ಕೊಡ್ಲಿಪೇಟೆಯ ಅನಾಥ ವೃದ್ದೆಯನ್ನು ಆಶ್ರಮಕ್ಕೆ ಸೇರಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆಗೆ ಫೋನ್ ಮೂಲಕ ಮನವಿ ಮಾಡಿದ ಬ್ಯಾಡಗೊಟ್ಟ ಗ್ರಾಮ ಪಂಚಾಯತಿಯ ಸದಸ್ಯರು -ಕಹಳೆ ನ್ಯೂಸ್
ಕೊಡಗು : ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೋಬಳಿಯಲ್ಲಿ ತುಂಬಾ ದಿನಗಳಿಂದ ಅನಾಥವಾಗಿ ತಿರುಗಾಡುತ್ತಿದ್ದ ವೃದ್ದೆಯನ್ನು ನೋಡಿದ ಬ್ಯಾಡಗೊಟ್ಟ ಗ್ರಾಮ ಪಂಚಾಯತ್ ಸದಸ್ಯರಾದ ಹನೀಫ್ ರವರು ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಗೆ ಫೋನ್ ಮೂಲಕ ತಾಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜಾ ಅವರನ್ನು ಸಂಪರ್ಕಿಸಿ ಕೊಡ್ಲಿಪೇಟೆಯಲ್ಲಿ ಅನಾಥವಾಗಿ ತುಂಬಾ ದಿನಗಳಿಂದ ಒಬ್ಬ ವೃದ್ದೆಯು ತಿರುಗಾಡಿಕೊಂಡಿದ್ದಾರೆ ಇವರಿಗೆ ಯಾರೂ ಇಲ್ಲ ಇವರನ್ನು ಅನಾಥಾಶ್ರಮಕ್ಕೆ ಸೇರಿಸಿ ಎಂದು ತಿಳಿಸಿದ ಮೇರೆಗೆ ಕರವೇ ಕಾರ್ಯಕರ್ತರು ಬ್ಯಾಡಗೊಟ್ಟ ಗ್ರಾಮ ಪಂಚಾಯತ್ ಸದಸ್ಯ ಹನೀಫ್ ರವರನ್ನು ನೀವು ಕೊರೋನಾ ಟೆಸ್ಟ್ ಮಾಡಿಸಿ ಕೊಡಿ ಎಂದು ತಿಳಿಸಿದ ಮೇಲೆ ಈ ವೃದ್ದೆ ಕೊರೊನಾ ಟೆಸ್ಟನ್ನು ಶುಂಠಿ ವ್ಯಾಪಾರಿಯಾದ ಆಸಿಫ್ ರವರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮಾಡಿಸಿಕೊಡುತ್ತಾರೆ ಎಂದು ತಿಳಿಸಿದರು.
ಕೊರೊನಾ ಟೆಸ್ಟ್ ಸಿಕ್ಕಿದ ಮೇಲೆ ಕರ್ನಾಟಕ ರಕ್ಷಣಾ ವೇದಿಕೆ ಆಶ್ರಮದ ವ್ಯವಸ್ಥಾಪಕರಾದ ಸತೀಶ ರವರನ್ನು ನಿಮ್ಮ ಆಶ್ರಮಕ್ಕೆ ಅನಾಥವಾಗಿ ಕೊಡ್ಲಿಪೇಟೆಯಲ್ಲಿ ವೃದ್ದೆ ಒಬ್ಬರು ತಿರುಗಾಡಿಕೊಂಡಿದ್ದಾರೆ ನಿಮ್ಮ ಅನಾಥ ಆಶ್ರಮಕ್ಕೆ ಸೇರಿಸಿಕೊಳ್ಳಬೇಕೆಂದು ಕರವೇ ಮನವಿ ಮಾಡಿಕೊಳ್ಳಲಾಯಿತು. ನಮ್ಮ ಮನವಿಗೆ ಶಕ್ತಿ ಮಡಿಕೇರಿ ಆಶ್ರಮ ಸ್ಪಂದಿಸಿ ಆ ವೃದ್ಧೆಯನ್ನು ಕರೆದುಕೊಂಡು ಬನ್ನಿ ಎಂದು ತಿಳಿಸಿದ ಮೇರೆಗೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಕೊಡ್ಲಿಪೇಟೆಗೆ ತೆರಳಿ ಆ ಅಜ್ಜಿಯನ್ನು ಮಡಿಕೇರಿ ಸೇರಿಸಲು ವಾಹನದ ವ್ಯವಸ್ಥೆಯನ್ನು ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಪಿಡಿಒ ಅವರು ವ್ಯವಸ್ಥೆ ಮಾಡಿಕೊಡಲಾಯಿತು . ಕರವೇ ಕಾರ್ಯಕರ್ತರು ಈ ಅಜ್ಜಿಯನ್ನು ಕರೆದುಕೊಂಡು ಹೋಗಿ ಮಡಿಕೇರಿ ಶಕ್ತಿ ಆಶ್ರಮಕ್ಕೆ ಬಿಟ್ಟರು. ಈ ಸಂದರ್ಭದಲ್ಲಿ ಅಜ್ಜಿಯನ್ನು ಮಡಿಕೇರಿ ಅನಾಥಾಶ್ರಮಕ್ಕೆ ಸೇರಿಸಲು ಸಹಾಯ ಮಾಡಿದ ಬ್ಯಾಡಗೊಟ್ಟ ಗ್ರಾ ಪಂ ಸದಸ್ಯರಾದ ಹನೀಫ್ ರವರಿಗೆ ಮತ್ತು ಶುಂಠಿ ವ್ಯಾಪಾರಿ ಆಸಿಫ್ ರವರಿಗೆ ಮತ್ತು ಕೊಡ್ಲಿಪೇಟೆಯಲ್ಲಿ ಕೊರೊನಾ ಟೆಸ್ಟ್ ಮಾಡಿದ ಆರೋಗ್ಯ ಅಧಿಕಾರಿಗಳಿಗೆ. ಮತ್ತು ಶನಿವಾರಸಂತೆ ಠಾಣೆಯಿಂದ ಈ ಅಜ್ಜಿಗೆ ಯಾರೂ ಇಲ್ಲ ಎಂದು ಲೆಟರ್ ಕೊಡಬೇಕಾಗಿತ್ತು . ಹಾಗೂ ಠಾಣೆಗೆ ಹೋಗಿ ಲೇಟರ್ ಕೇಳಿದ ತಕ್ಷಣ ಠಾಣಾಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಲೇಟರ್ ಕೊಟ್ಟಿರುತ್ತಾರೆ ಹಾಗಾಗಿ ಇವರೆಲ್ಲರಿಗೂ ಕರ್ನಾಟಕ ರಕ್ಷಣಾ ವೇದಿಕೆಯ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇವೆ ಮತ್ತು ಈ ಅರ್ಜಿಯನ್ನು ಶಕ್ತಿ ಆಶ್ರಮಕ್ಕೆ ಸೇರಿಸಿಕೊಂಡ ಶಕ್ತಿ ಆಶ್ರಮದ ವ್ಯವಸ್ಥಾಪಕರಾದ ಸತೀಶ್ ರವರಿಗೆ ಮತ್ತು ಆಶ್ರಮದ ಸಿಬ್ಬಂದಿಗಳ ಕರವೇ ಕಾರ್ಯಕರ್ತರಿಂದ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇವೆ . ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜಾ ಮತ್ತು ಕರವೇ ಕಾರ್ಯಕರ್ತರ ರಾಮನಳ್ಳಿ ರಕ್ಷಿತ್ ಮತ್ತು ಕೊಡ್ಲಿಪೇಟೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶೇಖರ್ ಮತ್ತು ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಸದಸ್ಯರಾದ ಹನೀಫ್ ಮತ್ತು ಆಸಿಫ್ ಉಪಸ್ಥಿತರಿದ್ದರು.