Monday, January 20, 2025
ಪುತ್ತೂರು

ಕಾವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಲು ಸುಲಭದ ದಾರಿ; ಮುಳಿಯ ಕುಟಂಬದಿಂದ 108 ಮೆಟ್ಟಿಲ ಸೋಪಾನ ಮಾಲೆ ಸಮರ್ಪಣೆ-ಕಹಳೆ ನ್ಯೂಸ್

ಪುನರ್ ನವೀಕರಣಗೊಂಡ ಕಟ್ಟೆಯಲ್ಲಿ ಶ್ರೀ ದೇವರಿಂದ ಕಟ್ಟೆ ಪೂಜೆ ಸ್ವೀಕಾರ :

ಪುತ್ತೂರು : ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲಿ ಹೋಗಲು ಭಕ್ತರಿಗೆ ಸುಲಭದ ದಾರಿಯಾಗಿ ಮುಳಿಯ ಕುಟಂಬದಿಂದ ಕಾವಿನಲ್ಲಿರುವ ಮುಳಿಯ ಪಂಚಸಿರಿ ಬಡಾವಣೆಯಿಂದ 108 ಮೆಟ್ಟಿಲ ಸೋಪಾನ ಮಾಲೆಯನ್ನು ಮಾ.26ರಂದು ಸಂಜೆ ಸಮರ್ಪಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಅನಾದಿ ಕಾಲದ ಇತಿಹಾಸವಿದ್ದ ನವಿಕರಣಗೊಂಡ ಕಟ್ಟೆಯಲ್ಲಿ ಶ್ರೀ ದೇವರು ಕಟ್ಟೆ ಪೂಜೆ ಸ್ವೀಕರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಜಾಹೀರಾತು
ಜಾಹೀರಾತು
ಜಾಹೀರಾತು

ದೇವರ ಸೇವೆ ಮಾಡುವುದು ಪುಣ್ಯದ ಕಾರ್ಯ – ನನ್ಯ ಅಚ್ಯುತ ಮೂಡೆತ್ತಾಯ :

ನನ್ಯ ಶ್ರೀ ದಂಡನಾಯಕ ದೈವಗಳ ಆಡಳಿತ ಮೊಕ್ತೇಸರರು ಮತ್ತು ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪವಿತ್ರ ಪಾಣಿ ನನ್ಯ ಅಚ್ಯುತ ಮೂಡೆತ್ತಾಯ ಅವರು ತೆಂಗಿನಕಾಯಿ ಒಡೆಯುವ ಮೂಲಕ ಮೆಟ್ಟಿಲುಗಳನ್ನು ಸಮರ್ಪಣೆ ಮಾಡಿದರು. ಬಳಿಕ ಅವರು ಮಾತನಾಡಿ ಬಹಳ ಪುರಾತನ ಕಾಲದಿಂದಲೂ ಇಲ್ಲಿ ಕಟ್ಟೆ ಪೂಜೆ ನಡೆಯುತ್ತಿತ್ತು. ಆದರೆ ಕಾಲ ಕ್ರಮೇಣ ಸ್ಥಗಿತಕೊಂಡಿದ್ದ ಕಟ್ಟೆ ಪೂಜೆಯನ್ನು ಮುಳಿಯ ಕುಟುಂಬ ಈ ಜಮೀನನ್ನು ಅಭಿವೃದ್ಧಿ ಪಡಿಸಿ ಸಮುಚ್ಚಾಯದ ಮೂಲಕ ಹೆಚ್ಚಿನ ಜನರಿಗೆ ನೆಮ್ಮದಿ ಕರುಣಿಸುವ ಜೊತೆಗೆ ಅನಾದಿ ಕಾಲದಿಂದಲೂ ನಡೆಯುತ್ತಿದ್ದ ಕಟ್ಟೆ ಪೂಜೆಗೆ ಮತ್ತೊಮ್ಮೆ ಅದೇ ಸ್ಥಳದಲ್ಲಿ ಕಟ್ಟೆ ಪುನರ್ ನವೀಕರಣಗೊಳಿಸಿ ಶ್ರೀ ದೇವರು ಕಟ್ಟೆ ಪೂಜೆ ಸ್ವೀಕರಿಸಲು ಅನುವು ಮಾಡಿಕೊಟ್ಟಿರುವುದು ದೇವರ ಸೇವೆಯಾದರೆ ಮತ್ತೊಂದು ಕಡೆ ಭಕ್ತರು ಶಬರಿಮಲೆ, ತಿರುಪತಿ ದೇವಸ್ಥಾನಕ್ಕೆ ಮೆಟ್ಟಿಲು ಏರಿ ಹೋಗುವಂತೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೂ 108 ಮೆಟ್ಟಿಲು ಏರಿ ಶ್ರೀ ದೇವರ ದರುಶನ ಭಾಗ್ಯ ಒದಗಿಸಿದ್ದಾರೆ. ಈ ಸೋಪಾನಾ ಮೆಟ್ಟಿಲುಗಳ ಮಾಲೆಯಲ್ಲಿ ಪ್ರತಿ ಮೆಟ್ಟಿಲುಗಳನ್ನು ಹತ್ತುವಾಗಲು ಶಿವ ಸಂಕೀರ್ತನೆ ಹೇಳಿಕೊಂಡು ಹೋಗುವಂತೆ ಒದಗಿಸಿಕೊಟ್ಟಿದ್ದಾರೆ. ಪ್ರಸ್ತುತ ಅವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿದ್ದು ಮುಂದೆ ಅನೇಕ ಅಭಿವೃದ್ಧಿ ಕಾರ್ಯ ಅವರ ಅವಧಿಯಲ್ಲಿ ಆಗಲಿ ಎಂದರು.

