ಪುತ್ತೂರು: ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸುವಲ್ಲಿ ಕಳೆದ 13ವರುಷಗಳಿಂದ ಕಾರ್ಯಪ್ರವೃತ್ತರಾಗಿರುವ ಪುತ್ತೂರಿನ ಹೃದಯ ಭಾಗದ ಧರ್ಮಸ್ಥಳ ಬಿಲ್ಡಿಂಗ್‍ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಎಜ್ಯುಕೇಶನಲ್ ಫೌಂಡೇಶನ್ (ರಿ.)ಪುತ್ತೂರು ಇದರ ಅಧೀನಕ್ಕೆ ಒಳಪಟ್ಟಿರುವ ಪ್ರಗತಿ ಸ್ಟಡಿ ಸೆಂಟರ್‍ನ 4ನೇ ಶಾಖೆ ಇದೀಗ ಕೊಡಗಿನ ಕುಶಾಲನಗರದ ಕೊಡುಗು ಟವರ್ರ್‍ನ ಯುನಿಯನ್ ಬ್ಯಾಂಕ್ ಬಿಲ್ಡಿಂಗ್‍ನಲ್ಲಿ ಕನ್ನಿಕಾ ವಿ.ಎಸ್.ಎಸ್.ಎನ್. ಸಹಯೋಗದೊಂದಿಗೆ ದಿನಾಂಕ 24 ಮಾರ್ಚ್ 2021 ನೇ ಬುಧವಾರ ಹೋಟೆಲ್ ಮತ್ತು ರೆಸಾರ್ಟ್ ಉದ್ದಿಮೆದಾರರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಬಿ ಆರ್ ನಾಗೇಂದ್ರ ಪ್ರಸಾದ್ ಅವರ ದೀಪಪ್ರಜ್ವಲನದೊಂದಿಗೆ ಪ್ರಾರಂಭಗೊಂಡಿತು. ಮುಖ್ಯ ಅತಿಥಿಯಾಗಿ ಹಿರಿಯ ಉಪನ್ಯಾಸಕರು, ಜಿಲ್ಲಾ ತರಬೇತಿ ಶಿಕ್ಷಣ ಕೇಂದ್ರ, ಕೂಡಿಗೆ ಕೆ.ವಿ. ಸುರೇಶ್, ಕುಶಾಲನಗರ ಬಾರ್ ಅಸೋಸಿಯೇಷನ್‍ನ ಅಧ್ಯಕ್ಷರಾದ ಆರ್.ಕೆ ನಾಗೇಂದ್ರ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕೆ ಆರ್ ರವಿಕುಮಾರ್, ಕನ್ನಿಕಾ ವಿ.ಎಸ್.ಎಸ್.ಎನ್, ಕುಶಾಲನಗರ ವಹಿಸಿದ್ದರು. ಗೌರವ ಉಪಸ್ಥಿತಿಯನ್ನು ಕುಶಾಲನಗರ ಆರ್ಯ ವೈಶ್ಯ ಮಂಡಳಿ ಅಧ್ಯಕ್ಷರಾದ ಶ್ರೀ ವಿ.ಪಿ.ನಾಗೇಶ್‍ವಹಿಸಿದ್ದರು. 5ನೇ ಶಾಖೆಯು ಅತೀ ಶೀಘ್ರದಲ್ಲಿ ಕೊಡಗಿನ ಮಡಿಕೇರಿಯಲ್ಲಿ ಇದೇ ಬರುವ ಎಪ್ರಿಲ್ 3ನೇ ವಾರದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ಸ್ಥಾಪಕಾಧ್ಯಕ್ಷರು ಶ್ರೀ.ಪಿ.ವಿ.ಗೋಕುಲ್‍ನಾಥ್ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ. ಪ್ರಾಂಶುಪಾಲರಾದ ಕೆ.ಹೇಮಲತಾ ಗೋಕುಲ್‍ನಾಥ್‍ರವರು ಹಾಗೂ ಪ್ರಗತಿಯ ಎಲ್ಲಾ ಉಪನ್ಯಾಸಕ ವೃಂದದವರು ಹಾಗೂ ವಿದ್ಯಾರ್ಥಿಗಳು ಹಾಗೂ ಪೋಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
