Tuesday, January 21, 2025
ಮೂಡಬಿದಿರೆ

ಮೂಡುಬಿದಿರೆ ಭಜರಂಗದಳದ ಬೃಹತ್ ಕಾರ್ಯಾಚರಣೆ ; ಹಿಂದೂ ಯುವತಿ ಮುಸ್ಲಿಂ ಯುವಕ ಪೊಲೀಸ್ ವಶ–ಕಹಳೆ ನ್ಯೂಸ್

ಮೂಡುಬಿದಿರೆ : ಮೂಡುಬಿದಿರೆ ಇಲ್ಲಿನ ಭಜರಂಗದಳ ಖಚಿತ ಮಾಹಿತಿಯ ಮೇರೆಗೆ ಗುರುಪುರ ಕೈಕಂಬದಲ್ಲಿ ಮುಂಬೈಗೆ ಹೊರಟ ರೇಶ್ಮಾ ಬಸ್ಸನ್ನು ತಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು ಭಜರಂಗದಳ ಕಾರ್ಯಕರ್ತರು ಖಚಿತ ಮಾಹಿತಿಯನ್ನು ಮೂಡುಬಿದಿರೆ ಭಜರಂಗದಳ ಕಾರ್ಯಕರ್ತರಿಗೆ ರವಾನಿಸಿದ್ದು ಈ ಮಾಹಿತಿಯ ಮೇರೆಗೆ ಬಸ್ ತಡೆದಿದ್ದಾರೆ. ಈ ಸಂದರ್ಭದಲ್ಲಿ ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿ ಪರಾರಿಯಾಗಲು ತಯಾರಾಗಿ ಬಂದಿದ್ದರು ಎನ್ನಲಾಗಿದೆ. ಮಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಈ ಇಬ್ಬರೂ ಮುಂಬೈಗೆ ಪರಾರಿಯಾಗಲು ಸಿದ್ದತೆ ನಡೆಸಿದ್ದರು. ಇದೀಗ ಮೂಡುಬಿದಿರೆ ಭಜರಂಗದಳ ಕಾರ್ಯಕರ್ತರ ಬಲೆಗೆ ಬಿದ್ದಿದ್ದು ಸದ್ಯ ಈ ಇಬ್ಬರೂ ಮೂಡುಬಿದಿರೆ ಪೊಲೀಸ್ ವಶದಲ್ಲಿದ್ದಾರೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದು ಸತ್ಯಾಂಶ ಇನ್ನಷ್ಟೇ ಹೊರಬರಬೇಕಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು