Wednesday, January 22, 2025
ಸುದ್ದಿ

ಕಡಬದ ವಿದ್ಯಾರ್ಥಿ ಪಾಂಡೇಶ್ವರದಲ್ಲಿರುವ ತನ್ನ ರೂಮ್‍ನಲ್ಲಿ ನೇಣು ಬಿಗಿದು ಆತ್ಮಹತ್ಯೆ-ಕಹಳೆ ನ್ಯೂಸ್

ಮಂಗಳೂರು : ಮಂಗಳೂರಿನಲ್ಲಿ ಮಾರ್ಚ್ 31 ರಂದು 20 ವರ್ಷದ ಕಡಬದ ವಿದ್ಯಾರ್ಥಿಯೋರ್ವ ಪಾಂಡೇಶ್ವರದಲ್ಲಿರುವ ತನ್ನ ರೂಮ್‍ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತನನ್ನು ಕಡಬ ತಾಲೂಕಿನ ಇಚಿಲಂಪಾಡಿ ನಿವಾಸಿ 20 ವರ್ಷದ ರೀನು ವರ್ಗೀಸ್ ಎಂದು ಗುರುತಿಸಲಾಗಿದೆ. ರೀನು ನಗರದ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಬಿಎಂ ವಿದ್ಯಾಭ್ಯಾಸ ಮಾಡುತ್ತಿದ್ದು, ಪಾಂಡೇಶ್ವರದಲ್ಲಿ ಒಂದು ರೂಮ್‍ನಲ್ಲಿ ತಂಗಿದ್ದ. ಇತ ತಂಗಿದ್ದ ಕೋಣೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಇನ್ನು ಇನ್ನು ರೀನು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನೆಂದು ಇನ್ನಷ್ಟೇ ತಿಳಿದುಬರಬೇಕಿದೆ. ಈ ಕುರಿತು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪಾಂಡೇಶ್ವರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು