Recent Posts

Tuesday, January 21, 2025
ದಕ್ಷಿಣ ಕನ್ನಡಸುದ್ದಿ

ಕುಲಪತಿ ಹುದ್ದೆ ಕೊಡಿಸುವುದಾಗಿ ಪ್ರಾಧ್ಯಾಪಕರೊಬ್ಬರಿಂದ 17.5 ಲಕ್ಷ ಪಡೆದು, ಜೀವಬೆದರಿಕೆ ಹಾಕಿದ ರಾಮ ಸೇನೆಯ ಸ್ಥಾಪಕ ಪ್ರಸಾದ್ ಅತ್ತಾವರ ಅರೆಸ್ಟ್ – ಕಹಳೆ ನ್ಯೂಸ್

ಮಂಗಳೂರು : ಇಲ್ಲಿನ ವಿಶ್ವ ವಿದ್ಯಾನಿಲಯದ ಓರ್ವ ಪ್ರಾಧ್ಯಾಪಕರನ್ನು ರಾಯಚೂರು ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ ಮಾಡಿಸುವ ವಿಚಾರವಾಗಿ ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಮುಖಂಡ ಪ್ರಸಾದ್ ಅತ್ತಾವರ ಅವರನ್ನು ಮಂಗಳೂರು ಪೋಲಿಸರು ಬಂಧಿಸಿದ್ದಾರೆ.

ಪ್ರಕರಣದ ಹಿನ್ನೆಲೆ : ಮಂಗಳೂರು ವಿಶ್ವ ವಿದ್ಯಾನಿಲಯದ ಓರ್ವ ಪ್ರಾಧ್ಯಾಪಕರಿಗೆ ವಿವೇಕ್ ಎಂಬವರ ಮೂಲಕ ಪ್ರಸಾದ್ ಅತ್ತಾವರ ಪರಿಚಯವಾಗಿದ್ದು , ಪ್ರಸಾದ್ ಅತ್ತಾವರ್ ತನಗೆ ರಾಜ್ಯದ ದೇಶದ ಗಣ್ಯ ವ್ಯಕ್ತಿಗಳ ಪರಿಚಯವಿದೆ, ಅವರೊಂದಿಗೆ ತುಂಬಾ ಸಲುಗೆಯಲ್ಲಿದ್ದೇವೆ ಬೇಕಾದ ಕೆಲಸ ಮಾಡಬಲ್ಲೆ ಎಂದು ನಂಬಿಕೆ ಹುಟ್ಟಿಸಿ ನಿಮಗೆ ರಾಯಚೂರು ವಿಶ್ವವಿದ್ಯಾನಿಲಯದ ವಿಸಿ ( ಕುಲಪತಿ) ಯನ್ನಾಗಿ ಮಾಡುವೆನೆಂದು ಗಣ್ಯ ವ್ಯಕ್ತಿಗಳೊಂದಿಗೆ ತೆಗೆದ ಫೋಟೊ ತೋರಿಸಿ ನಂಬಿಸಿದ್ದು, ಪ್ರಾದ್ಯಾಪಕರಿಂದ ಇದಕ್ಕೆ 30 ಲಕ್ಷ ಹಣ ಕೊಡಬೇಕೆಂದು ತಿಳಿಸಿದ್ದಾರೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅದರಂತೆ ಪ್ರಾಧ್ಯಾಪಕ ರನ್ನು ನಂಬಿಸಿದ ಪ್ರಸಾದ್ ಅತ್ತಾವರ್ ಒತ್ತಾಯವಾಗಿ ರೂ 17.5 ಲಕ್ಷ ಹಣ ಪಡೆದು ಉಳಿದ ಹಣಕ್ಕೆ 3 ಖಾಲಿ ಚೆಕ್ ಪಡೆದು ವಂಚಿಸಿದ್ದಾರೆ ಎನ್ನಲಾಗಿದೆ. ವಂಚನೆಗೊಳಗಾದ ಬಗ್ಗೆ ಖಚಿತವಾದಾಗ ಪ್ರಾಧ್ಯಾಪಕರು ಮರಳಿ ಹಣ ಕೇಳಿದ್ದು, ಈ ವೇಳೆ ಹಣ ಕೊಡದೇ ಬೈದು ಜೀವ ಬೆದರಿಕೆ ಹಾಕಿದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಆಕ್ರ 42/2021 ಕಲಂ 406 , 417 , 420 , 506 , ಜತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಆರೋಪಿ ಪ್ರಸಾದ್ ಅತ್ತಾವರ ವಿರುದ್ದ ಮಂಗಳೂರು ಉತ್ತರ ಠಾಣೆ, ಮಂಗಳೂರು ಪೂರ್ವ ಠಾಣೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದು ಮಂಗಳೂರು ಉತ್ತರ ಠಾಣೆಯಲ್ಲಿ ಮತ್ತು ಕಂಕನಾಡಿ ನಗರ ಠಾಣೆಯಲ್ಲಿ ರೌಡಿ ಶೀಟರ್ ತೆರೆಯಲಾಗಿದೆ ಎಂದು ಪೋಲಿಸ್ ಮೂಲಗಳು ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು