Tuesday, January 21, 2025
ಪುತ್ತೂರು

ಪುತ್ತೂರು ಅಪಾಪ್ತ ಬಾಲಕನಿಗೆ ಲೈಂಗಿಕ ದೌರ್ಜನ್ಯ ; ಆರೋಪಿ ವಿರುದ್ಧ ಪೊಕ್ಸೋ ಪ್ರಕರಣ ದಾಖಲು-ಕಹಳೆ ನ್ಯೂಸ್

ಪುತ್ತೂರು : ಪುತ್ತೂರು ತಾಲೂಕಿನ ಕಬಕ ಎಂಬಲ್ಲಿ ಮಾರ್ಚ್ 28 ರಂದು ವಿಟ್ಲ ಮದುವೆ ಕಾರ್ಯಕ್ರಮಕ್ಕೆ ಬಂದ ಅಪಾಪ್ತ ಬಾಲಕನಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣವೊಂದು ಭಾನುವಾರ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದೌರ್ಜನ್ಯ ಎಸಗಿದ ವ್ಯಕ್ತಿಯನ್ನು ಕಬಕ ಮೂಲದ ಹಮೀದ್ ಯಾನೆ ಮೌಲ ಅಮ್ಮಿ ಎಂದು ದೂರಿನಲ್ಲಿ ತಿಳಿಸಲಾಗಿದ್ದು, ಈತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ವಿಟ್ಲ-ಪುತ್ತೂರು ರಸ್ತೆಯ ಕಬಕ ಸಮೀಪದ ಮನೆಯೊಂದರಲ್ಲಿ ಮದುವೆ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮಕ್ಕೆ ಪುತ್ತೂರು ಮೂಲದ ಹನ್ನೊಂದು ವರ್ಷದ ಬಾಲಕ ಮದುವೆಯ ಮೆಹಂದಿ ಕಾರ್ಯಕ್ರಮದ ದಿನ ಆಗಮಿಸಿದ್ದ. ಇಲ್ಲಿಗೆ ಹಮೀದ್ ಕೂಡ ಇದೇ ಮದುವೆಗೆ ಬಂದಿದ್ದ. ಆರೋಪಿ ಹಮೀದ್ ಸಂತ್ರಸ್ತ ಬಾಲಕನನ್ನು ಪುಸಲಾಯಿಸಿ ಹೊರಗಡೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವಿಚಾರ ಬಾಲಕ ಮನೆಯವರಿಗೆ ತಿಳಿಸಿದ್ದು, ಮನೆಯವರು ವಿಟ್ಲ ಪೊಲೀಸ್ ಠಾಣೆಗೆ ಆರೋಪಿಯ ವಿರುದ್ದ ದೂರು ನೀಡಿದ್ದಾರೆ. ಈ ಕುರಿತು ವಿಟ್ಲ ಠಾಣೆಯಲ್ಲಿ ಭಾನುವಾರದಂದು ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು