Monday, January 20, 2025
ಹೆಚ್ಚಿನ ಸುದ್ದಿ

ದಾವಣಗೆರೆ ಜಿಲ್ಲೆ ಚನ್ನಗಿರಿಯಲ್ಲಿ ಲಾಂಗ್ ಹಿಡಿದು ಊರ ತುಂಬಾ ಓಡಾಡುತ್ತಿದ್ದ ಮಹಿಳೆ; ಆಕೆಯನ್ನು ನೋಡಿ ದಿಕ್ಕಾ ಪಾಲಾಗಿ ಓಡಿದ ಜನ-ಕಹಳೆ ನ್ಯೂಸ್

ದಾವಣಗೆರೆ : ದಾವಣಗೆರೆ ಜಿಲ್ಲೆ ಚನ್ನಗಿರಿಯಲ್ಲಿ ಮಹಿಳೆಯೊಬ್ಬಳು ಲಾಂಗ್ ಹಿಡಿದು ಊರ ತುಂಬಾ ಓಡಾಡುತ್ತಿದ್ದಂತೆ ಆಕೆಯನ್ನು ನೋಡಿ ಜನ ದಿಕ್ಕಾ ಪಾಲಾಗಿ ಓಡಿದ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

34 ವರ್ಷದ ರುಕ್ಮಿಣಿ ಎಂಬ ಈ ಮಹಿಳೆ ಜೀನ್ಸ್ ಮತ್ತು ಕೆಂಪು ಬಣ್ಣದ ಜೆರ್ಕಿನ್ ಧರಿಸಿದ್ದು, ಜೋಗಿ ಸ್ಟೈಲ್ ನಲ್ಲಿ ಲಾಂಗ್ ಹಿಡಿದುಕೊಂಡು ಅಡ್ಡಾಡಿದ್ದಲ್ಲದೆ ಖಾಸಗಿ ಬಸ್ ಗಳ ಮೇಲೆ ಮಚ್ಚು ಬೀಸಿದ್ದಾರೆ. ಈ ಮಹಿಳೆಯು ಮೂಲತಃ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಗ್ರಾಮದ ನಿವಾಸಿಯಾಗಿದ್ದು ಮಾನಸಿಕ ಅಸ್ವಸ್ಥೆ ಎನ್ನಲಾಗಿದೆ. ಹಾಗೂ ಊರ ತುಂಬೆಲ್ಲಾ ಹೀಗೆ ಓಡಾಡುತ್ತಿದ್ದ ಈ ಮಹಿಳೆಯನ್ನು ಆಟೋರಿಕ್ಷಾ ಚಾಲಕರು ಲಾಂಗ್ ಕಸಿದುಕೊಂಡು ಮಹಿಳೆಯನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಆದರೆ ಈ ಮಹಿಳೆ ಈಗಾಗಲೇ ಆಸ್ವತ್ರೆಯಿಂದ ತಪ್ಪಿಸಿಕೊಂಡು ಬಂದು ಚನ್ನಗಿರಿಯಲ್ಲಿ ಮತ್ತೆ ಅವಾಂತರ ಸೃಷ್ಟಿಸಿದ್ದು ಇದೀಗ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು