ಬೆಂಗಳೂರು : ಮಾರ್ಚ್ 30ರಂದು ಕಳೆದ 29 ದಿನಗಳಿಂದ ರಾಜ್ಯಾದ್ಯಂತ ಚರ್ಚೆಯಲ್ಲಿದ್ದ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಯುವತಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ.
ಬಳಿಕ ಎಸ್ಐಟಿ ಅಧಿಕಾರಿಗಳು ಆಡುಗೋಡಿಯ ಟೆಕ್ನಿಕಲ್ ಸೆಂಟರ್ಗೆ ಕರೆತಂದು ಹೇಳಿಕೆ ದಾಖಲಿಸಿದ್ದು, ಇನ್ನು ಇಂದು ಬೆಳಗ್ಗೆ 10 ಗಂಟೆಗೆ ಮತ್ತೊಮ್ಮೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ. ಇಂದೇ ಎಸ್ಐಟಿ ವಿಚಾರಣೆಗೆ ಹಾಜರಾಗುವ ಯುವತಿಗೆ ಪೊಲೀಸರು ವೈದ್ಯಕೀಯ ಪರೀಕ್ಷೆ ಮಾಡಿಸಲಿದ್ದು, ಈ ಮೂಲಕ ಅತ್ಯಾಚಾರ ಆಗಿರೋ ಕುರಿತು ವೈಜ್ಞಾನಿಕ ಸಾಕ್ಷ್ಯ ಕಲೆ ಹಾಕಲಿದ್ದಾರೆ. ಯುವತಿಯನ್ನು ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆ ಇದೆ. ಯುವತಿ ತನಗೆ ಜೀವ ಬೆದರಿಕೆ ಇದೆ ಅಂತಾ ಹೇಳಿದ್ದ ಕಾರಣಕ್ಕೆ ಆಕೆಗೆ ಭಾರಿ ಭದ್ರತೆ ನೀಡಲಾಗಿದೆ. ಮತ್ತು ಇದೇ ಕಾರಣಕ್ಕೆ ಯುವತಿ ಎಲ್ಲಿದ್ದಾಳೆ ಎಂಬ ಕುರಿತು ಮಾಹಿತಿಯನ್ನ ಗೌಪ್ಯವಾಗಿ ಇಡಲಾಗಿದ್ದು, ಈ ಕುರಿತು ಸಂತ್ರಸ್ತೆ ಪರ ವಕೀಲ ಜಗದೀಶ್ಗೂ ಕೋರ್ಟ್ ಕಟ್ಟಪ್ಪಣೆ ಹೊರಡಿಸಿ, ಯುವತಿ ತಂಗಿರುವ ಮಾಹಿತಿಯನ್ನು ಗೌಪ್ಯವಾಗಿ ಇಡುವಂತೆ ಹೇಳಿತ್ತು.