Tuesday, January 21, 2025
ಸುದ್ದಿ

ಪಾದರಕ್ಷೆ ಮತ್ತು ಬಾಯಿಯೊಳಗೆ ಚಿನ್ನ ಬಚ್ಚಿಟ್ಟು ಸಾಗಾಟ ; ಮಂಗಳೂರು ಏರ್ ಪೋರ್ಟ್ ನಲ್ಲಿ ಇಬ್ಬರ ಬಂಧನ-ಕಹಳೆ ನ್ಯೂಸ್

ಮಂಗಳೂರು : ಪಾದರಕ್ಷೆ ಮತ್ತು ಬಾಯಿಯೊಳಗೆ ಚಿನ್ನವನ್ನು ಅಡಗಿಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕೇರಳದ ಕಾಸರಗೋಡು ಜಿಲ್ಲೆಯ ಸುಕುರ್ ಮೊಯ್ದಿನ್ ಕುಂಞ ಮತ್ತು ಭಟ್ಕಳದ ಮಿಶ್ರಿ ನಸೀಮುಲ್ಲ ಗನಿ ಬಂಧಿತ ಆರೋಪಿಗಳು. ಆರೋಪಿಗಳಾದ ಮೊಯ್ದಿನ್ ಕುಂಞ ಸ್ಪೈಸ್ ಜೆಟ್ ವಿಮಾನದಲ್ಲಿ ಮತ್ತು ಮಿಶ್ರಿ ನಸೀಮುಲ್ಲ ಗನಿ ಏರ್ ಇಂಡಿಯಾ ವಿಮಾನದಲ್ಲಿ ದುಬೈನಿಂದ ಆಗಮಿಸಿದ್ದರು. ಇವರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.

ಒಬ್ಬರು ಚಿನ್ನವನ್ನು ವಿಶೇಷ ರೀತಿಯಲ್ಲಿ ಡಿಸೈನ್ ಮಾಡಲಾದ ಪಾದರಕ್ಷೆಯಲ್ಲಿ, ಮತ್ತೊಬ್ಬರು ಬಾಯಿಯಲ್ಲಿ ಬಚ್ಚಿಟ್ಟು ಸಾಗಾಟ ಮಾಡುತ್ತಿದ್ದರು. ಇವರಿಂದ 405 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ 18.75 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಚಿನ್ನವನ್ನು ವಶಪಡಿಸಿಕೊಂಡ ಕಸ್ಟಮ್ ಅಧಿಕಾರಿಗಳು ಪ್ರಯಾಣಿಕರಿಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.