ಮೆಟ್ಟಿಲು ಯೋಜನೆ ಕಲ್ಪನೆವೇಳೆ ಮಹಾಲಿಂಗೇಶ್ವರ ಸೇವೆ ಭಾಗ್ಯ:

ಮುಳಿಯ ಜ್ಯುವೆಲ್ಸ್‍ನ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಅವರು ಮಾತನಾಡಿ ಮೂರು ವರ್ಷದ ಹಿಂದೆ ಅಣ್ಣ ಕೇಶವ ಪ್ರಸಾದ್ ಮುಳಿಯ ಅವರ ಕಲ್ಪನೆ ಇತ್ತು. ಆಗ ಇಲ್ಲಿ ಭಾರಿ ದೊಡ್ಡ ಧರೆ ನೋಡಿ ಒಂದು ವರ್ಷ ಮಣ್ಣಿನ ಕೆಲಸ ಮಾಡಿದ ಬಳಿಕ ಮತ್ತೊಂದು ವರ್ಷ ಮೆಟ್ಟಿಲ ಕೆಲಸವನ್ನು ಒಂದು ಟೀಮ್ ವರ್ಕ್‍ನಿಂದ ಆಗಿದೆ. ಅಣ್ಣನಿಗೆ ಈ ಮೆಟ್ಟಿಲು ಯೋಜನೆ ಕಲ್ಪನೆ ಬಂದ ಮೇಲೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಒಂದು ಸೇವೆ ಮಾಡಲು ಅವಕಾಶ ಕೂಡಾ ಕೂಡಿ ಬಂತು ಎಂದರು.

ಮೆಟ್ಟಿಲ ಮಾಲೆ ಸೇವೆ ಪುಣ್ಯದ ಕೆಲಸ:

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅವರು ಸ್ವಾಗತಿಸಿ ಮಾತನಾಡಿ ದೇವರಿಗೆ ಹತ್ತಿರವಾಗಬೇಕೆಂಬ ನಿಟ್ಟಿನಲ್ಲಿ 108 ಮೆಟ್ಟಿಲುಗಳ ಸೋಪಾನ ಮಾಲೆ ಮಾಡುವುದು ಮುಳಿಯ ಕುಟುಂಬಕ್ಕೆ ಸಿಕ್ಕಿರುವುದು ಪುಣ್ಯದ ಕಾರ್ಯ ಎಂದರು. ಕೃಷ್ಣ ನಾರಾಯಣ ಮುಳಿಯ ಮತ್ತು ಪ್ರಾಪರ್ಟಿಸ್ ವ್ಯವಸ್ಥಾಪಕ ರಮೇಶ್ ಭಟ್‍ರವರು ಸೋಪಾನಮಾಲೆ ನಿರ್ಮಾಣದಲ್ಲಿ ಸಮರ್ಪಿಸಿಕೊಂಡಿದ್ದು ಸುಂದರವಾಗಿ ಮೂಡಿಬಂದಿದೆ ಎಂದು ಕೇಶವ ಪ್ರಸಾದ್ ಮುಳಿಯರವರು ತಿಳಿಸಿದರು. ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಭಾಸ್ಕರ್ ಮದ್ಲ, ಕೃಷ್ಣಪ್ರಸಾದ್ ಕೊಚ್ಚಿ, ಮುಳಿಯ ಜ್ಯುವೆಲ್ಲರ್ಸ್‍ನ ಅಶ್ವಿನಿಕೃಷ್ಣ ಮುಳಿಯ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು. ಮೆಟ್ಟಿಲುಗಳ ಸಮರ್ಪಣಾ ಬಳಿಕ ಧೀ ಶಕ್ತಿ ಮಹಿಳಾ ಯಕ್ಷ ಬಳಗದಿಂದ ಯಕ್ಷಗಾನ ತಾಳಮದ್ದಳೆ ನಡೆಯಿತು.