You Might Also Like
ಜ.30ರಂದು ಜಿ.ಎಲ್ ಮಹಲ್ ಮಳಿಗೆಯ ಶಿವ ಆರ್ಕೇಡ್ ನಲ್ಲಿ ಕಲ್ಪವೃಕ್ಷ ಫೈನಾನ್ಸ್, ಕಾಪೋರೇಶನ್ ರಿ. ಶುಭಾರಂಭ – ಕಹಳೆ ನ್ಯೂಸ್
ಪುತ್ತೂರು ಮುಖ್ಯ ರಸ್ಥೆಯ ಜಿ.ಎಲ್ ಮಹಲ್ ಮಳಿಗೆಯ ಶಿವ ಆರ್ಕೇಡ್ ನಲ್ಲಿ ಕಲ್ಪವೃಕ್ಷ ಫೈನಾನ್ಸ್, ಕಾಪೋರೇಶನ್ ರಿ. ಇದೇ ಬರುವ ಜ.30ರಂದು ಶುಭಾರಂಭಗೊಳ್ಳಲಿದೆ. ಇಲ್ಲಿ ಚಿನ್ನಾಭರಣ ಸಾಲ,...
ವಿಟ್ಲಸ್ವರ ಸಿಂಚನ ಸಂಗೀತ ಶಾಲೆಗೆ ಶೇಕಡ 100 ಫಲಿತಾಂಶ-ಕಹಳೆ ನ್ಯೂಸ್
ಪೆರ್ನಾಜೆ: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಯುನಿವರ್ಸಿಟಿ ಮೈಸೂರು ನಡೆಸಿದ ಕರ್ನಾಟಕ ಶಾಸ್ತ್ರೀಯ ಸಂಗೀತ ಪರೀಕ್ಷೆಯಲ್ಲಿ ಜೂನಿಯರ್ ವಿಭಾಗದಲ್ಲಿ ಸ್ವರ ಸಿಂಚನ ಸಂಗೀತ ಶಾಲೆಯ ಆರು ಮಂದಿ...
ಗೋ ಸುಭದ್ರ ಪರಂಪರೆಯನ್ನು ವಿಶ್ವಕ್ಕೆ ಸಾರಿದ ತೃತೀಯ ವಿಶ್ವ ಹವ್ಯಕ ಸಮ್ಮೇಳನ-ಕಹಳೆ ನ್ಯೂಸ್
ಪೆರ್ನಾಜೆ:ಭಗವಾನ್ ಶ್ರೀ ಕೃಷ್ಣ ಹೇಳುತ್ತಾರೆ ಯಾವುದೇ ಒಬ್ಬ ಮನುಷ್ಯನ ಸಮಯ ಮತ್ತು ಪರಿಸ್ಥಿತಿ ನೋಡಿ ನಿಂದನೆಯನ್ನು ಮಾಡಬೇಡಿ ಯಾಕೆಂದರೆ ಅವರ ಸಮಯ ಯಾವಾಗ ಬೇಕಾದರೂ ಬದಲಾಗಬಹುದು. ನೀವು...
ಫೆ.09ರಿಂದ ಫೆ.11ರವರೆಗೆ ಕುಂಜೂರುಪಂಜದಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಾಮದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ನೇಮೋತ್ಸವ – ಕಹಳೆ ನ್ಯೂಸ್
ಶ್ರೀ ದುರ್ಗಾ ಭಜನಾ ಮಂದಿರ (ರಿ.) ಕುಂಜೂರುಪಂಜ ಇದರ 22ನೇ ವರ್ಷದ ವಾರ್ಷಿಕೋತ್ಸವ ಮತ್ತು ನೂತನವಾಗಿ ನಿರ್ಮಿಸಿರುವ ಗ್ರಾಮದೈವಗಳಾದ ಇರುವೆರ್ ಉಳ್ಳಾಕುಲು ಇದರ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ...