೋಷ್ಠಿಯನ್ನು ಕರೆದು ಮಾತನಾಡಿ, ಅಂದು ನಡೆದ ಒಕ್ಕಲಿಗರ ಚುನಾವಣೆ ಪೂರ್ವಭಾವಿ ಸಭೆಯಲ್ಲ, ಅದು ಕಾಂಗ್ರೆಸ್ ಪಕ್ಷ ಹಾಗೂ ಜೆ.ಡಿ.ಎಸ್ ಪಕ್ಷದ ಸಭೆ ಎಂದು ಗಂಭೀರವಾಗಿ ಆರೋಪಿಸಿದರು. ಇನ್ನೂ ಒಕ್ಕಲಿಗರ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಿಲ್ಲ. ಇಂತಹ ಸಂದರ್ಭದಲ್ಲಿ ಇವರು ಎಲ್ಲಾ ಪಕ್ಷದ ಒಕ್ಕಲಿಗರನ್ನು ಗಣನೆಗೆ ತೆಗೆದುಕೊಳ್ಳುಲ್ಲದೆ ಅಲ್ಲ ವೇದಿಕೆಯಲ್ಲಿ ಕೇವಲ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಜೆ.ಡಿ.ಎಸ್. ಪಕ್ಷದ ಮುಖಂಡ ವೇದಿಕೆಯಲ್ಲಿ ಇದ್ದರು ಯಾಕೆ ಸ್ವಾಮಿ ನಾನೇನು ತಪ್ಪು ಮಾಡಿದ್ದೀನಿ, ನಾನು ಸ್ಥಳೀಯ ಒಕ್ಕಲಿಗರ ಮುಖಂಡ, ಹಾಗೂ ನೀವು ಎಲ್ಲಿ ಒಕ್ಕಲಿಗರ ಸಮಾವೇಶ ಕಾರ್ಯಕ್ರಮ ಆಯೋಜಿಸಿದ್ದರೋ ಅಲ್ಲಿಯ ಗ್ರಾಮ ಪಂಚಾಯತಿ ಅದ್ಯಕ್ಷ ಹಾಗೂ ಬಾಗೇಪಲ್ಲಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ, ಅಂದು ಕಾರ್ಯಕ್ರಮದಲ್ಲಿ ಬರಿ ಚುನಾವಣೆ ಬಗ್ಗೆ ಮಾತನಾಡಿದರು ಅಲ್ಲಿ ಒಕ್ಕಲಿಗರಲ್ಲಿ ಯಾರೂ ಬಡವರು ಇಲ್ಲವಾ ನಮ್ಮ ಸಂಘದಲ್ಲಿ ನಮ್ಮ ಸಮುದಾಯದರ ಬಾಲಕಯರ ಹಾಗೂ ಬಾಲಕಿಯರ ಹಾಸ್ಟೆಲ್ ಗಳು, ಉನ್ನತ ಸ್ಥಾನದಲ್ಲಿ ಓದಲು ಡಾಕ್ಟರೇಟ್ ಪದವಿ ಇಂಜಿನಿಯರಿಂಗ್ ಪದವಿ ಸೀಟುಗಳ ಬಗ್ಗೆ ಚರ್ಚೆ ನಡೆಸಿದೆ ಕೇವಲ ನಿಮ್ಮ ಬೇಳೆ ಬೆಯಿಸಕೊಳ್ಳೊ ಚುನಾವಣೆಗಾಗಿ ಒಕ್ಕಲಿಗರನ್ನು ಓಟು ರಾಜಕಾರಣ ಮಾಡುತ್ತಿರವುದು ನಾನು ಖಂಡಿಸುತ್ತೇನೆ ಎಂದು ಹೇಳಿದರು. ಬಿಜೆಪಿ ಪಕ್ಷದ ಯಡಿಯೂರಪ್ಪ ಒಕ್ಕಲಿಗರಿಗೆ ಒಳ್ಳೆಯದೇ ಮಾಡಿದ್ದಾರೆ. ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ 500 ಕೋಟಿ ಘೋಷಣೆ ಮಾಡಿದ್ದಾರೆ. ಬಿ.ಎಸ್. ಯಡಿಯೂರಪ್ಪ ತಮ್ಮ ರಾಜಕೀಯ ಜೀವನದಲ್ಲಿ ಎಂದೂ ಜಾತಿ ರಾಜಕೀಯ ಮಾಡಿಲ್ಲ ಎಲ್ಲಾ ಸಮುದಾಯದ ದವರನ್ನು ಒಗ್ಗೂಡಿಸಿ ಒಳ್ಳೆಯ ಆಡಳಿತವನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು