Wednesday, January 22, 2025
ಸುದ್ದಿ

ಕೊರೊನಾ ಹೊಡೆತದಿಂದಾಗಿ ಮಂಗಳೂರು ಮೂಲದ ಉದ್ಯಮಿ ವಿಜಯಪುರದಲ್ಲಿ ನೇಣು ಬಿಗಿದು ಆತ್ಮಹತ್ಯೆ-ಕಹಳೆ ನ್ಯೂಸ್

ಮಂಗಳೂರು : ಮಂಗಳೂರು ಮೂಲದ ಉದ್ಯಮಿ ಗಣೇಶ್ ವಿಜಯಪುರದ ಇಂಡಿಯಲ್ಲಿ ಅಮರ್ ಹೋಟೆಲ್ ನಡೆಸುತ್ತಿದ್ದು, ಕೊರೊನಾ ಮಹಾಮಾರಿಯಿಂದ ಹೋಟೆಲ್ ಉದ್ಯಮದಲ್ಲಿ ಭಾರಿ ನಷ್ಟ ಅನುಭವಿಸಿದ ಕಾರಣ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೋಟೆಲ್ ನಡೆಸಲು 30 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು ಎನ್ನಲಾಗಿತ್ತು. ಹೀಗಾಗಿ ಸಾಲದ ಬಡ್ಡಿ ಕಟ್ಟಲು ಮೃತ ಗಣೇಶ್ ಪರದಾಡುತ್ತಿದ್ದು, ಇದೇ ವೇಳೆ ಹೋಟೆಲ್ ಕೂಡ ಸರಿಯಾಗಿ ನಡೆಯದೆ ಚಿಂತೆಗೀಡಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಇಂಡಿ ನಗರ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು