Wednesday, January 22, 2025
ಪುತ್ತೂರು

ವಿವೇಕಾನಂದ ಕಾಲೇಜಿನಲ್ಲಿ ವ್ಯಕ್ತಿತ್ವ ವಿಕಸನ ಮತ್ತು ಶೈಕ್ಷಣಿಕ ಕಾರ್ಯಗಾರ, ಗುರಿ ಮತ್ತು ಧ್ಯೇಯೊದ್ದೇಶವನ್ನು ಸಾಧಿಸುವುದೇ ಜೀವನದ ಸಾರ್ಥಕತೆಯಾಗಿದೆ ; ಕಶೆಕೋಡಿ ಸೂರ್ಯನಾರಾಯಣ ಭಟ್-ಕಹಳೆ ನ್ಯೂಸ್

ಪುತ್ತೂರು : ಆಸೆ ಯಾವತ್ತಿಗೂ ಸ್ವತಂತ್ರವಾಗಿರಬೇಕೆ ಹೊರತು ಸಂಕೋಲೆಗಳಿಂದ ಬಂಧಿಯಾಗಿರಬಾರದು, ನಾವು ಆಸೆಗಳನ್ನು ಎಷ್ಟು ಬಂಧಿಸಲು ಪ್ರಯತ್ನಿಸುತ್ತೇವೆಯೋ ಅಷ್ಟು ನಮಗೆ ಅಪಾಯಕಾರಿ. ಮನುಷ್ಯನಿಗೆ ಜೀವನದಲ್ಲಿ ಆಸೆಗಳಿಲ್ಲದೆ ಬದುಕುವುದು ಕಷ್ಟ ಆದರೆ ಆಸೆ ಅತಿಯಾಗಬಾರದು ಎಂದು ರಾಜ್ಯ ಧಾರ್ಮಿಕ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಿವೇಕಾನಂದ ಕಾಲೇಜಿನ ಐಕ್ಯೂಎಸಿ ಘಟಕ ಹಾಗೂ ಕಲಾ ವಿಭಾಗದ ಜಂಟಿ ಆಶ್ರಯದಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ನಡೆದ ವ್ಯಕ್ತಿತ್ವ ವಿಕಸನ ಮತ್ತು ಶೈಕ್ಷಣಿಕ ಕಾರ್ಯಗಾರವನ್ನು ಉದ್ಘಾಟಿಸಿ ಸೋಮವಾರ ಅವರು ಮಾತನಾಡಿದರು. ಗುರಿ ಮತ್ತು ಧ್ಯೇಯೊದ್ದೇಶವನ್ನು ಸಾಧಿಸುವುದೇ ಜೀವನದ ಸಾರ್ಥಕತೆಯಾಗಿದ್ದು, ಇಲ್ಲಿ ನಾವು ತೆಗೆದುಕೊಳ್ಳುವ ಧೃಡ ನಿರ್ಧಾರಗಳಿಂದಲೇ ನಮ್ಮ ಭವಿಷ್ಯ ನಿರ್ಧಾರವಾಗುತ್ತದೆ. ಹಾಗೆಯೇ ವಿದ್ಯಾರ್ಥಿ ಜೀವನದಲ್ಲಿ ಕಲಿಯುವ ಪ್ರತಿಯೊಂದು ವಿಷಯಗಳು ದೇಶದ ಬೆಳವಣಿಗೆಗೆ ಸಹಕಾರಿಯಾಗಬೇಕು. ಹಾಗೂ ಶಾಲಾ ಕಾಲೇಜುಗಳಲ್ಲಿ ಕಲಿಸುವ ಪ್ರತಿಯೊಂದು ಪಾಠಗಳು ವಿದ್ಯಾರ್ಥಿಗಳನ್ನು ದೇಶದ ಉನ್ನತ ಪ್ರಜೆಯನ್ನಾಗಿ ಮಾಡಬೇಕು ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ. ಎನ್. ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಕಲಿಯುವ ಯಾವುದೆ ಕಲಿಕೆ ಕೆಳಮಟ್ಟದ ಸ್ಥಾನವನ್ನು ಹೊಂದಿರುವುದಿಲ್ಲ, ಪ್ರತಿಯೊಂದಕ್ಕೂ ಅದರದ್ದೆ ಆದ ಮಹತ್ವ ಇದೆ. ಇಲ್ಲಿ ಹೆತ್ತವರ ಆಸೆಗಿಂತ ಮಕ್ಕಳ ಅಭಿರುಚಿ ಮತ್ತು ಆಸಕ್ತಿ ಕ್ಷೇತ್ರದೆಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದರೆ ಮಕ್ಕಳ ಭವಿಷ್ಯ ಉತ್ತಮವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂಎಸಿ ಘಟಕದ ಸಂಯೋಜಕ ಶಿವಪ್ರಸಾದ್ ಕೆ.ಎಸ್. ಹಾಗೂ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪ್ರಿಯಾ ಭಟ್ ಪ್ರಾರ್ಥಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಟು ಗಣಪತಿ ಭಟ್ ಸ್ವಾಗತಿಸಿ, ಉಪನ್ಯಾಸಕಿ ಅನಿತಾ ಕಾಮತ್ ವಂದಿಸಿದರು. ಉಪನ್ಯಾಸಕಿ ಗೀತಾಕುಮಾರಿ ಟಿ. ಕಾರ್ಯಕ್ರಮ ನಿರೂಪಿಸಿದರು.