Tuesday, January 21, 2025
ಹೆಚ್ಚಿನ ಸುದ್ದಿ

ದೇಶಸೇವೆಯ ಪುಣ್ಯಕೈಂಕರ್ಯಕ್ಕೆ ತೆರಳುತ್ತಿರುವ ಕಾಣಿಯೂರಿನ ವೀರವನಿತೆ ಕು.ಯೋಗಿತಾ ಮಲೆಕೆರ್ಚಿ ಯವರಿಗೆ ಹುಟ್ಟೂರಲ್ಲಿ ಅಭಿನಂದನಾ ಬೀಳ್ಕೋಡುಗೆ-ಕಹಳೆ ನ್ಯೂಸ್

ಕಾಣಿಯೂರು : ದೇಶಸೇವೆಯ ಪುಣ್ಯಕೈಂಕರ್ಯಕ್ಕೆ ತೆರಳುತ್ತಿರುವ (BSF)ಕಾಣಿಯೂರಿನ ವೀರವನಿತೆ ಕು.ಯೋಗಿತಾ ಮಲೆಕೆರ್ಚಿ ಯವರಿಗೆ ಹುಟ್ಟೂರ ಅಭಿನಂದನಾ ಬೀಳ್ಕೋಡುಗೆ ಮಂಗಳವಾರ ಸಂಜೆ ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನದ ಎದುರು ಭಾಗದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ ಶೀರಾಡಿ ರಾಜನ್ ದೈವಸ್ಥಾನ ಏಲಡ್ಕ, ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಕಾಣಿಯೂರು, ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲ ಕಾಣಿಯೂರು, ಕಣ್ವರ್ಷಿ ಮಹಿಳಾ ಮಂಡಲ ಕಾಣಿಯೂರು ವತಿಯಿಂದ ಕಾಣಿಯೂರು ಗ್ರಾಮಸ್ಥರ ಪರವಾಗಿ ಸ್ಮರಣಿಕೆ, ಶಾಲು, ಹೂಗುಚ್ಚ ನೀಡಿ ಅಭಿನಂದಿಸಲಾಯಿತು. ಬಳಿಕ ಆರತಿ ಎತ್ತಿ ಬೀಳ್ಕೊಳ್ಳಲಾಯಿತು. ಜೊತೆಗೆ ಗ್ರಾಮ ಪಂಚಾಯತ್ ಕಾಣಿಯೂರು, ಫ್ರೆಂಡ್ಸ್ ಸ್ಪೋಟ್ರ್ಸ್ ಕ್ಲಬ್ ಕೂಡುರಸ್ತೆ ವತಿಯಿಂದಲೂ ಅಭಿನಂದಿಸಲಾಯಿತು.