Tuesday, January 21, 2025
ಹೆಚ್ಚಿನ ಸುದ್ದಿ

ಬಹರೈನ್ ಬಂಟರ ಸಂಘ ; ಬಹುಮಾನ ವಿತರಣಾ ಸಮಾರಂಭ –ಕಹಳೆ ನ್ಯೂಸ್

ಬಂಟ್ಸ್ ಬಹರೈನ್ ವತಿಯಿಂದ ನಡೆದ ಡಾನ್ಸ್ ಸ್ಪರ್ಧೆ , ಗಾನಕೋಗಿಲೆ -2020 ಮತ್ತು ಬಂಟ ಬಾಂಧವರಿಗೆ ಏರ್ಪಡಿಸಿದ ಲೂಡೋ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆಯನ್ನು ಸರಳ ಸಮಾರಂಭದಲ್ಲಿ ನೆರವೇರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕೊರೊನಾ ಮಾಹಾಮಾರಿಯ ಈ ದಿನಗಳಲ್ಲಿ ಮನರಂಜನಾ ಕಾರ್ಯಕ್ರಮಗಳಿಗೆ ತೊಡಕು ಉಂಟಾದಾಗ On-Line ಮುಖಾಂತರ ವಿವಿಧ ಸ್ಪರ್ಧೆಗಳನ್ನು ಕೊಲ್ಲಿ ರಾಷ್ಟ್ರದ ಬಂಟ ಬಾಂಧವರಿಗೆ ಸೀಮಿತಗೊಳಿಸಿ ಆ ಮೂಲಕ ಪ್ರತಿಭೆಗಳನ್ನು ಗುರುತಿಸಿದ ಕೀರ್ತಿ ಬಹರೈನ್ ಬಂಟರ ಸಂಘದ ಸಾಧನೆ.

ಬಹುಮಾನ ವಿತರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಹರೈನ್ ಕನ್ನಡ ಸಂಘದ ಅಧ್ಯಕ್ಷರಾಗಿ ಶ್ರೀ ಪ್ರದೀಪ್ ಶೆಟ್ಟಿಯವರು ಬಂಟ್ಸ್ ಬಹರೈನ್ ನ ಈ ಸಾಧನೆಗೆ ಮೆಚ್ಚುಗೆ ಸೂಸಿ ಶ್ಲಾಘಿಸಿದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಬಹರೈನ್-ಸೌದಿ ಘಟಕದ ಅಧ್ಯಕ್ಷರಾದ ಶ್ರೀ ರಾಜೇಶ್ ಬಿ. ಶೆಟ್ಟಿ, ಜಾನ್ಸನ್& ಜಾನ್ಸನ್ ಕಂಪನಿಯ ಮುಖ್ಯಸ್ಥರಾದ ಶ್ರೀ ಅಮರನಾಥ್ ರೈ , ಉದ್ಯಮಿ ಶ್ರೀ ಶಶಿಧರ್ ಶೆಟ್ಟಿ ಕೆಂಜೂರು ಪಾಲ್ಗೊಂಡು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು.

ಬಹರೈನ್ ಬಂಟರ ಸಂಘದ ಅಧ್ಯಕ್ಷ ಶ್ರೀ ಮೋಹನದಾಸ್ ರೈ ಎರುಂಬು ತನ್ನ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ಮುಂದಿನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಹಂಚಿಕೊಂಡರು.

ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ದುರ್ಗಾಪ್ರಸಾದ್ ಶೆಟ್ಟಿ ಸ್ಪರ್ಧಾ ವಿಜೇತರ ಪಟ್ಟಿಯನ್ನು ವಾಚಿಸಿದರು.

ಸಂಘದ ಉಪಾಧ್ಯಕ್ಷರಾದ ಶ್ರೀ ಅನಿಲ್ ನಾಯ್ಕ್, ಕಾರ್ಯಕ್ರಮ ನಿರೂಪಣೆ ಮಾಡಿದರು. ಶ್ರೀಮತಿ ಅರ್ಚನಾ ಸಂದೀಪ್ ಶೆಟ್ಟಿ ಸ್ವಾಗತಿಸಿ ,ಸಂಘದ ಸಂಘಟನಾ ಕಾರ್ಯದರ್ಶಿ ಶ್ರೀ ವಿಕ್ರಮ್ ಶೆಟ್ಟಿಯವರು ಧನ್ಯವಾದ ಸಮರ್ಪಣೆ ಮಾಡಿದರು.

ಕಾರ್ಯಕಾರಿ ಸಮತಿಯ ಶ್ರೀ ಗುರುರಾಜ್ ನಾಯ್ಕ್, ಶ್ರೀ ಸಂದೀಪ್ ಅಡಪ್ಪ ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಲಘು ಉಪಾಹಾರವನ್ನು ವಿತರಿಸಲಾಯಿತು.