ಬಂಟ್ವಾಳ : ಮಾರ್ಚ್ 25ರಂದು ಬೆಂಗಳೂರಿನಿಂದ ಪಾರ್ಸೆಲ್ ತರುತ್ತಿದ್ದ ಲಾರಿಯನ್ನು ಅದರ ಚಾಲಕ ಮೆಲ್ಕಾರ್ ನಲ್ಲಿ ನಿಲ್ಲಿಸಿ ಅದರಲ್ಲಿ 96 ಸಾವಿರ ರೂ. ಮೌಲ್ಯದ ಸ್ವತ್ತುಗಳನ್ನು ದೋಚಿದ ಘಟನೆ ನಡೆದಿದೆ.
ಈ ಕುರಿತು ಲಾರಿ ಮಾಲಕ ಬೆಂಗಳೂರು ಮೂಲದ ಹೆಚ್. ಆರ್. ಲೋಕೇಶ್ ಅವರು ದೂರು ನೀಡಿದ್ದು, ಲಾರಿಯಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಪಾರ್ಸೆಲ್ ಸಾಗಿಸಲಾಗುತ್ತಿತ್ತು. ಲಾರಿ ಚಾಲಕ ತುಮಕೂರು ಮೂಲದ ಮಂಜುನಾಥ್ ಮೆಲ್ಕಾರ್ ನಲ್ಲಿ ಲಾರಿಯನ್ನು ನಿಲ್ಲಿಸಿ ಪರಾರಿಯಾಗಿದ್ದಾನೆ. ಲಾರಿಯನ್ನು ಪರಿಶೀಲನೆ ಮಾಡಿದಾಗ 3 ಟಿವಿ, ಏರ್ ಕೂಲರ್ ಸೇರಿದಂತೆ ಒಟ್ಟು 96 ಸಾವಿರ ರೂ. ಮೌಲ್ಯದ ಸೊತ್ತುಗಳು ಕಳವಾಗಿರುವುದಾಗಿ ಗೊತ್ತಾಗಿದೆ. ಈ ಕುರಿತು ಬಂಟ್ವಾಳ ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.