Tuesday, January 21, 2025
ಬಂಟ್ವಾಳ

ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ.ಮೂಡ ಗ್ರಾಮವೊಂದರಲ್ಲೇ 33 ಮನೆಗಳನ್ನು ಜಖಂಗೊಳಿಸಿದ ಬಿರುಗಾಳಿ-ಕಹಳೆ ನ್ಯೂಸ್

ಬಂಟ್ವಾಳ : ಬಂಟ್ವಾಳ ತಾಲೂಕಿನ ಹಲವೆಡೆ ಸುಮಾರು ಒಂದು ಗಂಟೆಗಳ ಕಾಲ ಗುಡುಗು, ಸಿಡಿಲಿನ ಆರ್ಭಟದ ಜೊತೆಗೆ ಭಾರಿ ಗಾಳಿಯೊಂದಿಗೆ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಿ.ಮೂಡ ಗ್ರಾಮದ ಕಾಮಾಜೆ, ಮೈರಾನ್ ಪಾದೆ, ದೈಪಲ ಎಂಬಲ್ಲಿ ರಾತ್ರಿ ಬೀಸಿದ ಭಾರಿ ಗಾಳಿ, ಮಳೆಗೆ ಒಟ್ಟು 33 ಮನೆಗಳಿಗೆ ಹಾನಿಯಾಗಿದೆ. ಈ ಪೈಕಿ 2 ಮನೆಗಳಿಗೆ ತೀವ್ರ ಹಾನಿಯುಂಟಾಗಿದ್ದು, ಸುಮಾರು 3,53,000 ರೂ ನಷ್ಟವುಂಟಾಗಿದೆ ಎಂದು ಕಂದಾಯ ಇಲಾಖೆ ಅಂದಾಜಿಸಿದೆ. ಬಂಟ್ವಾಳ ತಾಲೂಕಿನಲ್ಲಿ ಸುಮಾರು 60 ಮನೆಗಳಿಗೆ ಮಳೆಯಿಂದ ಹಾನಿಯಾಗಿದ್ದು, ಕೃಷಿ ಜಮೀನಿಗೂ ಅಪಾರ ಹಾನಿಯುಂಟಾಗಿದೆ. ಇನ್ನು ಭಾರಿ ಮಳೆಗೆ ಎಚ್. ಟಿ. ಲೈನ್ ಮೇಲೆಯೇ ಮರಗಳು ಉರುಳಿವೆ.